ಎಸ್​​ಎಸ್​ಎಲ್​​ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್​​ 22ರಿಂದ ಪರೀಕ್ಷೆ ಆರಂಭ

SSLC Exam 1st Final Timetable: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026-27ನೇ ಸಾಲಿನ SSLC ಪರೀಕ್ಷೆ-01ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪರೀಕ್ಷೆಗಳು ಮಾರ್ಚ್ 22 ರಿಂದ ಆರಂಭವಾಗಿ 30ರಂದು ಮುಕ್ತಾಯಗೊಳ್ಳಲಿವೆ. ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಸ್​​ಎಸ್​ಎಲ್​​ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್​​ 22ರಿಂದ ಪರೀಕ್ಷೆ ಆರಂಭ
ಪ್ರಾತಿನಿಧಿಕ ಚಿತ್ರ
Image Credit source: Getty images

Updated on: Oct 29, 2026 | 9:30 PM

ಬೆಂಗಳೂರು, ಅಕ್ಟೋಬರ್​​ 29: 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್​​​ಎಸ್​​ಎಲ್​​ಸಿ ಪರೀಕ್ಷೆ-01ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಎಸ್​​​ಎಸ್​​ಎಲ್​​ಸಿ ಪರೀಕ್ಷೆ-01 ಮಾರ್ಚ್​​​ 22ರಿಂದ ಆರಂಭವಾಗಲಿದೆ. ಇತ್ತೀಚೆಗೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿ ಕುರಿತಾಗಿ ಆಕ್ಷೇಪಣೆಗಳನ್ನ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಮಂಡಳಿ ಅಂತಿಮವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಸ್​​​ಎಸ್​​ಎಲ್​​ಸಿ ಪರೀಕ್ಷೆ-01ರ ಅಂತಿಮ ವೇಳಾಪಟ್ಟಿ

  • ಮಾರ್ಚ್​​ 22ರಂದು- ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್​ ಸೇರಿದಂತೆ ಪ್ರಥಮ ಭಾಷೆ ಪರೀಕ್ಷೆ
  • ಮಾರ್ಚ್​​​​ 23 ಮತ್ತು 24ರಂದು ಪರೀಕ್ಷೆ ಇರುವುದಿಲ್ಲ
  • ಮಾರ್ಚ್​​ 25ರಂದು- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
  • ಮಾರ್ಚ್​​ 26ರಂದು- ಗುಡ್​ ಫ್ರೈಡೆ ಹಿನ್ನೆಲೆ ಪರೀಕ್ಷೆ ಇರುವುದಿಲ್ಲ

ಇದನ್ನೂ ಓದಿ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಅಪಾರ್ ಐಡಿ ಇಲ್ಲದಿದ್ದರೂ PEN ಸಂಖ್ಯೆ ಕಡ್ಡಾಯ: ಏನಿದು ಅಪಾರ್, ಪೆನ್​​​?

  • ಮಾರ್ಚ್​​​ 27ರಂದು- ದ್ವಿತೀಯ ಭಾಷೆ: ಇಂಗ್ಲಿಷ್ ಮತ್ತು ಕನ್ನಡ
  • ಮಾರ್ಚ್ 30ರಂದು- ಗಣಿತ, ಸಮಾಜಶಾಸ್ತ್ರ
  • ಮಾರ್ಚ್ 31ರಂದು- ಪರೀಕ್ಷೆ ಇರುವುದಿಲ್ಲ​
  • ಏಪ್ರಿಲ್​​ 1ರಂದು- ಪರೀಕ್ಷೆ ಇರುವುದಿಲ್ಲ
  • ಏಪ್ರಿಲ್​​ 2ರಂದು- ತೃತೀಯ ಭಾಷೆ
  • ಏಪ್ರಿಲ್​​ 3ರಂದು- ಅರ್ಥಶಾಸ್ತ್ರ ಮತ್ತು ಜೆಟಿಎಸ್​​ ವಿಷಯಗಳ ಪರೀಕ್ಷೆ
  • ಏಪ್ರಿಲ್​​ 05ರಂದು- ಸಮಾಜ ವಿಜ್ಞಾನ

ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ! ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ಪ್ರಥಮ ಭಾಷೆ, ಕೋರ್‌ ವಿಷಯಗಳು ಹಾಗೂ ಜೆಟಿಎಸ್‌ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ. ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಯ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಎನ್‌ಎಸ್‌ಕ್ಯೂಎಫ್‌ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:15ರವರೆಗೆ ನಡೆಯಲಿವೆ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಗಳನ್ನು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿವೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:14 pm, Thu, 29 October 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us