Karnataka SSLC Results 2025 Highlights: ಎಸ್‌ಎಸ್‌ಎಲ್‌ಸಿ ಪರೀಕ್ಷೆ 62.14% ಫಲಿತಾಂಶ, ಮುಖ್ಯಾಂಶಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025 ಲೈವ್​: 2024-25ನೇ ಸಾಲಿನ ಎಸ್​​ಎಸ್​ಎಲ್​​ಸಿ ಫಲಿತಾಂಶ ಪ್ರಕಟವಾಗುತ್ತಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸುತ್ತಿದ್ದಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಫಲಿತಾಂಶದ ಲೈವ್ ಅಪ್​ಡೇಟ್ ಇಲ್ಲಿದೆ.

Karnataka SSLC Results 2025 Highlights: ಎಸ್‌ಎಸ್‌ಎಲ್‌ಸಿ ಪರೀಕ್ಷೆ 62.14% ಫಲಿತಾಂಶ, ಮುಖ್ಯಾಂಶಗಳು
ಎಸ್​ಎಸ್​ಎಲ್​ಸಿ ಫಲಿತಾಂಶ ಲೈವ್ ಅಪ್​ಡೇಟ್
Updated By: ವಿವೇಕ ಬಿರಾದಾರ

Updated on: May 02, 2025 | 4:06 PM

Karnataka KSEAB Class 10 SSLC Results 2025 LIVE:

ಬೆಂಗಳೂರು, ಮೇ 2: 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವನ್ನು (Karnataka SSLC Resutl) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KEA) ಇಂದು ಪ್ರಕಟಿಸಿದೆ. ಬೆಳಗ್ಗೆ 11.30ಕ್ಕೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ಶೇ. 62.14 ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಮಧ್ಯಾಹ್ನ 12.30ರ ನಂತರ ಇಲಾಖೆಯ ಅಧಿಕೃತ ವೆಬ್​ಸೈಟ್​​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸಂಬಂಧಿತ ಅಪ್​​ಡೇಟ್​​ಗಳು ಇಲ್ಲಿ ದೊರೆಯಲಿವೆ.

LIVE NEWS & UPDATES

The liveblog has ended.
  • 02 May 2025 04:05 PM (IST)

    SSLC Result 2025 Live: ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪ್​​

    ತುಮಕೂರು‌ ಹಾಗೂ ಮಧುಗಿರಿ ಶೈಕ್ಷಣಿಕ‌ ಜಿಲ್ಲೆಯಿಂದ ತಲಾ ಒಬ್ಬರು ರಾಜ್ಯಕ್ಕೆ‌ ಪ್ರಥಮ ಸ್ಥಾನ ಪಡೆದಿದ್ದಾರೆ. ತುಮಕೂರಿನ ಚೇತನ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ ಮಹಮದ್ ಮನ್ಸೂರ್ ಅದಿಲ್ ರಾಜ್ಯಕ್ಕೆ 8 ನೇ ರ್ಯಾಂಕ್ ಬಂದಿದ್ದಾರೆ. ಹಾಗೇ ಮಧುಗಿರಿಯ ಚಿರಾಕ್ ಪಬ್ಲಿಕ್‌ ಶಾಲೆಯ ಯಶ್ವಿತಾ ರೆಡ್ಡಿ ಕೆ ಬಿ ರಾಜ್ಯ ಟಾಪರ್ ಲಿಸ್ಟ್​ನಲ್ಲಿ 21 ನೇ ಸ್ಥಾನ ಪಡೆದಿದ್ದಾರೆ.

  • 02 May 2025 01:52 PM (IST)

    SSLC Result 2025 Live: ದಕ್ಷಿಣ ಕನ್ನಡ ಫಸ್ಟ್: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ದಿನೇಶ್ ಗುಂಡೂರಾವ್

    ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಸ ಹಂಚಿಕೊಂಡರು. ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದರು.

  • 02 May 2025 12:49 PM (IST)

    SSLC Result 2025 Live: ಬಾಲಕರು, ಬಾಲಕಿಯರ ಉತ್ತೀರ್ಣ ಪ್ರಮಾಣ

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 7,90,890 ಮಕ್ಕಳ ಪೈಕಿ 5,23,075 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 58.07ರಷ್ಟು ಬಾಲಕರು ಪಾಸಾಗಿದ್ದಾರೆ. ಹಾಜರಾಗಿದ್ದ 3,90,311 ಬಾಲಕರ ಪೈಕಿ 2,26,637 ಬಾಲಕರು ಉತ್ತೀರ್ಣರಾಗಿದ್ದಾರೆ. ಶೇಕಡಾ 74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 4,00,579 ಬಾಲಕಿಯರ ಪೈಕಿ 2,96,438 ಬಾಲಕಿಯರು ಪಾಸಾಗಿದ್ದಾರೆ.

  • 02 May 2025 12:42 PM (IST)

    SSLC Result 2025 Live: ನಗರ ಪ್ರದೇಶದಲ್ಲಿ ಶೇ 67.05 ಫಲಿತಾಂಶ

    ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರ ಪ್ರದೇಶದ ಶೇಕಡಾ 67.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ಶೇಕಡಾ 65.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

  • 02 May 2025 12:36 PM (IST)

    SSLC Result 2025 Live: ಸರ್ಕಾರಿ ಶಾಲೆಗಳಿಗೆ ಶೇ 62.7 ಫಲಿತಾಂಶ

    2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಶೇಕಡಾ 62.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಶೇಕಡಾ 58.97ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಶೇ 75.59ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

  • 02 May 2025 12:33 PM (IST)

    SSLC Result 2025 Live: ಎಸ್​ಎಸ್​ಎಲ್​ಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ

    ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ 83.19) ದೊರೆತಿದ್ದರೆ, ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ 82.29) ಹಾಗೂ ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ 82.21) ದೊರೆತಿದೆ.

  • 02 May 2025 12:31 PM (IST)

    SSLC Result 2025 Live: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ 62.34ರಷ್ಟು ಫಲಿತಾಂಶ ಬಂದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ 91.12) ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ (ಶೇ 42.43) ದಲ್ಲಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ 89.96) ಪಡೆದಿದೆ.

  • 02 May 2025 12:29 PM (IST)

    SSLC Result 2025 Live: 22 ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದಿದ್ದಾರೆ.

  • 02 May 2025 12:22 PM (IST)

    SSLC Result 2025 Live: ಬಾಲಕಿಯರದ್ದು ಮೇಲುಗೈ

    2024-25ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಂಡು ಮಕ್ಕಳ ತೇರ್ಗಡೆ ಪ್ರಮಾಣ ಶೇ. 58.07, ಹೆಣ್ಮಕ್ಕಳದ್ದು ಶೇ. 74 ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

  • 02 May 2025 12:20 PM (IST)

    SSLC Result 2025 Live: 327 ವಿದ್ಯಾರ್ಥಿಗಳಿಗೆ 620ಕ್ಕೂ ಹೆಚ್ಚು ಅಂಕ

    ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 62.34% ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಕಳೆದ ಬಾರಿ ಒಬ್ಬರು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಬಾರಿ 327 ಮಕ್ಕಳು 620ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

  • 02 May 2025 12:12 PM (IST)

    SSLC Result 2025 Live: ಎಸ್​​ಎಸ್​​ಎಲ್​​ಸಿ ಫಲಿತಾಂಶ ಪ್ರಕಟ: 22 ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕ

    2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ. 62.34 ರಿಸಲ್ಟ್ ಬಂದಿದೆ. ಎಂದಿನಂತೆ ಬಾಲಕರಿಗಿಂತ ಬಾಲಕಿಯರು ಹೆಚ್ಚು ಪ್ರತಿಶತದಷ್ಟು ಫಲಿತಾಂಶ ಪಡೆದಿದ್ದಾರೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

  • 02 May 2025 12:08 PM (IST)

    SSLC Result 2025 Live: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕರಾವಳಿ, ಮಲೆನಾಡು ಜಿಲ್ಲೆಗಳೇ ಮೇಲುಗೈ

    2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ (ಶೇ.91.12), ಉಡುಪಿ ಜಿಲ್ಲೆ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನ ಪಡೆದಿವೆ.

  • 02 May 2025 12:01 PM (IST)

    SSLC Result 2025 Live: ಎಸ್‌ಎಸ್‌ಎಲ್‌ಸಿ ಪರೀಕ್ಷೆ 62.14% ಫಲಿತಾಂಶ

    2024-25ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 62.14% ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

  • 02 May 2025 11:49 AM (IST)

    SSLC Result 2025 Live: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆರಂಭ

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಶುರುವಾಗಿದ್ದು, ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗುತ್ತಿದೆ.

  • 02 May 2025 11:31 AM (IST)

    SSLC Result 2025 Live: ಕೆಲವೇ ಕ್ಷಣಗಳಲ್ಲಿ 8.96 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶ

    8.96 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಈ ಬಾರಿ 4,61563 ಹುಡುಗರು 4,34,884 ಹುಡಗಿಯರು ಪರೀಕ್ಷೆಗೆ ದಾಖಲಾಗಿದ್ದರು.

  • 02 May 2025 11:27 AM (IST)

    SSLC Result 2025 Live: 240 ಕೇಂದ್ರಗಳಲ್ಲಿ ನಡೆದಿದ್ದ ಮೌಲ್ಯಮಾಪನ

    ಈ ಬಾರಿ ಎಸ್​ಎಸ್​​ಎಲ್​ಸಿ ಪರೀಕ್ಷೆಯ ಮೌಲ್ಯಮಾಪನ 240 ಮೌಲ್ಯಮಾಪನ ಕೇಂದ್ರಗಳಲ್ಲಿ 65,000 ಮೌಲ್ಯಮಾಪಕರಿಂದ ನಡೆದಿತ್ತು.

  • 02 May 2025 11:20 AM (IST)

    SSLC Result 2025 Live: ಕೆಲವೇ ಕ್ಷಣಗಳಲ್ಲಿ ಮಧು ಬಂಗಾರಪ್ಪ ಸುದ್ದಿಗೋಷ್ಠಿ

    ಇನ್ನು ಕೆಲವೇ ಕ್ಷಣಗಳಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದು, ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಅದಾದ ನಂತರ, 12.30 ರ ಬಳಿಕ ಇಲಾಖೆಯ ಅಧಿಕೃತ ವೆಬ್​ಸೈಟ್​​ಗಳಲ್ಲಿ ಫಲಿತಾಂಶ ಹಾಗೂ ಅಂಕ ಪಟ್ಟಿ ವೀಕ್ಷಿಸಬಹುದಾಗಿದೆ.

  • 02 May 2025 10:03 AM (IST)

    SSLC Result 2025 Live: ಆನ್​ಲೈನ್​ನಲ್ಲಿ ಫಲಿತಾಂಶ ವೀಕ್ಷಿಸಲು ಏನೆಲ್ಲ ದಾಖಲೆ ಬೇಕು?

    ಎಸ್​ಎಸ್​​ಎಲ್​ಸಿ ಫಲಿತಾಂಶ ಆನ್​ಲೈನ್​ನಲ್ಲಿ ಪ್ರಕಟವಾದ ನಂತರ, ಅಧಿಕೃತ ವೆಬ್​ಸೈಟ್ ಮೂಲಕ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ವಿವರ ಭರ್ತಿ ಮಾಡಿ ವಿದ್ಯಾರ್ಥಿಗಳು ಅಂಕಗಳನ್ನು ಪರಿಶೀಲಿಸಬಹುದಾಗಿದೆ.

  • 02 May 2025 10:01 AM (IST)

    SSLC Result 2025 Live: ಫಲಿತಾಂಶ ಆನ್​ಲೈನ್​ನಲ್ಲಿ ನೋಡುವುದು ಹೇಗೆ?

    ವಿದ್ಯಾರ್ಥಿಗಳು ಫಲಿತಾಂಶಗಳನ್ನು 12.30 ರ ನಂತರ kseab.karnataka.gov.in ಅಥವಾ karresults.nic.in ನಲ್ಲಿ ಪರಿಶೀಲಿಸಬಹುದು.

  • 02 May 2025 08:51 AM (IST)

    SSLC Result 2025 Live: ಎರಡು ದಿನ ಹಿಂದೆ ಪ್ರಕಟವಾಗಿದ್ದ ಐಸಿಎಸ್​ಇ 10ನೇ ತರಗತಿ ಫಲಿತಾಂಶ

    ಎರಡು ದಿನಗಳ ಹಿಂದಷ್ಟೇ ಐಸಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಇದೀಗ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗುತ್ತಿದೆ.

  • 02 May 2025 08:20 AM (IST)

    SSLC Result 2025 Live: 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ

    ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದ್ದು, 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರ ಫಲಿತಾಂಶ ಇಂದು ಗೊತ್ತಾಗಲಿದೆ.

  • 02 May 2025 08:18 AM (IST)

    SSLC Result 2025 Live: ಆನ್​​​ಲೈನ್​​ನಲ್ಲಿ ಫಲಿತಾಂಶ ನೋಡುವುದು ಹೇಗೆ?

    ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಮಧ್ಯಾಹ್ನ 12.30ರ ನಂತರ  ಆನ್​​ಲೈನ್​ನಲ್ಲಿಯೂ ವೀಕ್ಷಿಸಬಹುದಾಗಿದೆ. ಆನ್​ಲೈನ್​ನಲ್ಲಿ ನೋಡುವುದು ಹೇಗೆಂದು ತಿಳಿಯಲು ಈ ಇಲ್ಲಿ ಕ್ಲಿಕ್ ಮಾಡಿ.

  • 02 May 2025 08:16 AM (IST)

    SSLC Result 2025 Live: ವೆಬ್​​ಸೈಟ್​ನಲ್ಲಿ ಫಲಿತಾಂಶ ಸಿಗೋದು ಎಷ್ಟೊತ್ತಿಗೆ?

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

Published On - 8:09 am, Fri, 2 May 25