ಪ್ರಧಾನಿ ನರೇಂದ್ರ ಮೋದಿ ಇಂದು 7ನೇ ಆವೃತ್ತಿಯ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರವನ್ನು ಬೋಧಿಸಲಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸುವುದು, ಉತ್ತಮ ಅಭ್ಯಾಸ, ಪಠ್ಯವನ್ನು ನೆನಪಿಟ್ಟುಕೊಳ್ಳುವ ಪರಿ ಹೀಗೆ ಯಶಸ್ಸಿನ ಮಂತ್ರವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಧಾನಿ ಮೋದಿ 2018ರಲ್ಲಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಆರಂಭಿಸಿದರು.
2018ರಲ್ಲಿ ಏನು ಹೇಳಿದ್ದರು?
2 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಮೋದಿ, ಆತಂಕ, ಏಕಾಗ್ರತೆ. ಒತ್ತಡ, ಪೋಷಕರ ಆಕಾಂಕ್ಷೆಗಳು ಮತ್ತು ಶಿಕ್ಷಕರ ಪಾತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು. ನಮ್ಮ ಗುರುಗಳು ನಮ್ಮಲ್ಲಿ ಬೆಳೆಸಿದ ಮೌಲ್ಯದಿಂದಾಗಿ ನನ್ನೊಳಗಿನ ವಿದ್ಯಾರ್ಥಿ ಇನ್ನೂ ಜೀವಂತವಾಗಿದ್ದಾನೆ ಎಂದು ಹೇಳಿದ್ದರು.
2019ರ ಪರೀಕ್ಷಾ ಪೆ ಚರ್ಚಾ
ಒತ್ತಡವು ಪರಿಸ್ಥಿತಿಯನ್ನು ಹದಗೆಡಿಸುತ್ತದೆ, ಮಗುವಿನ ಮೇಲೆ ಪರೀಕ್ಷೆಯ ಒತ್ತಡವನ್ನು ಹೇರಬೇಡಿ. ಪಾಲಕರು ಕೂಡ ಮಗುವಿನ ಮೇಲೆ ಅನಗತ್ಯ ಒತ್ತಡ ಹೇರದಂತೆ ನೋಡಿಕೊಳ್ಳಬೇಕು. ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದಿದ್ದರು.
ಮತ್ತಷ್ಟು ಓದಿ: ಪರೀಕ್ಷಾ ಪೆ ಚರ್ಚಾ 2024 ನಾಳೆ ನಡೆಯಲಿದೆ: ಸಮಯ, ಎಲ್ಲಿ ವೀಕ್ಷಿಸಬೇಕು ಮತ್ತು ಇತರ ವಿವರಗಳನ್ನು ಇಲ್ಲಿ ಪರಿಶೀಲಿಸಿ
2020ರ ಮಂತ್ರ
ಮೋದಿ ಅವರು 2020 ರಲ್ಲಿ, 2001 ರಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ನೆನಪಿದೆಯೇ? ನಮ್ಮ ತಂಡ ಹಿನ್ನಡೆ ಎದುರಿಸುತ್ತಿದ್ದು, ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದರೆ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಪಂದ್ಯವನ್ನು ಹೇಗೆ ತಿರುಗಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ಸಕಾರಾತ್ಮಕ ಚಿಂತನೆ ಮತ್ತು ಸ್ಫೂರ್ತಿಯ ಶಕ್ತಿ. ನೀವೂ ಇದನ್ನು ಅಳವಡಿಸಿಕೊಳ್ಳಬೇಕು ಎಂದಿದ್ದರು.
2021ರ ಪರೀಕ್ಷಾ ಪೆ ಚರ್ಚಾ
ಪರೀಕ್ಷೆಗೆ ಓದುವಾಗ ಮೊದಲು ಕಷ್ಟಕರವಾದ ವಿಷಯವನ್ನು ಓದಬೇಕು, ಬಳಿಕ ಸುಲಭವಾದ ವಿಷಯಗಳನ್ನು ಓದಬೇಕು, ವಿದ್ಯಾರ್ಥಿಗಳು ತಮ್ಮ ಜ್ಞಾಪಕಶಕ್ತಿಯನ್ನು ಸುಧಾರಿಸಲು ತಾವು ಓದುತ್ತಿರುವುದನ್ನು ತಿಳಿಸಲು ಕಲಿಯಬೇಕು. ವಿದ್ಯಾರ್ಥಿಗಳು ವಿಷಯವನ್ನು ಓದುವಾಗ ಅದನ್ನು ಆಂತರಿಕವಾಗಿ ಅರ್ಥಮಾಡಿಕೊಳ್ಳಬೇಕು ಎಂದಿದ್ದರು.
2022ರ ಪರೀಕ್ಷಾ ಪೆ ಚರ್ಚಾ
ಪರೀಕ್ಷೆಯನ್ನು ಹಬ್ಬವನ್ನಾಗಿ ಮಾಡಿಕೊಂಡರೆ ಅದು ಲವಲವಿಕೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದ ಪ್ರತಿಯೊಂದು ವರ್ಗವೂ ಹೃತ್ಪೂರ್ವಕವಾಗಿ ಸ್ವಾಗತಿಸಿದೆ.
ನೀವು ಯಾಕೆ ಇಷ್ಟು ನರ್ವಸ್ ಆಗಿದ್ದೀರಿ? ನೀವು ಮೊದಲ ಬಾರಿಗೆ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ಈಗ ನೀವು ಕೊನೆಯ ನಿಲ್ದಾಣದ ಹತ್ತಿರ ಹೋಗುತ್ತಿದ್ದೀರಿ. ನೀವು ಇಡೀ ಸಾಗರವನ್ನು ದಾಟಿದ್ದೀರಿ, ಈಗ ನೀವು ದಡದ ಬಳಿ ಬಂದಾಗ, ಮುಳುಗುವ ಭಯ ಏಕೆ ಎಂದು ಹೇಳಿದ್ದಾರೆ.
2023ರ ಪರೀಕ್ಷಾ ಪೆ ಚರ್ಚಾ
2023ರ ಪರೀಕ್ಷಾ ಪೆ ಚರ್ಚಾ ಜನವರಿ 27ರಂದು ನಡೆದಿತ್ತು, ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಬುಕ್ ಟ್ರಸ್ಟ್ (NBT) ಭಾರತವು 11 ಭಾರತೀಯ ಭಾಷೆಗಳಲ್ಲಿ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕದ ಅನುವಾದಗಳನ್ನು ಪ್ರಕಟಿಸಿತ್ತು, ಅಂದರೆ ಅಸಾಮಿಯಾ, ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು. ನೀವು ಕಾಪಿ ಹೊಡೆಯುವಾಗ ಉಪಯೋಗಿಸುವ ಕ್ರಿಯೇಟಿವಿಟಿಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿ ಎಂದು ಮೋದಿ ಕಿವಿಮಾತು ಹೇಳಿದ್ದರು.
ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ, 2020 ಅನ್ನು ಪಠ್ಯಕ್ರಮ, ಪರೀಕ್ಷಾ ಸುಧಾರಣೆಗಳು, ವಿದ್ಯಾರ್ಥಿ ಸ್ನೇಹಿ ತರಗತಿಗಳು, ಕಲೆಯ ಸಮಗ್ರ ಕಲಿಕೆ, ಆಟಿಕೆ ಆಧಾರಿತ ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಹಲವಾರು ಹೊಸ ಉಪಕ್ರಮಗಳೊಂದಿಗೆ ಹೊರತಂದಿದೆ. ಪರೀಕ್ಷಾ ಪೆ ಚರ್ಚಾ ಕೂಡ ಸುಧಾರಣೆಗಳ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಸಂತೋಷದಿಂದ ಎದುರಿಸಲು ಸಹಾಯ ಮಾಡುವುದು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ