AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಾದ್ಯಂತ ಗುರುತಿಸಲ್ಪಟ್ಟ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಈಗ ವಿದ್ಯಾರ್ಥಿವೇತನದೊಂದಿಗೆ ಭಾರತದಲ್ಲಿ ಲಭ್ಯ

ಆರೋಗ್ಯ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು, ಉದ್ಯೋಗ ಸ್ಥಿರತೆ ಮತ್ತು ಒಂದೊಳ್ಳೆ ವೃತ್ತಿ ನೀಡುವ ಕೆಲವು ವಲಯಗಳಲ್ಲಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಕೂಡ ಒಂದು. ಈ ಕೋರ್ಸ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ನೀಡುವ ಅನೇಕ ಸಂಸ್ಥೆಗಳು ಭಾರತದಲ್ಲಿದೆ. ಆಸ್ಪತ್ರೆ ಆಡಳಿತದಲ್ಲಿ ಬದುಕು ಕಟ್ಟಿಕೊಂಡು ವೃತ್ತಿಜೀವನ ಆರಂಭ ಮಾಡಲು ಬಯಸುವವರಿಗೆ, ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್‌ಸ್ಟಿಟ್ಯೂಟ್ ಅಡಿಯಲ್ಲಿ IACET ಮಾನ್ಯತೆ ಹೊಂದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆಯಾದ ಐಬಿಸ್ ನೀಡುವ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಒಂದು ಪ್ರಮುಖ ಆಯ್ಕೆಯಾಗಿದೆ.

ವಿಶ್ವಾದ್ಯಂತ ಗುರುತಿಸಲ್ಪಟ್ಟ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಈಗ ವಿದ್ಯಾರ್ಥಿವೇತನದೊಂದಿಗೆ ಭಾರತದಲ್ಲಿ ಲಭ್ಯ
Hospital Administration Course
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 31, 2025 | 11:33 AM

Share

ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಆರೋಗ್ಯ ಕ್ಷೇತ್ರವು (Health sector) ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಅದರಲ್ಲಿಯೂ ವಿಶೇಷವಾಗಿ ಯುವ ಪೀಳಿಗೆಗೆ, ಇದು ಹಲವಾರು ಉದ್ಯೋಗಾವಕಾಶಗಳೊಂದಿಗೆ ಸುರಕ್ಷಿತ ಮತ್ತು ಭರವಸೆಯ ವೃತ್ತಿಜೀವನವನ್ನು ನೀಡುತ್ತದೆ. ಹೆಚ್ಚಿನ ಸಂಬಳ, ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗ ಸ್ಥಿರತೆ ಮತ್ತು ಒಂದೊಳ್ಳೆ ವೃತ್ತಿ ಈ ಮೂರನ್ನೂ ನೀಡುವ ಕೆಲವೇ ಕೆಲವು ವಲಯಗಳಲ್ಲಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ (Hospital management course) ಕೂಡ ಒಂದಾಗಿದೆ. ಭಾರತದಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಸ್ಪತ್ರೆ ಬ್ರ್ಯಾಂಡ್‌ಗಳ ಆಗಮಿಕೆ ಈ ವಲಯದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್​​​ಗಳನ್ನು ನೀಡುವ ಅನೇಕ ಸಂಸ್ಥೆಗಳು ಭಾರತದಲ್ಲಿದೆ. ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್​​​ನಲ್ಲಿ ಬದುಕು ಕಟ್ಟಿಕೊಂಡು ವೃತ್ತಿಜೀವನ ಆರಂಭ ಮಾಡಲು ಬಯಸುವವರಿಗೆ, ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್‌ಸ್ಟಿಟ್ಯೂಟ್ (ANSI) ಅಡಿಯಲ್ಲಿ IACET ಮಾನ್ಯತೆ ಹೊಂದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆಯಾದ ಐಬಿಸ್ ನೀಡುವ ಆಸ್ಪತ್ರೆ ಆಡಳಿತ ತರಬೇತಿ (Courses) ಒಂದು ಪ್ರಮುಖ ಆಯ್ಕೆಯಾಗಿದೆ. ಯುಕೆ ಅಥವಾ ಯುಎಸ್ಎ (USA) ನಲ್ಲಿ ಇದೇ ರೀತಿಯ ಪ್ರೀಮಿಯಂ ಕೋರ್ಸ್‌ಗಳು ವರ್ಷಕ್ಕೆ ಲಕ್ಷ ವೆಚ್ಚವಾಗಿದ್ದರೂ, ಐಬಿಸ್ ಭಾರತದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕೋರ್ಸ್ ಅನ್ನು ಕೈಗೆಟುಕುವ ದರದಲ್ಲಿ ನೀಡುತ್ತದೆ.

ವಿಶೇಷತೆಗಳೇನು?

ಪಿಯುಸಿ (12 ನೇ ತರಗತಿ) ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಡಿಪ್ಲೊಮಾ ದಾಖಲಾಗಬಹುದು, ಜೊತೆಗೆ ಪದವೀಧರರು ಐಬಿಸ್ ಕ್ಯಾಂಪಸ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಪಿಜಿ ಡಿಪ್ಲೊಮಾವನ್ನು ಮುಂದುವರಿಸಬಹುದು. ಈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಕೋರ್ಸ್‌ನೊಂದಿಗೆ, ವಿದ್ಯಾರ್ಥಿಗಳು ಕಡಿಮೆ ಸಮಯದಲ್ಲಿ ಆರೋಗ್ಯ ನಿರ್ವಹಣೆಯಲ್ಲಿ ಯಶಸ್ವಿಗೊಂಡು ಜಾಗತಿಕಕ ಮಟ್ಟದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಈ ಕೋರ್ಸ್ ಐಬಿಸ್ ಕೃತಕ ಬುದ್ಧಿಮತ್ತೆ (AI) ಪರಿಕರಗಳು ಮತ್ತು ಉತ್ತಮ ಗುಣಮಟ್ಟದ ತರಬೇತಿಯೊಂದಿಗೆ ಸಂಯೋಜಿಸಲ್ಪಟ್ಟ ಅತ್ಯಾಧುನಿಕ ಪಠ್ಯಕ್ರಮವನ್ನು ಒದಗಿಸುತ್ತದೆ. ಮಾತ್ರವಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮಾಣೀಕರಣಗಳು, ವರ್ಚುವಲ್ ರಿಯಾಲಿಟಿ ತರಗತಿ ಕೊಠಡಿಗಳು, ಲೈವ್ ತರಬೇತಿ, ಪ್ರಾಜೆಕ್ಟ್ ವರ್ಕ್ ಮತ್ತು ಇಂಟರ್ನ್‌ಶಿಪ್‌ಗಳನ್ನು ಒಳಗೊಂಡಿದೆ. ಮಾತ್ರವಲ್ಲ ಪ್ರಾಯೋಗಿಕ ಅನುಭವದ ಮೇಲೆ ಉತ್ತಮ ಗುಣಮಟ್ಟದ ಅನುಭವವನ್ನು ನೀಡುತ್ತದೆ.

ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಐಬಿಸ್ ಬದ್ಧವಾಗಿದೆ. ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಐಬಿಸ್, ಬೆಂಗಳೂರು, ದೆಹಲಿ ಸೇರಿದಂತೆ ಕೇರಳದ ತ್ರಿಶೂರ್, ಕೋಯಿಕ್ಕೋಡ್, ಕೊಚ್ಚಿ, ಕೊಟ್ಟಾಯಂ, ಪೆರಿಂಥಲ್ಮನ್ನಾ ಮತ್ತು ತಿರುವನಂತಪುರ ನಂತಹ ಪ್ರಮುಖ ನಗರಗಳಲ್ಲಿ ಕ್ಯಾಂಪಸ್‌ಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಬರಬಹುದು ಅಥವಾ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗುವ ಅನುಕೂಲತೆಯನ್ನು ಸಹ ನೀಡಿದೆ.

ಹೊಸ ದೃಷ್ಟಿಕೋನದ ಕಾರ್ಯಕ್ರಮಗಳು

ಪ್ರತಿ ವರ್ಷ, ಐಬಿಸ್ ಭಾರತ ಮತ್ತು ವಿದೇಶಗಳಾದ್ಯಂತ ಸುಮಾರು 500 ಪ್ರಮುಖ ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಹೊಸ ದೃಷ್ಟಿಕೋನದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸೂಪರ್- ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಪಡೆಯಲು ನೆರವಾಗಿದೆ. ಪ್ರತಿ ವರ್ಷ, ಸುಮಾರು 1,000 ವಿದ್ಯಾರ್ಥಿಗಳು ಐಬಿಸ್‌ನಲ್ಲಿ ಆಸ್ಪತ್ರೆ ಆಡಳಿತದಲ್ಲಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಹಾಗೂ ಸುಮಾರು 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಬಿಸ್‌ನ ಬೆಂಬಲದೊಂದಿಗೆ ಜಾಗತಿಕವಾಗಿ ತಮ್ಮ ಕನಸಿನ ವೃತ್ತಿಜೀವನವನ್ನು ಪಡೆದುಕೊಂಡಿದ್ದಾರೆ.

ಪ್ರತಿಷ್ಠಿತ ಮನ್ನಣೆ

ಐಬಿಸ್ ಅಲ್ಪಾವಧಿಯಲ್ಲಿಯೇ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಭಾರತ ಸರ್ಕಾರದ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಸಚಿವಾಲಯದಿಂದ ಅತ್ಯಾಧುನಿಕ ಶಿಕ್ಷಣ ಪೂರೈಕೆದಾರ ಪ್ರಶಸ್ತಿಯನ್ನು ಪಡೆದ ಕೇರಳದ ಏಕೈಕ ಸಂಸ್ಥೆಯಾಗಿದೆ. ಈ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟ ಭಾರತದ ಕೇವಲ 14 ಸಂಸ್ಥೆಗಳಲ್ಲಿ ಇದೂ ಸಹ ಒಂದಾಗಿದೆ. ಐಬಿಸ್ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್, ಟೈಮ್ಸ್ ಬಿಸಿನೆಸ್ ಐಕಾನಿಕ್ ಗ್ಲೋಬಲ್ ಎಜುಕೇಶನ್ ಪ್ರೊವೈಡರ್ ಅವಾರ್ಡ್ ಮತ್ತು ಇತರ ಹಲವಾರು ಪ್ರತಿಷ್ಠಿತ ಮನ್ನಣೆಗಳನ್ನು ಸಹ ಪಡೆದಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Sat, 19 July 25

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!