AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊದಲ ಅಮೆರಿಕನ್ ಪಿಜಿ ಡಿಪ್ಲೋಮಾ ಇನ್ ಅಡ್ವಾನ್ಸ್ಡ್ ಫಿಟ್ನೆಸ್ ಪರ್ಸನಲ್ ಟ್ರೈನಿಂಗ್

ಭಾರತದಲ್ಲಿ ಪರ್ಸನಲ್ ಟ್ರೈನಿಂಗ್ ಫಿಟ್‌ನೆಸ್ ಉದ್ಯಮದಲ್ಲಿ ಅತ್ಯಂತ ಲಾಭದಾಯಕ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಆರೋಗ್ಯಕರ ಜೀವನಶೈಲಿ, ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡುವ ಅವಕಾಶ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶ ಇದರ ಪ್ರಮುಖ ಆಕರ್ಷಣೆಗಳು. ಪ್ರಮಾಣೀಕೃತ ತರಬೇತುದಾರರ ಕೊರತೆಯಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಟಿಫಿಕೇಷನ್ಸ್, ಉನ್ನತ ದರ್ಜೆಯ ತರಬೇತುದಾರರು ಮತ್ತು ಭಾರತದಾದ್ಯಂತ ಕ್ಯಾಂಪಸ್‌ಗಳನ್ನು ಹೊಂದಿರುವ IBIS ಭಾರತದಲ್ಲಿ ಫಿಟ್‌ನೆಸ್ ಶಿಕ್ಷಣದಲ್ಲಿ ನಂಬರ್ 1ಎಂದು ಹೆಸರು ಮಾಡಿದೆ. 

ಭಾರತದ ಮೊದಲ ಅಮೆರಿಕನ್ ಪಿಜಿ ಡಿಪ್ಲೋಮಾ ಇನ್ ಅಡ್ವಾನ್ಸ್ಡ್ ಫಿಟ್ನೆಸ್ ಪರ್ಸನಲ್ ಟ್ರೈನಿಂಗ್
Fitness
ಅಕ್ಷತಾ ವರ್ಕಾಡಿ
| Edited By: |

Updated on:Jul 31, 2025 | 11:35 AM

Share

ಇಂದು ನಮ್ಮ ದೇಶದಲ್ಲಿ ಅತೀ ಹೆಚ್ಚು ಸಂಪಾದನೆಯನ್ನು ನೀಡುವ ಉದ್ಯೋಗ ಯಾವುದು ಎಂದು ನೀವು ಕೇಳಿದರೆ, ಹೆಚ್ಚಿನ ಜನರು IT, ಮೆಡಿಕಲ್ ಅಥವಾ ಎಂಜಿನಿಯರಿಂಗ್​​ ಎಂದು ಉತ್ತರಿಸುತ್ತಾರೆ. ಆದರೆ ಭಾರತದಲ್ಲಿ, ಪರ್ಸನಲ್ ಟ್ರೈನಿಂಗ್ (ವೈಯಕ್ತಿಕ ತರಬೇತಿ) ಫಿಟ್‌ನೆಸ್ ಉದ್ಯಮದಲ್ಲಿ ಅತ್ಯಂತ ಲಾಭದಾಯಕ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಈ ವೃತ್ತಿಜೀವನದ ವೈಶಿಷ್ಟ್ಯತೆ  ಏನೆಂದರೆ  ಅದು ಆರೋಗ್ಯಕರ ಜೀವನಶೈಲಿಯನ್ನು ನೀಡುವುದರ ಜೊತೆಗೆ  ಸೆಲೆಬ್ರಿಟಿ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡಲು ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಅವಕಾಶಗಳನ್ನು ಒದಗಿಸುತ್ತದೆ.

ಇದಲ್ಲದೆ, ಇದು ಕಾರ್ಪೊರೇಟ್ ಪರಿಸರದ ಒತ್ತಡವಿಲ್ಲದೆ  ಉತ್ತಮವಾಗಿ ಸಂಪಾದಿಸಲು ಅನುವು ಮಾಡಿಕೊಡುವುದರಿಂದ, ಇಂದಿನ ಯುವಕರು ವೈಯಕ್ತಿಕ ತರಬೇತಿ ವಲಯದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿನ ಜಿಮ್‌ಗಳು, ಹೆಲ್ತ್ ಕ್ಲಬ್‌ಗಳು ಮತ್ತು ಕ್ರೀಡಾ ಕೇಂದ್ರಗಳು ಈಗ ಪ್ರಮಾಣೀಕೃತ ಮತ್ತು ಕೌಶಲ್ಯಪೂರ್ಣ ವೈಯಕ್ತಿಕ ತರಬೇತುದಾರರನ್ನು ಸಕ್ರಿಯವಾಗಿ ಹುಡುಕುತ್ತಿವೆ. ಆದರೆ, ಸರಿಯಾದ ಕೌಶಲ್ಯ ಮತ್ತು ಪ್ರಮಾಣೀಕರಣಗಳನ್ನು ಹೊಂದಿರುವವರು ಮಾತ್ರ ಈ ಹೆಚ್ಚಿನ ಬೇಡಿಕೆಯ ವೃತ್ತಿಜೀವನವನ್ನು ಪ್ರವೇಶಿಸಬಹುದು.

ಪ್ರಸ್ತುತ, ಈ ಕ್ಷೇತ್ರದಲ್ಲಿ ಸರ್ಟಿಫೈಡ್ ಫಿಟ್‌ನೆಸ್ ಟ್ರೈನರ್ ಗಳ  ಗಮನಾರ್ಹ ಕೊರತೆಯಿದೆ – ಇದು ಯುವ ಪೀಳಿಗೆಗೆ ಒಂದು ಸುವರ್ಣಾವಕಾಶವನ್ನು ಒದಗಿಸುತ್ತದೆ. ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪ್ರಾಯೋಗಿಕ ತರಬೇತಿಯೊಂದಿಗೆ ಸರ್ಟಿಫೈಡ್ ಪರ್ಸನಲ್ ಟ್ರೈನಿಂಗ್ ಕೋರ್ಸ್ ಅನ್ನು ಅನುಸರಿಸುವ ಮೂಲಕ, ಓರ್ವ ಜಿಮ್​​​ ಟ್ರೈನರ್​​, ಫಿಟ್ನೆಸ್ ಸಲಹೆಗಾರ, ಸೆಲೆಬ್ರೆಟಿ ಟ್ರೈನರ್​​, ಕಾರ್ಪೊರೇಟ್ ವೆಲ್ನೆಸ್ ಸ್ಪೆಷಲಿಸ್​​​​ ಅಥವಾ ಕ್ರೀಡಾ ಪೌಷ್ಟಿಕತಜ್ಞ(Sports nutritionist) ನಂತಹ ಪಾತ್ರಗಳನ್ನು ತೆಗೆದುಕೊಳ್ಳಬಹುದು.

ಇದರಲ್ಲಿ IBIS ಫಿಟ್ನೆಸ್ ಸ್ಟಡೀಸ್​​ ಪ್ರಮುಖವಾಗಿದೆ. Global PG Diploma in Advanced Personal Trainer Program ಅನ್ನು ಪರಿಚಯಿಸಿದ ಭಾರತದ ಮೊದಲ ಸಂಸ್ಥೆ IBIS. ಪಿಯುಸಿ ಅಥವಾ ಪದವಿ ಪೂರ್ಣಗೊಳಿಸಿದವರು ಸರ್ಟಿಫೈಡ್ ಫಿಟ್‌ನೆಸ್ ಟ್ರೈನರ್ ಮತ್ತು ಗ್ಲೋಬಲ್ ಫಿಟ್‌ನೆಸ್ ಪ್ರೊಫೆಶನಲ್ಸ್ ತ್ವರಿತವಾಗಿ ಬೆಳೆಯಲು IBIS ನೀಡುವ ಕೋರ್ಸ್‌ಗಳು ಸಹಾಯ ಮಾಡುತ್ತವೆ.

ಪರ್ಸನಲ್​ ಟ್ರೈನರ್​​,ಡ್ಯಾನ್ಸ್​​ ಫಿಟ್​​ನೆಸ್​​, ಕ್ರೀಡಾ ಪೌಷ್ಟಿಕತಜ್ಞ, ಪವರ್​ ಲಿಫ್ಟಿಂಗ್​​, ದೇಹದಾರ್ಢ್ಯ ತರಬೇತಿ ಮತ್ತು ಕೆಟಲ್‌ಬೆಲ್ ತರಬೇತಿ ನಂತಹ ಮಾಡ್ಯೂಲ್‌ಗಳನ್ನು ಸುಧಾರಿತ ಪಠ್ಯಕ್ರಮವು ಒಳಗೊಂಡಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಟಿಫಿಕೇಷನ್ಸ್, ಉನ್ನತ ದರ್ಜೆಯ ತರಬೇತುದಾರರು ಮತ್ತು ಭಾರತದಾದ್ಯಂತ ಕ್ಯಾಂಪಸ್‌ಗಳನ್ನು ಹೊಂದಿರುವ IBIS ಭಾರತದಲ್ಲಿ ಫಿಟ್‌ನೆಸ್ ಶಿಕ್ಷಣದಲ್ಲಿ ನಂಬರ್ 1ಎಂದು ಹೆಸರು ಮಾಡಿದೆ.

IBIS ಫಿಟ್‌ನೆಸ್ ಸ್ಟಡೀಸ್ ಬೆಂಗಳೂರು, ಚೆನ್ನೈ, ಕೊಚ್ಚಿ ನಂತಹ ನಗರಗಳಲ್ಲಿ ಸುಮಾರು ಒಂಬತ್ತಕ್ಕೂ ಹೆಚ್ಚು ಆಧುನಿಕ ಕ್ಯಾಂಪಸ್‌ಗಳನ್ನು ಹೊಂದಿದೆ. ಭಾರತ ಮತ್ತು ವಿದೇಶಗಳಲ್ಲಿನ ಪ್ರಮುಖ ಫಿಟ್‌ನೆಸ್ ಬ್ರ್ಯಾಂಡ್‌ಗಳ ಸಹಯೋಗದೊಂದಿಗೆ IBIS ವಾರ್ಷಿಕ placement workshops ನಡೆಸುತ್ತದೆ. ಗಮನಾರ್ಹ ವಿಷಯವೆಂದರೆ, ಭಾರತದ ಪ್ರಮುಖ ಫಿಟ್‌ನೆಸ್ ಬ್ರ್ಯಾಂಡ್‌ ಆಗಿರುವ official placement partner in Kerala for Cult.Fit ಗೆ  IBIS ನಿಯೋಜನೆ ಪಾಲುದಾರ.

ಕಡಿಮೆ ಅವಧಿಯಲ್ಲಿ, IBIS ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಭಾರತ ಸರ್ಕಾರದ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಸಚಿವಾಲಯ, ವತಿಯಿಂದ State-of-the-Art Education Provider Award ಪಡೆದ ಭಾರತದಾದ್ಯಂತ ಇಂತಹ 14 ಶಿಕ್ಷಣ ಸಂಸ್ಥೆಗಳಲ್ಲಿ ಕೇರಳದಲ್ಲಿರುವ ಏಕೈಕ ಶಿಕ್ಷಣ ಸಂಸ್ಥೆ.  IBIS ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ಗೆ Global Excellence Award, Times Business Iconic Global Education Provider Award, ಮತ್ತು State-of-the-Art Education Provider Award ಗಳನ್ನು ನೀಡಿ ಗೌರವಿಸಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Sat, 19 July 25

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ