AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025-2028ನೇ ಸಾಲಿನ ಪ್ರವೇಶ ಪ್ರಾರಂಭಿಸಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌

Toyota Technical Institute: ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ 2025-2028ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಯುವಜನರಿಗೆ ಆಟೋಮೊಬೈಲ್, ಮೆಕಾಟ್ರಾನಿಕ್ಸ್‌ ಮುಂತಾದ ಕ್ಷೇತ್ರಗಳಲ್ಲಿ 3 ವರ್ಷಗಳ ವಸತಿ ತರಬೇತಿ ನೀಡಲಾಗುವುದು. ಸ್ಟೈಪೆಂಡ್ ಸಹ ಒದಗಿಸಲಾಗುವುದು. ಹೆಣ್ಣು ಮಕ್ಕಳಿಗೆ ಶೇ. 50% ಮೀಸಲಾತಿ ಇದೆ.

2025-2028ನೇ ಸಾಲಿನ ಪ್ರವೇಶ ಪ್ರಾರಂಭಿಸಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌
ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್
ಗಂಗಾಧರ​ ಬ. ಸಾಬೋಜಿ
|

Updated on:May 15, 2025 | 1:26 PM

Share

ರಾಮನಗರ, ಮೇ 15: ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣಕ್ಕೆ ಬದ್ಧವಾಗಿರುವ ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (TTTI) ತನ್ನ 2025-2028ನೇ ಸಾಲಿನ ಟಿಟಿಟಿಐ ರೆಗ್ಯುಲರ್ ಕೋರ್ಸ್ ಬ್ಯಾಚ್​ನ ಪ್ರವೇಶ ಪ್ರಕ್ರಿಯೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಪ್ರಾಯೋಜಿತ ಈ ಕೋರ್ಸ್, ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಯುವ ಸಮೂಹಕ್ಕೆ ಶೈಕ್ಷಣಿಕ ತರಬೇತಿ, ಉದ್ಯಮಕ್ಕೆ ಸಂಬಂಧಿತ ತರಬೇತಿ ಒದಗಿಸಿ ಅವರನ್ನು ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.

2007ರಲ್ಲಿ ಸ್ಥಾಪನೆಯಾದ ಟಿಟಿಟಿಐ ಭಾರತದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಲ್ಲಿ ಆಟೋಮೊಬೈಲ್ ಅಸೆಂಬ್ಲಿ, ವೆಲ್ಡ್, ಪೇಂಟ್ ಮತ್ತು ಮೆಕಾಟ್ರಾನಿಕ್ಸ್‌ ನಂತಹ ಪ್ರಮುಖ ವಿಭಾಗಗಳಲ್ಲಿ ಮೂರು ವರ್ಷಗಳ ಸಂಪೂರ್ಣ ವಸತಿ ತರಬೇತಿ ಕೋರ್ಸ್ ಒದಗಿಸುತ್ತಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ರೂಪಿಸಲಾದ ಈ ಪಠ್ಯಕ್ರಮವು ವಿದ್ಯಾರ್ಥಿಗಳ ಕೇವಲ ತಾಂತ್ರಿಕ ಜ್ಞಾನವನ್ನು ಮಾತ್ರವಲ್ಲದೆ ಆಧುನಿಕ ಉತ್ಪಾದನಾ ಕ್ಷೇತ್ರದಲ್ಲಿ ಉತ್ಕೃಷ್ಟ ತಂತ್ರಜ್ಞರಾಗಲು ಬೇಕಾದ ಶಿಸ್ತು ಮತ್ತು ಮನಸ್ಥಿತಿಯನ್ನು ಹೊಂದುತ್ತಾರೆ.

ಇದನ್ನೂ ಓದಿ: CBSE 10th Result 2025: CBSE 10ನೇ ತರಗತಿ ಫಲಿತಾಂಶ ಪ್ರಕಟ; ಟಾಪ್​​-3 ಪಟ್ಟಿಯಲ್ಲಿ ನಮ್ಮ ಬೆಂಗಳೂರು

ಇದನ್ನೂ ಓದಿ
Image
ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ ಇಂದು PUCಯಲ್ಲಿ ಟಾಪರ್
Image
ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ 7.5 ಹೆಚ್ಚಳ ಸಾಧ್ಯತೆ
Image
CBSE 10ನೇ ತರಗತಿ ಫಲಿತಾಂಶ ಪ್ರಕಟ; ಟಾಪ್​​-3 ಪಟ್ಟಿಯಲ್ಲಿ ನಮ್ಮ ಬೆಂಗಳೂರು
Image
ಸಿಇಟಿ ಅರ್ಜಿ ಸಲ್ಲಿಕೆಗೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಕೆಇಎ

2023ರಲ್ಲಿ ಟಿಟಿಟಿಐ ತನ್ನ ವಾರ್ಷಿಕ ಪ್ರವೇಶಾತಿ ಸಂಖ್ಯೆಯನ್ನು 600ರಿಂದ 1,200 ವಿದ್ಯಾರ್ಥಿಗಳಿಗೆ ಹೆಚ್ಚಿಸಿದ್ದು, ಇದರಲ್ಲಿ ಅರ್ಧದಷ್ಟು ಸ್ಥಾನಗಳನ್ನು ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಈ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ. ಸಂಸ್ಥೆಯು ಹೊಸ ತರಗತಿ ಕೊಠಡಿಗಳು, ಅತ್ಯಾಧುನಿಕ ತರಬೇತಿ ಉಪಕರಣಗಳು ಮತ್ತು ಅತ್ಯಾಧುನಿಕ ವಸತಿ ಸೌಕರ್ಯಗಳನ್ನು ಹೊಂದಿದ್ದು, ಜೊತೆಗೆ ಹೆಣ್ಣುಮಕ್ಕಳಿಗಾಗಿ ಅತ್ಯುತ್ತಮ ವಸತಿಗೃಹವನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಸ್ಟೈಪೆಂಡ್​ಗಳು ಲಭ್ಯವಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸುಲಭಗೊಳಿಸುತ್ತಿದೆ.

ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ್ ಹೇಳಿದ್ದಿಷ್ಟು 

ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ನ ಫೈನಾನ್ಸ್ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ್, ‘ಸೂಕ್ತ ಅವಕಾಶಗಳನ್ನು ಒದಗಿಸಿ ಜನರನ್ನು ಸಬಲೀಕರಣಗೊಳಿಸುವ ಮೂಲಕ ನಿಜವಾದ ಪ್ರಗತಿ ಆರಂಭವಾಗುತ್ತದೆ ಎಂಬ ನಂಬಿಕೆ ಹೊಂದಿದ್ದೇವೆ. ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಕೂಡ ಈ ನಂಬಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕದ ಗ್ರಾಮೀಣ ಭಾಗದ ಯುವಕರಿಗೆ ಧನಸಹಾಯ ಒದಗಿಸುವುದರ ಜೊತೆಗೆ ವಿಶ್ವ ದರ್ಜೆಯ ಕೌಶಲ್ಯ ತರಬೇತಿಯನ್ನು ನೀಡುತ್ತದೆ’ ಎಂದರು.

‘ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮತ್ತು ಲಿಂಗ ಸಮಾನತೆಯನ್ನು ಸಾಧಿಸುವ ಮೂಲಕ ನಾವು ಸ್ಕಿಲ್ ಇಂಡಿಯಾ ಮಿಷನ್​ಗೆ ಬೆಂಬಲ ನೀಡುತ್ತಿದ್ದೇವೆ. ಮುಖ್ಯವಾಗಿ ಭಾರತದ ಉತ್ಪಾದನಾ ಶ್ರೇಷ್ಠತೆಯನ್ನು ಸಾರುವ ಭವಿಷ್ಯ- ಸಿದ್ಧ ಕಾರ್ಯಪಡೆಯನ್ನು ನಿರ್ಮಿಸುತ್ತಿದ್ದೇವೆ. ಈ ಅಪೂರ್ವ ಪಯಣದ ಭಾಗವಾಗಲು ಉತ್ಸಾಹಿ ಯುವ ಮನಸ್ಸುಗಳನ್ನು ಆಹ್ವಾನಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ’ ಮಿಷನ್​ಗೆ ಕೊಡುಗೆ ನೀಡುವ ಸಲುವಾಗಿ ಜಪಾನೀಸ್ ಶೈಲಿಯ ಉತ್ಪಾದನಾ ಕೌಶಲ್ಯಗಳು ಮತ್ತು ಪದ್ಧತಿಗಳನ್ನು ಕಲಿಸುವ ಉದ್ದೇಶದಿಂದ ಪ್ರಾರಂಭವಾಗಿರುವ ಜಪಾನ್ ಇಂಡಿಯಾ ಇನ್‌ ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜೆಐಎಂ) ಸ್ಕಿಲ್ ಟ್ರಾನ್ಸ್ ಫರ್ ಪ್ರಮೋಷನ್ ಪ್ರೋಗ್ರಾಮ್​ಗೆ ಆಯ್ಕೆಯಾಗಿರುವ ಸಂಸ್ಥೆಗಳಲ್ಲಿ ಟಿಟಿಟಿಐ ಕೂಡ ಒಂದಾಗಿದೆ.

ಇದನ್ನೂ ಓದಿ: ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ 7.5 ಹೆಚ್ಚಳ ಸಾಧ್ಯತೆ: ವಿದ್ಯಾರ್ಥಿಗಳಿಗೆ ದರ ಏರಿಕೆ ಶಾಕ್

ಆಟೋಮೊಟಿವ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (ಎಎಸ್​ಡಿಸಿ) ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಟ್ರೇನಿಂಗ್ (ಡಿಜಿಟಿ)ನಿಂದ ಮಾನ್ಯತೆ ಪಡೆದಿರುವ ಟಿಟಿಟಿಐ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ನೀಡುತ್ತಿದ್ದು, ಇದರಲ್ಲಿ ವರ್ಲ್ಡ್‌ಸ್ಕಿಲ್ಸ್ (ಸ್ಕಿಲ್ ಒಲಿಂಪಿಕ್ಸ್) ಕೂಡ ಸೇರಿದೆ. ಟಿಟಿಟಿಐ ವಿದ್ಯಾರ್ಥಿಗಳು 2015ರಿಂದ 2024ರವರೆಗೆ ಜಾಗತಿಕ ವೇದಿಕೆಯಲ್ಲಿ ಸತತವಾಗಿ ಶ್ರೇಷ್ಠ ಸಾಧನೆ ಮಾಡುತ್ತಾ ಬಂದಿದ್ದಾರೆ. ಮೆಕಾಟ್ರಾನಿಕ್ಸ್, ಪ್ರೊಟೊಟೈಪ್ ಮಾಡೆಲಿಂಗ್, ಮತ್ತು ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್‌ ನಲ್ಲಿ ಅನೇಕ ಪದಕಗಳು ಮತ್ತು ಎಕ್ಸಲೆನ್ಸ್ ಮೆಡಾಲಿಯನ್‌ಗಳನ್ನು ಗೆದ್ದಿದ್ದಾರೆ. 2024ರಲ್ಲಿ ಸಸ್ಟೇನೇಬಲ್ ಪ್ರಾಕ್ಟೀಸ್ ಅವಾರ್ಡ್ ಕೂಡ ಪಡೆದಿದ್ದಾರೆ.

ಅರ್ಹತೆ: ಮಾನದಂಡಗಳು ಟಿಟಿಟಿಐ ರೆಗ್ಯುಲರ್ ಕೋರ್ಸ್

ಕೌಶಲ್ಯ, ಜ್ಞಾನ ಮತ್ತು ಆಟಿಟ್ಯೂಡ್ ಅಭಿವೃದ್ಧಿಯ ಮೇಲೆ ಕೇಂದ್ರೀಕೃತ ಸಮಗ್ರ ತರಬೇತಿ. ವಯಸ್ಸು 16 ರಿಂದ 17 ವರ್ಷಗಳ ನಡುವೆ (ಆಗಸ್ಟ್ 1, 2025 ರಂತೆ). ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ, ಒಟ್ಟಾರೆ ಶೇ.50, ಗಣಿತ ಮತ್ತು ವಿಜ್ಞಾನದಲ್ಲಿ ತಲಾ ಶೇ.45 ಅಂಕ ಗಳಿಕೆ. ಅವಧಿ 3 ವರ್ಷಗಳು. ಆರ್ಥಿಕ ಹಿನ್ನೆಲೆ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು.

ಕೋರ್ಸ್ ಮಾಹಿತಿ, ವಿಭಾಗಗಳು 

  • ಆಟೋಮೊಬೈಲ್ ವೆಲ್ಡ್
  • ಆಟೋಮೊಬೈಲ್ ಪೇಂಟ್​
  • ಆಟೋಮೊಬೈಲ್ ಅಸೆಂಬ್ಲಿ
  • ಮೆಕಾಟ್ರಾನಿಕ್ಸ್​​

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವೆಬ್‌ಸೈಟ್​ಗೆ ಭೇಟಿ ನೀಡಿ Toyota India | TTTI (toyotabharat.com). ಅಥವಾ 8050673677, 9591999668, ಲ್ಯಾಂಡ್‌ಲೈನ್: 080 66292546, 080 66292536 [ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ] ಕರೆ ಮಾಡಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:24 pm, Thu, 15 May 25