ಕಲಬುರ್ಗಿಯಲ್ಲಿ ಏಪ್ರಿಲ್ 27, 28ರಂದು ಟಿವಿ9 ಕನ್ನಡ ಎಜುಕೇಶನ್ ಎಕ್ಸ್ಪೋ 2024
TV9 Kannada Education Summit 2024 at Kalburgi: ಟಿವಿ9 ಕನ್ನಡ ಶಿಕ್ಷಣ ಎಕ್ಸ್ಪೋ ಕಲಬುರ್ಗಿಯಲ್ಲಿ ಇದೇ ಏಪ್ರಿಲ್ 27 ಮತ್ತು 28ರಂದು ನಡೆಯಲಿದೆ. ಶನಿವಾರ ಮತ್ತು ಭಾನುವಾರದಂದು ಕಲಬುರ್ಗಿಯ ಡಾ. ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶಿಕ್ಷಣ ಶೃಂಗಸಭೆ ನಡೆಯಲಿದೆ. ಕಾಲೇಜಿನ ಅಡ್ಮಿಶನ್ನಿಂದ ಹಿಡಿದು ಕೋರ್ಸ್ಗಳ ಮಾಹಿತಿವರೆಗೂ ಸಾಕಷ್ಟು ಉಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆಯಬಹುದು.
ಕಲಬುರ್ಗಿ: ಬೆಂಗಳೂರಿನಲ್ಲಿ ನಡೆದ ಟಿವಿ9 ಎಜುಕೇಶನ್ ಸಮಿಟ್ (TV9 Kannada Education Summit) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಈಗ ಕಲಬುರ್ಗಿಯಲ್ಲಿ ಆಯೋಜನೆ ಆಗುತ್ತಿದೆ. ಏಪ್ರಿಲ್ 27 ಮತ್ತು 28ರಂದು ಎಂಟನೇ ಆವೃತ್ತಿಯ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ಕಲಬುರ್ಗಿಯ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಈ ಎಕ್ಸ್ಪೋ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಯಾವ ಕಾಲೇಜು ಮತ್ತು ಕೋರ್ಸ್ ಸೇರಬಹುದು ಎಂಬುದನ್ನು ಈ ಶೃಂಗಸಭೆಯಲ್ಲಿ ಮಾರ್ಗದರ್ಶನ ಸಿಗಲಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಟಿವಿ9 ಎಜುಕೇಶನ್ ಎಕ್ಸ್ಪೋದಲ್ಲಿ ನೂರಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದವು. 18,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮೊದಲಾದವರು ಕಾರ್ಯಕ್ರಮಕ್ಕೆ ಬಂದಿದ್ದರು. ಕಲಬುರ್ಗಿಯಲ್ಲಿ ಈ ವಾರಾಂತ್ಯದಲ್ಲಿ ನಡೆಯಲಿರುವ ಶಿಕ್ಷಣ ಸಮಾವೇಶದಲ್ಲಿ ಪ್ರಮುಖ ಎಂಜಿನಿಯರಿಂಗ್ ಕಾಲೇಜು, ಡೀಮ್ಡ್ ಯೂನಿವರ್ಸಿಟಿ, ಖಾಸಗಿ ಯೂನಿವರ್ಸಿಟಿ, ಮೆಡಿಕಲ್ ಕಾಲೇಜು, ಫಾರ್ಮಸಿ ಕಾಲೇಜು, ಮ್ಯಾನೇಜ್ಮೆಂಟ್ ಶಾಲೆಗಳು, ಕೃಷಿ ಶಿಕ್ಷಣ ಸಂಸ್ಥೆಗಳು ಹಾಗು ಇತರ ವೃತ್ತಿಪರ ತರಬೇತಿ ಕೇಂದ್ರಗಳು ಎಜುಕೇಶನ್ ಸಮಿಟ್ನಲ್ಲಿ ಭಾಗವಹಿಸಲಿವೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಅಡ್ಮಿಶನ್, ಕೋರ್ಸ್, ಪಠ್ಯಕ್ರಮ, ಸ್ಪರ್ಧಾತ್ಮಕ ಪರೀಕ್ಷೆ, ಹೊಸ ವೃತ್ತಿ ಅವಕಾಶ ಮೊದಲಾದ ಬಗ್ಗೆ ಮಾಹಿತಿಯನ್ನು ಪಡೆಯಲು ಒಳ್ಳೆಯ ವೇದಿಕೆ ಇದಾಗಿದೆ. ವಿದ್ಯಾರ್ಥಿಗಳು ತಮ್ಮಿಚ್ಛೆಯ ಕೋರ್ಸ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅಡ್ಮಿಶನ್ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ಸಹಾಯಕವಾಗುತ್ತದೆ.
ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ನಡೆಯುವ ಸ್ಥಳ ಮತ್ತು ಸಮಯ
ಸ್ಥಳ: ಪೂಜ್ಯ ಡಾ. ಬಸವರಾಜಪ್ಪ ಅಪ್ಪ ಸ್ಮಾರಕ ಭವನ, ಗೋವಾ ಹೋಟೆಲ್ ಸಮೀಪ, ಅಪ್ಪಾ ಕೆರೆ ಎದುರು, ಕಲಬುರ್ಗಿ
ದಿನಾಂಕ: 2024ರ ಏಪ್ರಿಲ್ 27 ಮತ್ತು 28
ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ
(ಪ್ರವೇಶ ಉಚಿತ ಇರುತ್ತದೆ.)