ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್: ಏಷ್ಯಾದಲ್ಲಿ ಭಾರತಕ್ಕೆ 2ನೇ ಸ್ಥಾನ
QS World University Ranking 2024: ಕಳೆದ ವಾರ ಬಿಡುಗಡೆ ಆದ ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ನಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಈ ಬಾರಿ ಹೆಚ್ಚು ಮಿಂಚಿವೆ. ಏಷ್ಯಾದಲ್ಲಿ ಚೀನಾ ಬಿಟ್ಟರೆ ಈ ರ್ಯಾಂಕಿಂಗ್ನಲ್ಲಿ ಹೆಚ್ಚು ವಿವಿಗಳಿರುವುದು ಭಾರತದ್ದು. ಒಟ್ಟು 69 ಭಾರತೀಯ ವಿಶ್ವವಿದ್ಯಾಲಯಗಳು ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿವೆ. ಚೀನಾ ವಿವಿಗಳು ಸ್ಥಾನ ಪಡೆದಿರುವುದು 101. ಬೆಂಗಳೂರಿನ ಐಐಎಂ ಸೇರಿದಂತೆ ಹಲವು ಭಾರತೀಯ ವಿವಿಗಳು ಟಾಪ್ 100 ನಲ್ಲಿ ಇವೆ. ದೆಹಲಿಯ ಜವಾಹರಲಾಲ್ ನೆಹರೂ ಯೂನಿವರ್ಸಿಟಿ ಜಾಗತಿಕವಾಗಿ 20ನೇ ಶ್ರೇಯಾಂಕ ಪಡೆದಿದೆ.
ನವದೆಹಲಿ, ಏಪ್ರಿಲ್ 22: ಇತ್ತೀಚೆಗೆ ಬಿಡುಗಡೆ ಆದ 2024ರ ಸಾಲಿನ ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ (QS World University Ranking 2024) ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಿದೆ. ಈ ಪಟ್ಟಿಯಲ್ಲಿ ಭಾರತದ 69 ಭಾರತೀಯ ವಿಶ್ವವಿದ್ಯಾಲಯಗಳು (Indian universities) ಸ್ಥಾನ ಪಡೆದಿವೆ. ಚೀನಾದ 101 ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿವೆ. ಏಷ್ಯಾದಲ್ಲಿ ಚೀನಾ ಬಿಟ್ಟರೆ ಭಾರತದ ವಿವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯುಸ್ ವರ್ಲ್ಡ್ ಯೂನಿವರ್ಸಿಟಿಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು. ಬೆಂಗಳೂರಿನ ಐಐಎಂ ಸೇರಿದಂತೆ ಮೂರು ಐಐಎಂಗಳು ಟಾಪ್ 50 ಪಟ್ಟಿಯಲ್ಲಿವೆ. ಟಾಪ್ 100ನಲ್ಲಿ 18 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಜವಾಹರಲಾಲ್ ಯೂನಿವರ್ಸಿಟಿ (JNU) ಡೆವಲಪ್ಮೆಂಟ್ ಸ್ಟಡೀಸ್ ಕೋರ್ಸ್ಗಳಿಗೆ ಜಾಗತಿಕವಾಗಿ 20ನೆ ಸ್ಥಾನ ಪಡೆದಿರುವುದು ವಿಶೇಷ. ಇನ್ನು, ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆ ಬಿಸಿನೆಸ್ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕೋರ್ಸ್ನಲ್ಲಿ 22ನೇ ರ‍್ಯಾಂಕಿಂಗ್ ಪಡೆದಿದೆ.
ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್ ಯೂನಿವರ್ಸಿಟಿಯು ಡೆಂಟಿಸ್ಟ್ರಿಯಲ್ಲಿ ಜಾಗತಿಕವಾಗಿ 24ನೇ ಸ್ಥಾನ ಪಡೆದಿದೆ. ಐಐಟಿ ಮದ್ರಾಸ್ ಏರೋನಾಟಿಕಲ್, ಮೆಕ್ಯಾನಿಕಲ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್ನಲ್ಲಿ 44ನೇ ಸ್ಥಾನ ಪಡೆದಿದೆ. ಗಣಿ ಎಂಜಿನಿಯರಿಂಗ್ ಕೋರ್ಸ್ನಲ್ಲಿ 25ನೇ ರ‍್ಯಾಂಕಿಂಗ್ ಪಡೆದಿದೆ.
ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ ಶ್ಲಾಘಿಸಿದ ಕ್ಯುಎಸ್ ಅಧ್ಯಕ್ಷರು
ಕ್ಯುಎಸ್ ಕ್ವಾಕ್ವಾರೆಲಿ ಸೈಮಂಡಸ್ಸ್ (QS Quacquarelli Symonds) ಸಂಸ್ಥೆಯ ಅಧ್ಯಕ್ಷ ನುಂಜಿಯೋ ಕ್ವಾಕ್ವಾರೆಲಿ (Nunzio Quacquarelli) ಅವರು ತಮ್ಮ ಲಿಂಕ್ಡ್ ಇನ್ ಪೋಸ್ಟ್ನಲ್ಲಿ ಕ್ಯುಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ನಲ್ಲಿ ಭಾರತದ ಸಾಧನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿ20 ದೇಶಗಳ ಪೈಕಿ ಭಾರತದ ಯೂನಿವರ್ಸಿಟಿಗಳ ಸಾಧನೆಯೇ ಹೆಚ್ಚು ಉತ್ತಮಗೊಂಡಿರುವುದು. 2017ರಿಂದ 2022ರ ಅವಧಿಯಲ್ಲಿ ಭಾರತದ ಯೂನಿವರ್ಸಿಟಿಗಳ ರಿಸರ್ಚ್ ಔಟ್ಪುಟ್ ಶೇ. 54ರಷ್ಟು ಹೆಚ್ಚಾಗಿದೆ ಎಂದು ನುಂಜಿಯೋ ಹೇಳಿದ್ದಾರೆ.
ಇದನ್ನೂ ಓದಿ: ರಾಜಕೀಯ ಸಂಘರ್ಷಕ್ಕೆ ಕಾರಣವಾದ ಸಂದೇಶ್‌ಖಾಲಿ, ನ್ಯಾಯಕ್ಕಾಗಿ ಮಹಿಳೆಯರ ಹೋರಾಟ; ಏನಿದು ಪ್ರಕರಣ?
ಇದೇ ವೇಳೆ ನುಂಜಿಯೋ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರವನ್ನೂ ಹಂಚಿಕೊಂಡಿದ್ದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಶಂಸಿಸಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ತರಲು ಪ್ರಧಾನಿ ಮೋದಿ ಬಯಸಿರುವುದು ಅವರನ್ನು ಭೇಟಿ ಮಾಡಿದಾಗ ಗೊತ್ತಾಯಿತು ಎಂದು ನುಂಜಿಯೋ ಕ್ವಾಕ್ವಾರೆಲಿ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ