UPSC New Rule: ಸೇವೆಯಲ್ಲಿರುವ ಐಎಎಸ್​, ಐಎಫ್​ಎಸ್ ಅಧಿಕಾರಿಗಳಿಗೆ ಯುಪಿಎಸ್​ಸಿಯಿಂದ ಹೊಸ ನಿರ್ಬಂಧ

ಯುಪಿಎಸ್‌ಸಿ 2026ರ ನಾಗರಿಕ ಸೇವಾ ಪರೀಕ್ಷೆಗೆ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಪರಿಚಯಿಸಿದೆ. ಸೇವೆಯಲ್ಲಿರುವ ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಮತ್ತೆ ಪರೀಕ್ಷೆ ಬರೆಯುವುದನ್ನು ನಿರ್ಬಂಧಿಸಲಾಗಿದೆ. ಐಪಿಎಸ್ ಮತ್ತು ಗ್ರೂಪ್ ಎ ಸೇವೆಗಳ ಅಭ್ಯರ್ಥಿಗಳಿಗೆ ಶ್ರೇಣಿ ಸುಧಾರಿಸಲು ಒಂದು ಬಾರಿ ಮಾತ್ರ ಅವಕಾಶವಿದೆ. 2028ರಿಂದ ಪುನರಾವರ್ತಿತ ಪ್ರಯತ್ನಗಳಿಗೆ ರಾಜೀನಾಮೆ ಕಡ್ಡಾಯವಾಗಿದೆ. ಈ ನಿಯಮಗಳು ಅಧಿಕಾರಿಗಳ ಮರು-ಪ್ರಯತ್ನಗಳನ್ನು ಸೀಮಿತಗೊಳಿಸಿವೆ.

UPSC New Rule: ಸೇವೆಯಲ್ಲಿರುವ ಐಎಎಸ್​, ಐಎಫ್​ಎಸ್ ಅಧಿಕಾರಿಗಳಿಗೆ ಯುಪಿಎಸ್​ಸಿಯಿಂದ ಹೊಸ ನಿರ್ಬಂಧ
ಯುಪಿಎಸ್​ಸಿ
Image Credit source: Tv9 Gujarati

Updated on: Feb 05, 2026 | 3:13 PM

ನವದೆಹಲಿ, ಫೆಬ್ರವರಿ 05: ಕೇಂದ್ರ ಲೋಕಸೇವಾ ಆಯೋಗ(UPSC) ತನ್ನ ನಾಗರಿಕ ಸೇವಾ ಪರೀಕ್ಷೆ (CSE)2026ರ ಅಧಿಸೂಚನೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಪರಿಚಯಿಸಿದೆ. ಇದು ಈಗಾಗಲೇ ಸೇವೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮರು-ಪ್ರಯತ್ನಗಳನ್ನು ಸೀಮಿತಗೊಳಿಸುತ್ತದೆ. ಸೇವೆ ಸಲ್ಲಿಸುತ್ತಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ಸಿಎಸ್​ಇ 2026ರಲ್ಲಿ ಹಾಜರಾಗುವುದನ್ನು ನಿಷೇಧಿಸಲಾಗಿದೆ.

ಮುಂದಿನ ಪ್ರಯತ್ನದಲ್ಲಿ ತಮ್ಮ ಶ್ರೇಣಿಯನ್ನು ಸುಧಾರಿಸಲು ಬಯಸುವ ಐಪಿಎಸ್ ಅಧಿಕಾರಿಗಳು ಗ್ರೂಪ್ ಎ ಸೇವೆಗಳನ್ನು ಹಂಚಿಕೆ ಮಾಡಿದ ಅಭ್ಯರ್ಥಿಗಳ ಮೇಲೆ ಅಧಿಕಸೂಚನೆಯು ಷರತ್ತುಗಳನ್ನು ವಿಧಿಸುತ್ತದೆ. ಈ ಕ್ರಮವು ಒಂದು ಬಾರಿಯ ಸುಧಾರಣಾ ವಿಂಡೋವನ್ನು ಔಪಚಾರಿಕಗೊಳಿಸುತ್ತದೆ ಮತ್ತು ರಾಜೀನಾಮೆ ನೀಡದೆ ಪುನರಾವರ್ತಿತ ಪ್ರಯತ್ನಗಳಿಗೆ ಅವಕಾಶ ನೀಡುವ ಹಿಂದಿನ ಅವಕಾಶವನ್ನು ಮುಚ್ಚುತ್ತದೆ.
ಹಿಂದಿನ ಪರೀಕ್ಷೆಯ ಆಧಾರದ ಮೇಲೆ ಐಎಎಸ್ ಅಥವಾ ಐಎಫ್​ಎಸ್ ಆಗಿ ನೇಮಕಗೊಂಡಿರುವ ಮತ್ತು ಆ ಸೇವೆಯ ಸದಸ್ಯರಾಗಿ ಮುಂದುವರೆದ ಯಾವುದೇ ಅಭ್ಯರ್ಥಿಯು ಸಿಎಸ್​ಇ 2026ರಲ್ಲಿ ಕಾಣಿಸಿಕೊಳ್ಳಲು ಅರ್ಹರಾಗುವುದಿಲ್ಲ ಎಂದು ಅಧಿಸೂಚನೆ ಸ್ಪಷ್ಟವಾಗಿ ಹೇಳುತ್ತದೆ.

ಈ ನಿರ್ಬಂಧವು ಎಲ್ಲಾ ಹಂತಗಳಿಗೂ ಅನ್ವಯಿಸುತ್ತದೆ, ಪ್ರಾಥಮಿಕ ಪರೀಕ್ಷೆಯ ನಂತರ ಆದರೆ ಮುಖ್ಯ ಪರೀಕ್ಷೆಗೂ ಮೊದಲು ಅಬ್ಯಥರ್ಥಯನ್ನು ಐಎಎಸ್ ಅಥವಾ ಐಎಫ್​ಎಸ್ಗೆ ನೇಮಿಸಿದರೆ, ಅವರು ಮುಖ್ಯ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ. ಮುಖ್ಯ ಪರೀಕ್ಷೆ ಪ್ರಾರಂಭವಾದ ನಂತರ ಆದರೆ ಅಂತಿಮ ಫಲಿತಾಂಶ ಘೋಷಣೆಯಾಗುವ ಮೊದಲು ನೇಮಕಗೊಂಡರೆ ಅವರನ್ನು ಸಿಎಸ್​ಎ 2026ರ ಅಡಿಯಲ್ಲಿ ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ. ಇದು ಸೇವೆಯಲ್ಲಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ರಾಜೀನಾಮೆ ನೀಡದ ಹೊರತು ಮತ್ತೆ ಪರೀಕ್ಷೆ ಬರೆಯುವುದನ್ನು ತಡೆಯುತ್ತದೆ.

ಹಿಂದಿನ ಪರೀಕ್ಷೆಯ ಮೂಲಕ ಈಗಾಗಲೇ ಆಯ್ಕೆಯಾದ ಅಥವಾ ಪೊಲೀಸ್ ಸೇವೆಗೆ ನೇಮಕಗೊಂಡ ಅಭ್ಯರ್ಥಿಗಳು ಸಿಎಸ್​ಇ2026ರ ಮೂಲಕ ಮತ್ತೆ ಐಪಿಎಸ್ ಆಯ್ಕೆ ಮಾಡಲು ಅಥವಾ ಹಂಚಿಕೆ ಮಾಡಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!

ಸಿಎಸ್​ಇ 2025 ಅಥವಾ ಅದಕ್ಕಿಂತ ಹಿಂದೆ ಯಾವುದೇ ಸೇವೆಗೆ ನಿಯೋಜಿಸಲಾದ ಅಭ್ಯರ್ಥಿಗಳು ರಾಜೀನಾಮೆ ನೀಡದೆ ಸಿಎಸ್​ಇ2027 ಅಥವಾ ಸಿಎಸ್​ಇ 2027ರಲ್ಲಿ ಹಾಜರಾಗಲು ಒಂದು ಬಾರಿ ಅವಕಾಶವಿರುತ್ತದೆ. 2028ರಲ್ಲಿ ಸಿಎಸ್​ಇ ಅಥವಾ ಇನ್ಯಾವುದೇ ಪರೀಕ್ಷೆಗೆ ಹಾಜರಾಗುವವರು ಸೇವೆಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಿರುತ್ತದೆ.

ಫೆಬ್ರವರಿ 24 ರೊಳಗೆ UPSC ನೇಮಕಾತಿ ನಮೂನೆಗಳನ್ನು ಭರ್ತಿ ಮಾಡಿ
UPSC CSE 2026 ಅಧಿಸೂಚನೆಯ ಪ್ರಕಾರ , ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 4 ರಂದು ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 24, 2026 ರವರೆಗೆ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಈ ನೇಮಕಾತಿ ಡ್ರೈವ್ ವಿವಿಧ ನಾಗರಿಕ ಸೇವೆಗಳಲ್ಲಿ ಸುಮಾರು 933 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

 

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ