Harsh Sandhvi
Minister of State for Home Affairs
ಹರ್ಷ್ ರಮೇಶ್ ಸಾಂಘ್ವಿ ಪ್ರಸ್ತುತ ಗುಜರಾತ್‌ನ ಗೃಹ ಸಚಿವರು. ಅವರು ಸೂರತ್‌ನ ಮಜುರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ. ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದರು. ಶಾಂಘ್ವಿಯವರಿಗೆ ಒಂಬತ್ತು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಹರ್ಷ್ ಸಾಂಘ್ವಿ ಗುಜರಾತ್‌ನ ಅತ್ಯಂತ ಕಿರಿಯ ಗೃಹ ಸಚಿವರು. 37 ನೇ ವಯಸ್ಸಿನಲ್ಲಿ ಅವರು ಗೃಹ ಖಾತೆ ರಾಜ್ಯ ಸಚಿವರಾದರು, ಆದರೂ ನರೇಶ್ ರಾವಲ್ ಗುಜರಾತ್‌ನ ಅತ್ಯಂತ ಕಿರಿಯ ಗೃಹ ರಾಜ್ಯ ಸಚಿವರಾಗಿದ್ದಾರೆ.