Rivaba Jadeja: ಗುಜರಾತ್‌ನ ಉತ್ತರ ಜಾಮ್‌ನಗರ ಕ್ಷೇತ್ರದಲ್ಲಿ ರಿವಾಬಾ ಜಡೇಜಾಗೆ ಗೆಲುವು

| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2022 | 2:44 PM

32ರ ಹರೆಯದ ರಿವಾಬಾ ಜುನಾಗಢ ಮೂಲದವರು. ಅವರ ಪತಿ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜಾ ಜಾಮ್‌ನಗರದವರು. ಕ್ರಿಕೆಟಿಗ ರವೀಂದ್ರ ಜಡೇಜಾ ಕಾಂಗ್ರೆಸ್ ನಾಯಕರ ಕುಟುಂಬದಿಂದ ಬಂದವರು. ಅವರ ಸಹೋದರಿ ನೈನಾ ಜಡೇಜಾ ಜಾಮ್‌ನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ವಿಭಾಗದ ಮುಖ್ಯಸ್ಥೆ.

Rivaba Jadeja: ಗುಜರಾತ್‌ನ ಉತ್ತರ ಜಾಮ್‌ನಗರ ಕ್ಷೇತ್ರದಲ್ಲಿ ರಿವಾಬಾ ಜಡೇಜಾಗೆ ಗೆಲುವು
ರಿವಾಬಾ ಜಡೇಜಾ
Follow us on

ದೆಹಲಿ:ಗುಜರಾತ್‌ನ ಜಾಮ್‌ನಗರ (ಉತ್ತರ) (Jamnagar North) ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ(Rivaba Jadeja) ಗೆಲುವು ಸಾಧಿಸಿದ್ದಾರೆ. ಡಿಸೆಂಬರ್ 1 ರಂದು ಗುಜರಾತ್ ವಿಧಾನಸಭಾ ಚುನಾವಣೆಯ (Gujarat Assembly Election) ಮೊದಲ ಹಂತದಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ ಮತದಾನವಾಗಿತ್ತು. ಬಿಜೆಪಿ ತನ್ನ ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಜಡೇಜಾ ಅವರನ್ನು ಕೈಬಿಟ್ಟು ರಿವಾಬಾಗೆ ಮಣೆ ಹಾಕಿತ್ತು. ರಿವಾಬಾ ಅವರು 2019ರಲ್ಲಿ ಬಿಜೆಪಿ ಸೇರಿದ್ದರು. 32ರ ಹರೆಯದ ರಿವಾಬಾ ಜುನಾಗಢ ಮೂಲದವರು. ಅವರ ಪತಿ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜಾ ಜಾಮ್‌ನಗರದವರು. ಕ್ರಿಕೆಟಿಗ ರವೀಂದ್ರ ಜಡೇಜಾ ಕಾಂಗ್ರೆಸ್ ನಾಯಕರ ಕುಟುಂಬದಿಂದ ಬಂದವರು. ಅವರ ಸಹೋದರಿ ನೈನಾ ಜಡೇಜಾ ಜಾಮ್‌ನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ವಿಭಾಗದ ಮುಖ್ಯಸ್ಥೆ. ನೈನಾ ಅವರು ಹಿರಿಯ ಕಾಂಗ್ರೆಸ್ ನಾಯಕ ಬಿಪೇಂದ್ರಸಿನ್ಹ್ ಜಡೇಜಾ ಅವರ ಪರವಾಗಿ ಪ್ರಚಾರ ಮಾಡಿದ್ದರು. ಪ್ರಚಾರದ ವೇಳೆ ರವೀಂದ್ರ ಜಡೇಜಾ ಅವರ ಅಪ್ಪ ಅನಿರುಧ್‌ಸಿನ್ಹ ಜಡೇಜಾ ಅವರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ ವಿಡಿಯೊ ವೈರಲ್ ಆಗಿತ್ತು. ರಿವಾಬಾ ಅವರು ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸೊಸೆಯೂ ಹೌದು.

ಬಿಜೆಪಿಯ ರಿವಾಬಾ ಜಡೇಜಾ ಅವರು ಜಾಮ್‌ನಗರ ಉತ್ತರ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದು ಮೋದಿ ತವರು ರಾಜ್ಯದಲ್ಲಿ ಇದು ದಾಖಲೆಯ ಗೆಲುವು ಆಗಿದೆ.ಮತ ಗಳಿಕೆಯಲ್ಲಿ ಕಾಂಗ್ರೆಸ್‌ನ ಭೀಪೇಂದ್ರಸಿನ್ಹ ಜಡೇಜಾ ಮೂರನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ
Gujarat Election Results 2022: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್​ಗೆ 50,000 ಮತಗಳ ಅಂತರದ ಭರ್ಜರಿ ಗೆಲುವು
Dimple Yadav: ಡಿಂಪಲ್ ಯಾದವ್​​ಗೆ ಗೆಲುವು; ಮೈನ್​ಪುರಿ ಉಪಚುನಾವಣೆಯಲ್ಲಿ ಯಾದವ್ ಕುಟುಂಬ ಮತ್ತೆ ಮೇಲುಗೈ
Himachal Pradesh Election Result 2022: ಸೆರಾಜ್ ಕ್ಷೇತ್ರದಿಂದ ಹಾಲಿ ಸಿಎಂ ಜೈರಾಮ್ ಠಾಕೂರ್ ಗೆಲುವು

ನನ್ನನ್ನು ಅಭ್ಯರ್ಥಿಯಾಗಿ ಸಂತೋಷದಿಂದ ಸ್ವೀಕರಿಸಿದವರು, ನನಗಾಗಿ ಕೆಲಸ ಮಾಡಿದವರು, ಜನರನ್ನು ತಲುಪಿದವರು ಮತ್ತು ಸಂಪರ್ಕ ಹೊಂದಿದವರು ಅವರೆಲ್ಲರಿಗೂ ನಾನು ಧನ್ಯವಾದಗಳು. ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು. ಬಿಜೆಪಿ ಕಳೆದ 27 ವರ್ಷಗಳಿಂದ ಗುಜರಾತಿನಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಮತ್ತು ಗುಜರಾತ್ ಮಾದರಿಯನ್ನು ಸ್ಥಾಪಿಸಿದ ರೀತಿಯಲ್ಲಿ, ಜನರು ಬಿಜೆಪಿಯೊಂದಿಗೆ ಅಭಿವೃದ್ಧಿ ಪಯಣವನ್ನು ಮುಂದುವರಿಸಲು ಬಯಸುತ್ತಾರೆ ಎಂದು ನಂಬಿದ್ದರು. ಗುಜರಾತ್ ಬಿಜೆಪಿ ಜತೆಗಿತ್ತು ಮತ್ತು ಮುಂದೆಯೂ ಅವರೊಂದಿಗಿರುತ್ತದೆ ಎಂದು ರಿವಾಬಾ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

2017 ರಲ್ಲಿ ಶೇ 58.95  ಮತಗಳೊಂದಿಗೆ ಕಾಂಗ್ರೆಸ್ ನ ಅಹಿರ್ ಜೀವನ್ಭಾಯ್ ಕರುಭಾಯ್ ಕುಂಭರ್ವಾಡಿಯಾ ಅವರನ್ನು ಸೋಲಿಸಿದ್ದ ತನ್ನ ಹಾಲಿ ಶಾಸಕ ಮೇರುಭಾ ಧರ್ಮೇಂದ್ರ ಸಿಂಗ್ ಜಡೇಜಾ ಅವರನ್ನು ಬಿಜೆಪಿ ಕೈಬಿಟ್ಟಿತ್ತು. ಆ ಚುನಾವಣೆಯಲ್ಲಿ ಅಹಿರ್ ಶೇಕಡಾ 30 ರಷ್ಟು ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ 84,327 ಮತಗಳನ್ನು ಪಡೆದರೆ, ಕಾಂಗ್ರೆಸ್ 43,364 ಮತಗಳನ್ನು ಪಡೆದಿದೆ. ಮೇರುಭಾ ಧರ್ಮೇಂದ್ರ ಸಿಂಗ್ ಜಡೇಜಾ ಅವರನ್ನು ಜಾಮ್‌ನಗರ ಪಕ್ಷದ ಉಸ್ತುವಾರಿಯನ್ನಾಗಿ ಮಾಡಲಾಯಿತು.

2012ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಗೆದ್ದಿತ್ತು. ಬಿಜೆಪಿಯ ಮೇರುಭಾ ಧರ್ಮೇಂದ್ರಸಿನ್ಹ ಜಡೇಜಾ ಆಗ ಕಾಂಗ್ರೆಸ್‌ನಲ್ಲಿದ್ದರು.

ಜಾಮ್‌ನಗರ (ಉತ್ತರ) ವಿಧಾನಸಭಾ ಕ್ಷೇತ್ರವು ಜಾಮ್‌ನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. 2004 ಮತ್ತು 2009 ರಲ್ಲಿ ಜಾಮ್‌ನಗರ ಸಂಸದೀಯ ಸ್ಥಾನದಿಂದ ಕಾಂಗ್ರೆಸ್ ಗೆಲುವು ಹೊರತುಪಡಿಸಿ, 1989 ರಿಂದ ಬಿಜೆಪಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 

Published On - 2:33 pm, Thu, 8 December 22