ಬಿಜೆಪಿ ಪರ ಚಂದನವನ ನಟರ ಪ್ರಚಾರ: ಅಭಿಷೇಕ್ ಅಂಬರೀಶ್, ಕಿಚ್ಚ ಸುದೀಪ್ ಮತಯಾಚನೆ
ಅತ್ತ ನಟ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರದ ಕಣಕ್ಕೆ ಇಳಿದರೇ, ಇತ್ತ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಪುತ್ರ ಜ್ಯೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ ಮತಬೇಟೆಗೆ ಮುಂದಾಗಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಬಿಜೆಪಿ (BJP) ಪರ ಸ್ಯಾಂಡಲ್ ವುಡ್ (Sandalwood) ಚಲನಚಿತ್ರ ನಟರು ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಅತ್ತ ನಟ ಕಿಚ್ಚ ಸುದೀಪ್ (Kichcha Sudeepa) ಬಿಜೆಪಿ ಪರ ಪ್ರಚಾರದ ಕಣಕ್ಕೆ ಇಳಿದರೇ, ಇತ್ತ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಪುತ್ರ ಜ್ಯೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತಬೇಟೆಗೆ ಮುಂದಾಗಿದ್ದಾರೆ. ಹೌದು ಮೇ 1ನೇ ತಾರೀಕಿನಿಂದ ಅಭಿಷೇಕ್ ಅಂಬರೀಶ್ ಪ್ರಚಾರದ ಕಣಕ್ಕೆ ಇಳಿಯಲಿದ್ದಾರೆ. ನಾಳೆಯಿಂದಲೇ ಪ್ರಚಾರಕ್ಕೆ ದುಮುಖ ಬೇಕಿತ್ತು ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಜ್ಯೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ ಬೈಕ್ ರ್ಯಾಲಿ ಮೂಲಕ ಕೂತು ಮತಬೇಟೆ ಮಾಡಲಿದ್ದಾರೆ.
ಯೂತ್ ರ್ಯಾಲಿ ಇದಾಗಿರಲಿದ್ದು ಒಂದು ಸಾವಿರ ಬೈಕ್ಗಳನ್ನು ಒಗ್ಗೂಡಿಸಿಕೊಂಡು ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಮೇ ಒಂದರಿಂದ 8 ದಿನಗಳ ಕಾಲ ಹಳ್ಳಿ ಹಳ್ಳಿಗೂ ತೆರಳಿ ಮತಯಾಚಿಸಲಿದ್ದಾರೆ.
ಸದೀಪ್ ಪ್ರಚಾರದ ರೂಟ್ ಮ್ಯಾಪ್ ಫಿಕ್ಸ್
ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ನಂತರ ಯಾವಾಗಿಂದ ಪ್ರಚಾರಕ್ಕೆ ದುಮುಖತ್ತಾರೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಇದಕ್ಕೆ ಈಗ ತೆರೆ ಬಿದ್ದಿದೆ. ನಾಳೆ (ಏ.26) ರಂದು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ.
ಮೊಣಕಾಲ್ಮೂರು, ಜಗಳೂರು, ಮಾಯಕೊಂಡ ಮತ್ತು ದಾವಣಗೆರೆಯಲ್ಲಿ ಪ್ರಚಾರ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಏಪ್ರಿಲ್ 27 ಹಾಗೂ 28 ರಂದು ಹುಬ್ಬಳ್ಳಿ, ಗದಗ ಮತ್ತು ಶಿವಮೊಗ್ಗದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Tue, 25 April 23