ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಔರಾದ್ ವಿಧಾನಸಭಾ ಕ್ಷೇತ್ರದಿಂದ (Aurad Assembly constituency) ಬಿಜೆಪಿಯು ಹಾಲಿ ಶಾಸಕ, ಸಚಿವ ಪ್ರಭು ಚೌಹಾಣ್ ಅವರನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ಡಾ. ಶಿಂಧೆ ಭೀಮಸೇನ ರಾವ್, ಜೆಡಿಎಸ್ನಿಂದ ಜಯಸಿಂಗ್ ರಾಥೋಡ್, ಎಎಪಿಯಿಂದ ಬಾಬು ರಾವ್ ಅಡ್ಕೆ ಕಣಕ್ಕಿಳಿದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಭು ಚೌಹಾಣ್ 10,592 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರಭು ಚೌಹಾಣ್ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.
ಈ ಕ್ಷೇತ್ರದಲ್ಲಿ ಪ್ರಭು ಚೌಹಾಣ್ ನಿರಂತರ ಮೂರು ಬಾರಿ ಗೆಲುವು ದಾಖಲಿಸಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನವೇ ಈ ಕ್ಷೇತ್ರಕ್ಕೆ ಚೌಹಾಣ್ ಅವರೇ ಅಭ್ಯರ್ಥಿ ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಹೇಳಿತ್ತು.ಜನವರಿಯಲ್ಲಿ ನಡೆದಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಚೌಹಾಣ್ ಅವರನ್ನು ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದ್ದರು. ಚೌಹಾಣ್ ಅವರೇ ಬಿಜೆಪಿಯಿಂದ ಕಣಕ್ಕಿಳಿಯುವುದು ಅದಾಗಲೇ ಬಹುತೇಕ ಖಚಿತಗೊಂಡಿತ್ತು.
ತಿಂಗಳುಗಳ ಮೊದಲೇ ಕ್ಷೇತ್ದಾದ್ಯಂತ ಓಡಾಟ ಆರಂಭಿಸಿದ್ದ ಚೌಹಾಣ್, ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಹರಿವು ಮೂಡಿಸುವ ಕೆಲಸ ಶುರು ಮಾಡಿದ್ದರು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠ ಮತ್ತು ಲಿಂಗಾಯತ ಸಮುದಾಯಗಳ ಮತಗಳನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಹಾಗೂ ಜೆಡಿಎಸ್ ಮೂರನೇ ಸ್ಥಾನ ಪಡೆದಿದ್ದವು. ಈ ಬಾರಿ ಎರಡೂ ಪಕ್ಷಗಳು ಹೊಸಮುಖಗಳನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ನಡೆಸಿವೆ.
Published On - 12:29 am, Sat, 13 May 23