ಮತದಾನ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಬಳ್ಳಾರಿ

|

Updated on: May 10, 2023 | 6:13 PM

ಮತದಾನ ಕೇಂದ್ರದ ಆವರಣದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆಯೊಂದು ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಕಂಡುಬಂದಿದೆ.

ಮತದಾನ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಬಳ್ಳಾರಿ
ಮತದಾನ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
Follow us on

ಬಳ್ಳಾರಿ: ಮತದಾನ ಕೇಂದ್ರದ ಆವರಣದಲ್ಲಿ ತಾಯಿ ಮಗುವಿಗೆ ಜನ್ಮ (birth) ನೀಡಿರುವಂತಹ ಅಪರೂಪದ ಘಟನೆಯೊಂದು ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಕಂಡುಬಂದಿದೆ. ಮತದಾನ ಕೇಂದ್ರದಲ್ಲಿಯೇ ಹೆರಿಗೆ ನೋವು ಪ್ರಾರಂಭವಾಗಿದ್ದು, ಕೂಡಲೇ ಪಕ್ಕದ ಕೊಠಡಿ ಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೆರಿಗೆ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಯಿ ಮತ್ತು ಮಗು ಇಬ್ಬರನ್ನು ಶಿಫ್ಟ್ ಮಾಡಲಾಗಿದೆ.

ಮತಚಲಾವಣೆಗೆ ಬಂದ ಮಹಿಳೆ ಅಸ್ವಸ್ಥ

ಯಾದಗಿರಿ: ಮತಚಲಾವಣೆಗೆ ಬಂದ ಮಹಿಳೆ ಅಸ್ವಸ್ಥವಾಗಿರುವಂತಹ ಘಟನೆ ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವತ್ಕಲ್​ನಲ್ಲಿ ನಡೆದಿದೆ. ದೇವತ್ಕಲ್ ಗ್ರಾಮದ ಮತಗಟ್ಟೆ 123ರಲ್ಲಿ ಸರತಿ ಸಾಲಿನಲ್ಲಿ ಮಹಿಳೆ ನಿಂತಿದ್ದು, ಬಿಸಿಲಿನ ತಾಪ ಹೆಚ್ಚಾಗಿದ್ರಿಂದ ಕುಸಿದು ಬಿದಿದ್ದಾರೆ ಎನ್ನಲಾಗುತ್ತಿದೆ. ಮತದಾನಕ್ಕೆ ಬಂದ ಮಹಿಳೆಯದಿಂದ ಅಸ್ವಸ್ಥ ಮಹಿಳೆಗೆ ಗಾಳಿ ಬೀಸಿ, ನೀರು ಕುಡಿಸಿ ಮಹಿಳೆಯರು ಉಪಚರಿಸಿದ್ದಾರೆ.

ಇದನ್ನೂ ಓದಿ: ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ, ವ್ಯಕ್ತಿ ಸಾವು; ಇಂದು ಮತದಾನದ ನಂತರ ಸಾವನ್ನಪ್ಪಿದವರು ಎಷ್ಟು ಗೊತ್ತಾ?

ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ

ಚಾಮರಾಜನಗರ: ಕರ್ನಾಟಕ ವಿಧಾನಸಭೆಗೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಶೇ 52 ರಷ್ಟು ಮತ ಚಲಾವಣೆಯಾಗಿದ್ದು, ಮತದಾನ ಪ್ರಕ್ರಿಯೆ ಮುಂದುವರಿದಿದೆ. ಆದರೆ ಕೆಲವೆಡೆ ಮತದಾನದ ನಂತರ ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ಚಾಮರಾಜನಗರದಲ್ಲಿ ಆನೆ ದಾಳಿಗೆ ಸಿಲುಕಿ ಮತದಾರ ಸಾವನ್ನಪ್ಪಿದ ಘಟನೆಯೂ ನಡೆದಿದೆ.

ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಚಾಮರಾಜನಗರ ಜಿಲ್ಲೆಯಲ್ಲಿ ದಾರಿಯಲ್ಲಿ ಹೋಗುವವರು ಆನೆ ದಾಳಿಯ ಭಯದಿಂದಲೇ ಹೋಗುತ್ತಾರೆ. ಇಂದು ವ್ಯಕ್ತಿಯೊಬ್ಬರು ಮತದಾನಕ್ಕೆ ಹೋಗುತ್ತಿದ್ದಾಗ ಆನೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿ. ಹಳೇ ಮಾರ್ಟಳ್ಳಿಯಿಂದ ಹನೂರು ತಾಲೂಕಿನ ತೋಕೆರೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ದಾಳಿ ನಡೆಸಿದ ಆನೆ ಪುಟ್ಟಸ್ವಾಮಿಯನ್ನು ಕೊಂದು ಹಾಕಿದೆ.

ಇದನ್ನೂ ಓದಿ: ಮತಗಟ್ಟೆ ಎದುರೇ ಮಾರಾಮಾರಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ: FIR ದಾಖಲು

ಇನ್ನು, ಚಿತ್ರದುರ್ಗ ಜಿಲ್ಲೆಯಲ್ಲಿ ವೃದ್ಧರೊಬ್ಬರು ತಮ್ಮ ಅಮೂಲ್ಯ ಮತದಾನದ ನಂತರ ಸಾವನ್ನಪ್ಪಿದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ಅಮೀರ್ ಸಾಬ್‌ ಮೃತರು. ಮತದಾನದ ನಂತರ ಅಮೀತ್ ಸಾಬ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ರೇಣುಕಾಪುರದ ಮತಗಟ್ಟೆ ಸಂಖ್ಯೆ 97ರ ಬಳಿ ನಡೆದಿರುವ ಘಟನೆ ಇದಾಗಿದೆ.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 5:39 pm, Wed, 10 May 23