ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯನ್ನು ಮೆಟ್ಟಿಲಾಗಿಸಿಕೊಂಡು ಮರೆತ ಕಾಂಗ್ರೆಸ್: ಬಿವೈ ವಿಜಯೇಂದ್ರ ಕಿಡಿ
ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಮೆಟ್ಟಿಲಾಗಿಸಿಕೊಂಡು ಈಗ ಮರೆತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಬೆಂಗಳೂರು: ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯ (veerashaiva Lingayat community) ವನ್ನು ಕಾಂಗ್ರೆಸ್ ಮೆಟ್ಟಿಲಾಗಿಸಿಕೊಂಡು ಈಗ ಮರೆತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರೂ ಮೌನ ತಾಳಿದ್ದು, ವೀರಶೈವ ಲಿಂಗಾಯತ ಸಮುದಾಯದ 39 ಶಾಸಕರು ಗೆದ್ದಿದ್ದರೂ ಉನ್ನತ ಸ್ಥಾನ ಕೇಳುವಲ್ಲಿ ಗಟ್ಟಿ ಧ್ವನಿ ಕೇಳಿಸುತ್ತಿಲ್ಲ. ಈಗ ಕಾಂಗ್ರೆಸ್ ಪಕ್ಷದ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ. ಸಮುದಾಯವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡಿದೆ ಎಂದು ಹೇಳಿದರು.
ಲಿಂಗಾಯತ ಸಮುದಾಯಕ್ಕೆ ನ್ಯಾಯ ಕೊಡದೆ ವಂಚಿಸಿದೆ. ಕರ್ನಾಟಕದ ಜನತೆಗೆ ಶೀಘ್ರದಲ್ಲೇ ಕಾಂಗ್ರೆಸ್ನ ಸುಳ್ಳುಗಳ ಅರಿವಾಗಲಿದೆ. ಬಿಜೆಪಿ ಒಂದೇ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದೆ. ಬಸವಣ್ಣನ ಆಶಯಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಪಕ್ಷವಾಗಿದೆ. ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸ ಇದೆ ಎಂದಿದ್ದಾರೆ.
“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು”
Hope the citizens of Karnataka soon realize their folly of falling for the lies of Congress & make amends by standing with @BJP4India & @narendramodi ji in the service of “Maa Bharathi”.
“Jai Bharatha, Jai Karnataka” 3/3
— Vijayendra Yeddyurappa (@BYVijayendra) May 19, 2023
ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಸ್ವಾಮೀಜಿ ಭೇಟಿ
ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಬೋವಿ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಸಮುದಾಯದಿಂದ 3 ಜನ ಶಾಸಕರಿದ್ದಾರೆ. ಹೀಗಾಗಿ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ.
True face of Congress has been unveiled for the infinite time.
Congress which has always mistreated Lingayats can never do real justice to the community.
Its BJP which truly represents Anna Basavanna & his teachings, providing justice to all by following his philosophy of 2/3
— Vijayendra Yeddyurappa (@BYVijayendra) May 19, 2023
ಇದನ್ನೂ ಓದಿ: ಖಾತೆ ಕ್ಯಾತೆ ಶುರು: ತಮ್ಮ ಸಮುದಾಯದ ಶಾಸಕರ ಪರ ಸ್ವಾಮೀಜಿಗಳ ಬ್ಯಾಟಿಂಗ್
ಬಸವಣ್ಣನವರ ಪಾಲನೆ ಸಂಪುಟದಲ್ಲಿ ಹಾಗಬೇಕು. ಸಾಮಾಜಿಕ ನ್ಯಾಯದಡಿ ನಮ್ಮ ಸಮುದಾಯಕ್ಕೂ ಮಂತ್ರಿಗಿರಿ ಕೊಡಬೇಕು. ಸಾಮಾಜಿಕ ನ್ಯಾಯದಡಿ ಕೊಡುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ. ನಮ್ಮ ಸಮುದಾಯದ ಪರವಾಗಿ ಸ್ವಾಮೀಜಿಗಳು ಕೇಳುವುದು ತಪ್ಪಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಈಗ ಲಿಂಗಾಯತ ಸ್ವಾಮೀಜಿ ಒತ್ತಡ
ಸಿಎಂ ಸ್ಥಾನವನ್ನು ನಮ್ಮ ಸಮುದಾಯದವರಿಗೆ ನೀಡಬೇಕು ಎಂದು ಸ್ವಾಮೀಜಿಗಳು ಕಾಂಗ್ರೆಸ್ ಹೈ ಕಮಾಂಡ್ಗೆ ಒತ್ತಾಯ ಮಾಡಿದ್ದವು. ಒಕ್ಕಲಿಗ, ಕುರುಬ ಮತ್ತು ಲಿಂಗಾಯತ ಸ್ವಾಮೀಜಿ ಕೂಡ ಒತ್ತಡ ಹಾಕಿದ್ದರು. ಲಿಂಗಾಯತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವಂತೆ ಎಂ.ಬಿ.ಪಾಟೀಲ್ ಪರ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಈ ಕುರಿತಾಗಿ ವಿಡಿಯೋ ಹೇಳಿಕೆ ಒಂದನ್ನು ಸಹ ಬಿಡುಗಡೆ ಮಾಡಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:25 pm, Fri, 19 May 23