Karnataka Election 2023 Highlights: ಮಾಜಿ ಡಿಸಿಎಂ ಪರಮೇಶ್ವರ್ ಗೆದ್ದರೆ ನಾನು ಗೆದ್ದಂತೆ: ಸಿದ್ದರಾಮಯ್ಯ
Karnataka Assembly Polls Breaking News Highlights Updates: ಕರ್ನಾಟಕ ವಿಧಾನಸಭೆ ಚುನಾವಣಾ ಮತದಾನ ಮೇ 10 ರಂದು ನಡೆಯಲಿದ್ದು, 13ರಂದು ಮತ ಎಣಿಕೆ ಆರಂಭವಾಗುತ್ತದೆ. ರಾಜ್ಯ ರಾಜಕೀಯ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ...
Karnataka Breaking Kannada News Highlights Updates: ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ಬಿರುಸು ಹೆಚ್ಚುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಆರೋಪ-ಪ್ರತ್ಯಾರೋಪದ ಕೆಸೆರೆಚಾಟ ಜೋರಾಗಿಯೇ ನಡೆಸಿವೆ. ಬಿಜೆಪಿ ಸ್ಟಾರ್ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿಯವರು ಏ.29 ಮತ್ತು 30 ಎರಡು ದಿನ ರಾಜ್ಯ ಪ್ರವಾಸ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಿಂದ ಆರಂಭವಾದ ಅಬ್ಬರ ಪ್ರಚಾರ ಕಾರ್ಯ ಹಳೇ ಮೈಸೂರಿಗೆ ಬಂದು ತಲುಪಿದೆ. ಅಲ್ಲದೇ ಬಿಜೆಪಿಯ ಕೇಂದ್ರ ನಾಯಕರಾದ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ರಾಜ್ಯದಲ್ಲಿ ಮತಬೇಟೆ ಜೋರಾಗಿಯೇ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತಯಾಚನೆ ನಡೆಸುತ್ತಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
LIVE NEWS & UPDATES
-
Karnataka Election 2023 Live: ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ರಾಯಚೂರು: ಅಲ್ಕೋಡ್ ಹನುಮಂತಪ್ಪ ಕ್ರೂರ, ಮನುಷ್ಯತ್ವ ಇಲ್ಲ ವ್ಯಕ್ತಿ ಕರೆತಂದಿದ್ದರು. ದೇವದುರ್ಗ ಕ್ಷೇತ್ರದ ಜನ ಯೋಚನೆ ಮಾಡದೆ ಆತನನ್ನು ಆರಿಸಿ ತಂದ್ರು. ಆ ವ್ಯಕ್ತಿಯ ನಡವಳಿಕೆ ಈಗ ಬಹಳ ಬದಲಾಗಿದೆ. ನನ್ನ ಬಾಯಲ್ಲಿ ಆ ವ್ಯಕ್ತಿಯ ಹೆಸರಲು ಹೇಳಲು ಇಷ್ಟವಿಲ್ಲ. ಅವನ ಹೆಸರು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
-
Karnataka Election 2023 Live: ಪರಮೇಶ್ವರ್ ಗೆದ್ದರೆ ನನಗೆ ಆಗುವ ಸಂತೋಷ ಬೇರೆ ಯಾರಿಗೂ ಆಗಲ್ಲ
ತುಮಕೂರು: ಪರಮೇಶ್ವರ್ ಗೆದ್ದರೆ ನನಗೆ ಆಗುವ ಸಂತೋಷ ಬೇರೆ ಯಾರಿಗೂ ಆಗಲ್ಲ. ಪರಮೇಶ್ವರ್‌ಗೆ ಮತ ಹಾಕಲೇಬೇಕೆಂದ ಮಾಜಿ ಸಿಎಂ ಸಿದ್ದರಾಮಯ್ಯ. ಬಡವರ ಪರ ಅತ್ಯಂತ ಕಾಳಜಿ ಇರುವ ವ್ಯಕ್ತಿ. ನನಗಿಂತ ಹೆಚ್ಚು ಬುದ್ಧಿವಂತ. ಹೀಗಾಗಿ ಮುಂದೆ ನಮ್ಮ ಸರ್ಕಾರ ಹೇಗೆ ಇರಬೇಕೆಂದು ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದರು.
-
Karnataka Election 2023 Live: ಪರಮೇಶ್ವರ್ ಗೆದ್ದರೆ ನಾನು ಗೆದ್ದಂತೆ: ಸಿದ್ದರಾಮಯ್ಯ
ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಗೆದ್ದರೆ ನಾನು ಗೆದ್ದಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಕೊರಟಗೆರೆಯಲ್ಲಿ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಗೆಲ್ಲೋದು ನೂರಕ್ಕೆ ನೂರು ಗ್ಯಾರಂಟಿ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ. ಡಾ.ಜಿ.ಪರಮೇಶ್ವರ್ ಗೆಲ್ಲೋದು ಅಷ್ಟೇ ಸತ್ಯ ಎಂದರು.
Karnataka Election 2023 Live: ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಬಿದ್ದರೆ ಟಿಕೆಟ್ ನೀಡುವುದಿಲ್ಲ
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಬಿದ್ದರೆ ಟಿಕೆಟ್ ನೀಡುವುದಿಲ್ಲ ಎಂದು ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಶಾಸಕ ಯತ್ನಾಳ್ ಹೇಳಿದರು. ಆದ್ದರಿಂದಲೇ ನಾನು ನರೇಂದ್ರ ಮೋದಿ ಕಾಲಿಗೆ ಬೀಳುವುದಿಲ್ಲ. ಮೋದಿಯವರು ಅಷ್ಟು ಸರಳವಾಗಿದ್ದಾರೆ ಎಂದು ಶಾಸಕ ಯತ್ನಾಳ್ ಹೇಳಿದರು.
Karnataka Election 2023 Live: ನಾಳೆ ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ
ತುಮಕೂರು: ನಾಳೆ ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಸಿದ್ದರಾಮಯ್ಯ ಹೇಳಿದರು. ಮುಂದೆ ನಮ್ಮ ಸರ್ಕಾರ ಹೇಗೆ ಇರಬೇಕೆಂದು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಡಾ.ಜಿ.ಪರಮೇಶ್ವರ್ ಇರುತ್ತೇವೆ ಎಂದರು.
Karnataka Election 2023 Live: ನಾಳೆ, ನಾಡಿದ್ದು ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ
ಬೆಂಗಳೂರು: ನಾಳೆ ಮತ್ತು ನಾಡಿದ್ದು ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10.25 ಕ್ಕೆ ಚಿತ್ರದುರ್ಗ ಏರ್ ಪೋರ್ಟ್ಗೆ ಮೋದಿ ಆಗಮಿಸುತ್ತಾರೆ. ಚಿತ್ರದುರ್ಗ ಏರ್ ಪೋರ್ಟ್ ನಿಂದ ಹೆಲಿಕಾಫ್ಟರ್ ಮೂಲಕ 10.50 ಕ್ಕೆ ಚಳ್ಳಕೆರೆ ಹೆಲಿಪ್ಯಾಡ್ಗೆ ಆಗಮನ.
11 ಗಂಟೆಗೆ ಚಳ್ಳಕೆರೆಯಲ್ಲಿ ಸಾರ್ವಜನಿಕ ಪ್ರಚಾರ ಸಮಾವೇಶ 12 ಗಂಟೆಗೆ ಚಳ್ಳಕೆರೆಯಿಂದ ಹೆಲಿಕಾಫ್ಟರ್ ಮೂಲಕ ಹೊಸಪೇಟೆಗೆ ಪ್ರಯಾಣ 12.45 ಕ್ಕೆ ಹೊಸಪೇಟೆ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ 1 ಗಂಟೆಗೆ ಹೊಸಪೇಟೆಯಲ್ಲಿ ಸಾರ್ವಜನಿಕ ಪ್ರಚಾರ ಸಮಾವೇಶ 2 ಗಂಟೆಗೆ ಹೊಸಪೇಟೆಯಿಂದ ಸಿಂಧನೂರಿಗೆ ಹೆಲಿಕಾಫ್ಟರ್ ಮೂಲಕ ಪ್ರಯಾಣ 2.35 ಕ್ಕೆ ಸಿಂಧನೂರು ಹೆಲಿಪ್ಯಾಡ್ ಗೆ ಆಗಮನ 2.45 ರಿಂದ ಸಿಂಧನೂರಿನಲ್ಲಿ ಸಾರ್ವಜನಿಕ ಪ್ರಚಾರ ಸಮಾವೇಶ 3.45 ಕ್ಕೆ ಸಿಂಧನೂರಿನಿಂದ ಕಲ್ಬುರ್ಗಿ ಗೆ ಹೆಲಿಕಾಫ್ಟರ್ ಮೂಲಕ ಪ್ರಯಾಣ 4.45ಕ್ಕೆ ಕಲ್ಬುರ್ಗಿಗೆ ತಲುಪಲಿರುವ ಮೋದಿ 5 ಗಂಟೆಗೆ ಕಲ್ಬುರ್ಗಿಯಲ್ಲಿ ರೋಡ್ ಶೋ 45 ನಿಮಿಷಗಳ ಕಾಲ ರೋಡ್ ಶೋ ನಾಳೆ ರಾತ್ರಿ ಕಲ್ಬುರ್ಗಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ.
Karnataka Election 2023 Live: ರಾಜ್ಯ ಬಿಜೆಪಿಗೆ ಈಶ್ವರಪ್ಪ ಮತ್ತು ಯಡಿಯೂರಪ್ಪ ದೊಡ್ಡ ಕೊಡುಗೆ
ಶಿವಮೊಗ್ಗ: ರಾಜ್ಯ ಬಿಜೆಪಿಗೆ ಈಶ್ವರಪ್ಪ ಮತ್ತು ಯಡಿಯೂರಪ್ಪ ದೊಡ್ಡ ಕೊಡುಗೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಇವರು ಇಬ್ಬರು ಈ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಿದ್ದಾರೆ. ಈಶ್ವರಪ್ಪ ಅವರೇ ಚನ್ನಬಸಪ್ಪ ಹೆಸರು ಸೂಚನೆ ಮಾಡಿದ್ದರು. ಇಂತಹ ರೋಡ್ ಶೋ ನಾನು ಈ ಹಿಂದೆ ನೋಡಿರಲಿಲ್ಲ ಎಂದು ಹೇಳಿದರು.
Karnataka Election 2023 Live: ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ
ತುಮಕೂರು: ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಇಲ್ಲಿಯವರೆಗೂ ಇದ್ದ ಬಿಜೆಪಿ ಸರ್ಕಾರ ತೆಗೆದು ಕಾಂಗ್ರೆಸ್ ಸರ್ಕಾರ ತರಬೇಕೆಂಬ ಭಾವನೆಗಳು ಜನರಿಗೆ ಇದೆ. ಎಲ್ಲಾ ಬೆಲೆ ಏರಿಕೆಗಳು ಆಗಿವೆ. ಭ್ರಷ್ಟಾಚಾರ ಹೆಚ್ಚಿದೆ. ವಿಧಾನಸೌಧದಲ್ಲಿ ಕಂಬಗಳಿವೆ. ಅಲ್ಲಿ ಕಂಬಕ್ಕೆ ಕೇಳಿದ್ರೆ ಅದು 40% ಅನ್ನುತ್ತೆ. ಯಾಕೆಂದರೆ ಅಷ್ಟರಮಟ್ಟಿಗೆ ಭ್ರಷ್ಟಾಚಾರ ಬಿಜೆಪಿ ಮಾಡಿದೆ ಎಂದು ಕೊರಟಗೆರೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪರಮೇಶ್ವರ್ ಭಾಷಣ ಮಾಡಿದರು.
Karnataka Election 2023 Live: ಜೆಡಿಎಸ್ ಹೆಸರಿಗೆ ಮಾತ್ರ ಸೆಕ್ಯೂಲರ್ ಪಾರ್ಟಿ-ಸಿದ್ದರಾಮಯ್ಯ
ತುಮಕೂರು: ಜೆಡಿಎಸ್ ಹೆಸರಿಗೆ ಮಾತ್ರ ಸೆಕ್ಯೂಲರ್ ಪಾರ್ಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು ಸೆಕ್ಯೂಲರ್ ಪಾರ್ಟಿ ಅಂತಾ ಹೆಸರಿಟ್ಟುಕೊಂಡು ಬಿಜೆಪಿ ಜತೆ ಸರ್ಕಾರ ರಚಿಸಿದ್ರು. JDSನವರು ಗೆದ್ದಿತ್ತಿನ ಬಾಲ ಹಿಡಿಯುತ್ತಾರೆ, ಬಿಜೆಪಿಯ ಬಿ ಟೀಮ್. ಪಂಚರತ್ನ ಅಲ್ಲ ದಶರತ್ನಗಳನ್ನ ಮಾಡಿದ್ರೂ JDS ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.
Karnataka Election 2023 Live: ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್
ಯಾದಗಿರಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ ಈ ಎಲ್ಲಾ ಕಾರ್ಯಕ್ರಮ ತರುವುದಕ್ಕೆ ಅವಕಾಶ ಇತ್ತಲ್ವಾ ಅವಾಗ ಯಾಕೆ ತರಲಿಲ್ಲ. ಹಾಲು ಕೊಡುವುದು ಆಗಲೇ ಮಾಡಬಹುದಿತ್ತಲಾ. ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ಮೋದಿ ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಯಾರು ಇವರಿಗೆ ಅನುಮತಿ ಕೊಟ್ರು ಘೋಷಣೆ ಮಾಡೋಕೆ ಎಂದು ಕಿಡಿಕಾರಿದರು.
Karnataka Election 2023 Live: ಪ್ರಿಯಾಂಕ್ ಖರ್ಗೆಯಷ್ಟು ದೊಡ್ಡವನಲ್ಲ, ಅವರಷ್ಟು ಬುದ್ಧಿವಂತನೂ ಅಲ್ಲ
ಯಾದಗಿರಿ: ಪ್ರಿಯಾಂಕ್ ಖರ್ಗೆಯಷ್ಟು ದೊಡ್ಡವನಲ್ಲ, ಅವರಷ್ಟು ಬುದ್ಧಿವಂತನೂ ಅಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಾವು ಹಳ್ಳಿ ರೈತರ ಮಕ್ಕಳು, ದೊಡ್ಡವರ ಬಗ್ಗೆ ಮಾತಾಡೋಕೆ ಆಗುತ್ತಾ? ನಮ್ಮದೊಂದು ಸಣ್ಣಪಕ್ಷ. ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್ ಪಕ್ಷಕ್ಕೆ ಹಾಕಿದಂತೆ ಅಂತಾರೆ ಎಂದರು.
Karnataka Election 2023 Live: ಕುಮಾರಸ್ವಾಮಿ ಸಿಎಂ ಆಗೋಕೆ ಅವಕಾಶ ಕಲ್ಪಿಸಿಕೊಡಿ
ಮಂಗಳೂರು: ಮೊಯಿದ್ದೀನ್ ಬಾವ ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ. ಮತಗಟ್ಟೆಗೆ ಹೋಗುವಾಗ ಕಾಂಗ್ರೆಸ್ ಚಿಹ್ನೆ ಮರೆತು ಮೊಯಿದ್ದೀನ್ ಬಾವಗೆ ಮತ ನೀಡಿ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೆಗೌಡ ಹೇಳಿದರು. ಬಾವ ರನ್ನು 13ನೇ ತಾರೀಖು ವಿಧಾನಸಭೆಗೆ ಕಳುಹಿಸಿಕೊಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋಕೆ ಅವಕಾಶ ಕಲ್ಪಿಸಿಕೊಡೊದು ಶತ ಸಿದ್ದ ಎಂದರು.
Karnataka Election 2023 Live: ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಿಎಂ ಬೊಮ್ಮಾಯಿ ವ್ಯಂಗ್ಯ
ಮೈಸೂರು: ಮೇ 10ರವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ ಗ್ಯಾರಂಟಿ ಗ್ಯಾರಂಟಿ ನಂತರ ಗಳಗಂಟಿ ಗಳಗಂಟಿ ಗಳಗಂಟಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.
Karnataka Election 2023 Live: ಪ್ರಧಾನಿಗೆ ನಿರಂತರವಾಗಿ ಅವಮಾನ ಮಾಡ್ತಿದ್ದಾರೆ: ಶೋಭಾ ಕರಂದ್ಲಾಜೆ
ಬೆಂಗಳೂರು: ದೂರು ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಿಯಾಂಕ್ ಖರ್ಗೆ ನಾಲಾಯಕ್ ಪ್ರಧಾನಮಂತ್ರಿ ಅಂತ ಹೇಳಿದ್ದಾರೆ. ಇಂತಹ ಹೇಳಿಕೆ ನೋಡಿದ್ರೆ ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಹ ಸೋಲುವ ಭೀತಿಯಲ್ಲಿದ್ದಾರೆ. ವರುಣದಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
Karnataka Election 2023 Live: ಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು: ಪ್ರಧಾನಿ ಮೋದಿ ಮೇಲೆ ಕಾಂಗ್ರೆಸ್ ವಾಗ್ದಾಳಿ ಮುಂದುವರಿದಿದೆ. ಸದ್ಯ ಮೋದಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ವಿಚಾರವಾಗಿ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
Karnataka Election 2023 Live: ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರಾಜಸ್ಥಾನ ಸಿಎಂ ಪ್ರಚಾರ
ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರಾಜಸ್ಥಾನ ಸಿಎಂ ಗೆಹ್ಲೋಟ್ ಪ್ರಚಾರ ಮಾಡಿದರು. ‘ಕೈ’ ಅಭ್ಯರ್ಥಿ ಯು.ಬಿ.ವೆಂಕಟೇಶ್ ಪರ ಮತಯಾಚಿಸಿದರು. ಬಸವನಗುಡಿ ಕ್ಷೇತ್ರದ ನಿಜಗುಣ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ.
Karnataka Election 2023 Live: ಹೇಗಿದೆ ನೋಡಿ ಅಮೀತ್ ಶಾ ಅಬ್ಬರದ ರೋಡ್ ಶೋ
ರಾಣೆಬೆನ್ನೂರು: ರಾಜ್ಯದಲ್ಲಿ ಇಂದು ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಾಕ್ಯ ಅಮೀತ್ ಶಾ ಅಬ್ಬರದ ರೋಡ್ ಶೋ ನಡೆಸಿದ್ದಾರೆ. ಗುಬ್ಬಿ, ತಿಪಟೂರು, ರಾಣೆಬೆನ್ನೂರು ಸೇರಿದಂತೆ ರಾಜ್ಯದ ವಿವಿದೆಡೆ ಅಮಿತ್ ಶಾ ಮಿಂಚಿನ ಪ್ರಚಾರ ಮಾಡಿದ್ದಾರೆ. ಅಮಿತ್ ಶಾ ರೋಡ್ ಶೋ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಹೆಜ್ಜೆ ಹಾಕಿದ್ದಾರೆ.
Karnataka Election 2023 Live: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಜೆಪಿ ನಡ್ಡಾ ಪ್ರಚಾರ
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಜೆ.ಪಿ.ನಡ್ಡಾ ರೋಡ್ಶೋ ಮಾಡಿದರು. ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದರು. ಸುಂಕದಕಟ್ಟೆಯ ಪೈಪ್ಲೈನ್ ರೋಡ್ನಿಂದ ನಡ್ಡಾ ರೋಡ್ಶೋ ಮಾಡಿದ್ದು, ಮುನಿರತ್ನ ಸಾಥ್ ನೀಡಿದರು.
Karnataka Election 2023 Live: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ: ಸಿದ್ಧರಾಮಯ್ಯ
ತುಮಕೂರು: ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ನಾನೆಂದೂ ನೋಡಿಲ್ಲ ಎಂದು ಜಿಲ್ಲೆಯ ಪಾವಗಡದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವ ಇಂತಹ ಪ್ರಧಾನಿಯನ್ನು ಇತಿಹಾಸದಲ್ಲೇ ನೋಡಿಲ್ಲ. ಭಾರತದ ಇತಿಹಾಸದಲ್ಲಿ ಇಷ್ಟು ಸುಳ್ಳು ಹೇಳುವ ಪ್ರಧಾನಿ ನೋಡಿಲ್ಲ ಎಂದು ಕಿಡಿಕಾರಿದ್ದಾರೆ.
Karnataka Election 2023 Live: ಸುದೀಪ್ ನೋಡಲು ಹರಿದು ಬಂದ ಅಭಿಮಾನಿಗಳ ದಂಡು
ಬೆಳಗಾವಿ: ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ರೋಡ್ಶೋ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಸುದೀಪ್ ಮತಯಾಚನೆ ಮಾಡಿದರು. ಈ ವೇಳೆ ಸುದೀಪ್ ನೋಡಲು ಹರಿದು ಬಂದ ಅಭಿಮಾನಿಗಳ ದಂಡು.
Karnataka Election 2023 Live: ಹಿಂಬಾಗಿಲಿನಿಂದ ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡಿದ್ರು
ತುಮಕೂರು: ರಾಜ್ಯದಲ್ಲಿ BJP ಜನರ ಆಶೀರ್ವಾದ ಪಡೆದು ಸರ್ಕಾರ ಮಾಡಿದ್ದಲ್ಲ. ಹಿಂಬಾಗಿಲಿನಿಂದ ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡಿದರು ಎಂದು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಲೂಟಿ ಬಿಟ್ಟು ಬೇರೆ ಏನೂ ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.
Karnataka Election 2023 Live: ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ: ಸಿದ್ಧರಾಮಯ್ಯ
ಗದಗ: ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿರುವುದು 40% ಕಮಿಷನ್ ಸರ್ಕಾರ. 40% ಕಮಿಷನ್ ಬಗ್ಗೆ ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಆದರೆ ಈವರೆಗೂ ಪ್ರಧಾನಿ ಮೋದಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹರಿಹಾಯ್ದರು.
Karnataka Election 2023 Live: ಬಿಜೆಪಿ ಪ್ರಣಾಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ
ಗದಗ: ಬಿಜೆಪಿ ನಾಯಕರು ಬೋಗಸ್ ಭರವಸೆಗಳನ್ನು ಕೊಡುತ್ತಾರೆ ಎಂದು ಬಿಜೆಪಿ ಪ್ರಣಾಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, 2018ರಲ್ಲಿ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಕೇವಲ 55 ಭರವಸೆ ಮಾತ್ರ ಈಡೇರಿಸಿದ್ದಾರೆ.
Karnataka Election 2023 Live: ಕಿಚ್ಚ ಸುದೀಪ್ ರೋಡ್ ಶೋ ಕೊನೆ ಕ್ಷಣದಲ್ಲಿ ರದ್ದು
ಬೆಳಗಾವಿ: ತಾರಿಹಾಳ ಗ್ರಾಮದಲ್ಲಿ ಯುವಕನ ಮರ್ಡರ್ ಹಿನ್ನೆಲೆ ಗ್ರಾಮೀಣ ಮತಕ್ಷೇತ್ರದಲ್ಲಿ ಇಂದು ನಡೆಯಬೇಕಿದ್ದ ನಟ ಕಿಚ್ಚ ಸುದೀಪ್ ರೋಡ್ ಶೋ ಕೊನೆ ಕ್ಷಣದಲ್ಲಿ ರದ್ದಾಗಿದೆ. ಮೊದಲು ಸುಳೇಭಾವಿಯಲ್ಲಿ ರೋಡ್ ಶೋ ನಿಗಿದಿಯಾಗಿತ್ತು. ನಂತರ ಸುಳೇಭಾವಿ ರೋಡ್ ಶೋ ಕೂಡ ಕ್ಯಾನ್ಸಲ್ ಆಗಿ ಬಳಿಕ ತಾರಿಹಾಳ ಗ್ರಾಮದಲ್ಲಿ ನಿಗದಿಯಾಗಿತ್ತು. ಆದರೆ ತಾರಿಹಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮರ್ಡರ್ ಹಿನ್ನೆಲೆ ಸುದೀಪ್ ರೋಡ್ ಶೋ ರದ್ದು ಪಡಿಸಲಾಗಿದೆ. ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೊಳ್ಕರ್ ಪರ ಸುದೀಪ್ ಪ್ರಚಾರ ಮಾಡಬೇಕಿತ್ತು.
Karnataka Assembly Election 2023: ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ: ನಟ ಕಿಚ್ಚ ಸುದೀಪ್ ರೋಡ್ ಶೋ ರದ್ದು
Karnataka Election 2023 Live: ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ವಿರುದ್ಧ FIR
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಆಪ್ತ ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ವಿರುದ್ದ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಏಪ್ರಿಲ್ 29 ರಂದು ಬಹಿರಂಗ ಸಭೆಯಲ್ಲಿ ಕೋಮು ಸೌಹಾರ್ದತೆ ಕದಡುವ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿನ್ನೆಲೆ FIR ದಾಖಲಿಸಲಾಗಿದೆ.
Karnataka Election 2023 Live: ವಿನಾಶದ ಅಂಚಿನಲ್ಲಿ ಕಾಂಗ್ರೆಸ್ ಪಕ್ಷ: ಅರುಣ್ ಸಿಂಗ್
ಬಾಗಲಕೋಟೆ: ಕಾಂಗ್ರೆಸ್ ಪಕ್ಷ ವಿನಾಶದ ಅಂಚಿನಲ್ಲಿದೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಏನೇ ಗ್ಯಾರಂಟಿಗಳನ್ನು ನೀಡಿದರೂ ಜನರು ನಂಬುವದಿಲ್ಲ. ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲೆಲ್ಲ ಕಾಂಗ್ರೆಸ್ ಸೋಲೇ. ಎಷ್ಟೇ ಚುನಾವಣಾ ಪ್ರಚಾರ ಮಾಡಿದರೂ ಪೂರ್ತಿಯಾಗಿ ಕಾಂಗ್ರೆಸ್ ಪಕ್ಷ ವಿನಾಶ ಎಂದರು.
Karnataka Election 2023 Live: ನಾಳೆ ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಪ್ರಚಾರ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ನಾಳೆ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಬಳಿಕ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ DRDO ಆವರಣದಲ್ಲಿರುವ ಏರ್ ಪೋರ್ಟ್ಗೆ 10:25ಕ್ಕೆ ಆಗಮಿಸಲಿದ್ದಾರೆ. ಬಳಿ DRDO ಏರ್ ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಚಾಮರಾಜನಗರ: ಪ್ರಚಾರದ ವೇಳೆ ಲೊ ಬಿಪಿ, ತಲೆ ಸುತ್ತಿನಿಂದ ಕುಸಿದ ವಿ ಸೋಮಣ್ಣ
ಚಾಮರಾಜನಗರ: ವಸತಿ ಸಚಿವ ವಿ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ವಿಧನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು (ಮೇ.01) ಚಾಮರಾಜನಗರದ ಕೋಡಿಮಳೆ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಬಿಸಿಲಿನ ಬೇಗೆಯಿಂದ ಬಳಲಿ ಲೊ ಬಿಪಿ, ತಲೆ ಸುತ್ತು ಬಂದಿದೆ. ಕೂಡಲೆ ಅವರಿಗೆ ಬೆಂಬಲಿಗರು ಕೋಡಿಮೊಳೆ ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದ್ದಾರೆ.
Karnataka Election Live: ಗುಬ್ಬಿಯಲ್ಲಿ ಅಮಿತ್ ಶಾ ರೋಡ್ ಶೋ ಆರಂಭ
ತುಮಕೂರು: ಜಿಲ್ಲೆ ಗುಬ್ಬಿಯ ಚೆನ್ನಬಸವೇಶ್ವರ ದೇವಸ್ಥಾನದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಪ್ರಚಾರ ಮಾಡುತ್ತಿದ್ದಾರೆ.
#WATCH | Union Home Minister Amit Shah holds a roadshow in Tumkuru District, Karnataka.#KarnatakaElection2023 pic.twitter.com/MJrG3Fhd9P
— ANI (@ANI) May 1, 2023
Karnataka Election Live: ವಿಷಕನ್ಯೆ ಎಂದಿದ್ದೇನೆ, ಕ್ಷಮೆ ಕೇಳಲ್ಲ: ಬಸನಗೌಡ ಪಾಟೀಲ್ ಯತ್ನಾಳ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಷಸರ್ಪ ಎಂದಿದ್ದಕ್ಕೆ ವಿಷಕನ್ಯೆ ಎಂದಿದ್ದೇನೆ, ನಾನು ಕ್ಷಮೆ ಕೇಳಲ್ಲ. ದೊರೆಸ್ವಾಮಿ ನಾಟಕ ಕಂಪನಿಗೆ ಕಾಂಗ್ರೆಸ್ ಏಜೆಂಟ್ ಅಂದಿದ್ದೆ. ನಾನು ರಾಜೀನಾಮೆ ಕೊಡ್ತೀನಿ, ಕ್ಷಮೆ ಕೇಳಲ್ಲ. ಪ್ರಧಾನಿ ಮೋದಿಯವರನ್ನ ಮೋದಿ ಬಗ್ಗೆ 91 ಸಾರಿ ಬೈದಿದ್ದಾರೆ. ವಿಷ ಸರ್ಪ ಅಂದಾಗ ನಾನು ವಿಷಕನ್ಯೆ ಎಂದಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
Karnataka Election Live: ಶಿವಮೊಗ್ಗ ನಗರಕ್ಕೆ ಆಗಮಿಸಿದ ಅಮಿತ್ ಶಾ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದು, ಅಮೀರ್ ಅಹ್ಮದ ವೃತ್ತದಿಂದ ರೋಡ್ ಶೋ ಆರಂಭವಾಗಿದೆ. ಈ ಹಿಂದೆ ಇದೇ ವೃತ್ತದಲ್ಲಿ ಸಾವರ್ಕರ್ ಫ್ಲೇಕ್ಸ್ ವಿಚಾರವಾಗಿ ಗಲಾಟೆ ಲಾಠಿ ಚಾರ್ಜ್, ಚಾಕು ಇರಿತ ಪ್ರಕರಣ ನಡೆದಿತ್ತು. ಬಳಿಕ ಇದೇ ಪ್ರಕರಣದ ತನಿಖೆ ವೇಳೆ ಶಂಕಿತ ಉಗ್ರರ ಪತ್ತೆ ಆಗಿದ್ದರು. ಈ ಹಿನ್ನಲೆ ಅಮೀರ್ ಅಹ್ಮದ್ ವೃತ್ತದಲ್ಲಿ ಪೊಲೀಸ್ ಸರ್ಪ ಗಾವಲು ಇದೆ.
Karnataka Election Live: ಪ್ರಜಾಕೀಯದ 110 ಜನ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ
ಬೆಂಗಳೂರು: ‘ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’. ಜನರ ಡಿಮ್ಯಾಂಡ್ ನಮಗೆ ಗೊತ್ತಿದೆ. ಪಾರದರ್ಶಕ ರಿಪೋರ್ಟ್ ಕೊಡುತ್ತೇವೆ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ. ಪ್ರಜಾಕೀಯ ಬರೀ ವೋಟ್ ಹಾಕಿ ಅಂತಿಲ್ಲ ನಮ್ಮ ಜೊತೆ ನಿರಂತರವಾಗಿ ಕನೆಕ್ಟ್ ಆಗಬೇಕು ಎಂದು ನಟ ಉಪೇಂದ್ರ ಹೇಳಿದ್ದಾರೆ. ಈ ವೇಳೆ 110 ಜನ ಅಭ್ಯರ್ಥಿಗಳನ್ನು ಉಪೇಂದ್ರ ಪರಿಚಯಿಸಿದರು. ಇದು ವಿಚಾರಗಳ ಪ್ರಚಾರ. ಹಳ್ಳಿ ಹಳ್ಳಿಗೂ ಪ್ರಜಾಕೀಯ ತಲುಪಿದೆ. 110 ಕ್ಷೇತ್ರದಲ್ಲೂ ಪ್ರಜಾಕೀಯ ಬರುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Karnataka Election Live: ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಏನಿದೆ
1. ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್ ಗಳನ್ನು ಉಚಿತವಾಗಿ ವಿತರಿಸುತ್ತೇವೆ.
2. ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಅರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ ವನ್ನು ಸ್ಥಾಪಿಸುತ್ತೇವೆ.
3. ‘ಪೋಷಣೆ’ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕಳೆ ಶ್ರೀ ಅನ್ನ ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ.
4. ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ [ಯುಸಿಸಿ) ಜಾರಿಗೊಳಿಸುತ್ತೇವೆ.
5. ರಾಜ್ಯದಾದ್ಯಂತ ನಿವೇಶನ ರಹಿತ/ ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.
6. ‘ಒನಕೆ ಓಬವ್ವಸಾಮಾಜಿಕ ನ್ಯಾಯ ನಿಧಿ’ ಯೋಜನೆಯನ್ನು ಪ್ರಾರಂಭಿಸುತ್ತೇವೆ. ಈ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ – 10 ಸಾವಿರದವರೆಗೆ ತಾಳಿಯಾಗುವ ಠೇವಣಿ ನೀಡುತ್ತೇವೆ.
7. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ‘ಸುಲಲಿತ ಜೀವನ’ಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುತ್ತೇವೆ ಹಾಗೂ ಕಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತೇವೆ.
8.“ವಿಶ್ವೇಶ್ವರಯ್ಯ ವಿದ್ಯಾ ಯೋಜನೆ’ ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.
9. ‘ಸಮನ್ವಯ ಯೋಜನೆ’ ಇದರಡಿ ತ್ವರಿತಗತಿಯಲ್ಲಿ SME ಗಳು ಮತ್ತು ITI ಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ.
10. ಐಎಎಸ್/ಕೆಎಎಸ್/ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ಮಹತ್ವಾಕಾ೦ಕ್ಷೆಯ ಯುವಜನರಿಗೆ ವೃತ್ತಿ ಬೆಂಬಲವನ್ನು ಒದಗಿಸುತ್ತೇವೆ.
11. ‘ಮಿಷನ್ ಸ್ವಾಸ್ಥ್ಯ ಕರ್ನಾಟಕ’ದ ಅಡಿ ಸರ್ಕಾರಿ ಆಸ್ಪತ್ರೆ /ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪಿಸುತ್ತೇವೆ. ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸುತ್ತೇವೆ.
12. ನಮ್ಮಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು ‘ರಾಜ್ಯ ರಾಜಧಾನಿ ಪ್ರದೇಶ’ ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತೇವೆ. ಸುಲಲಿತ ಜೀವನಕ್ಕೆ ಅನುವುಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿಸುತ್ತೇವೆ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್‌ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುತ್ತೇವೆ.
13. ಕರ್ನಾಟಕವನ್ನು ಎಲೆಕ್ನಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್ ಗಳನ್ನು ಎಲೆಕ್ನಿಕ್ ಬಸ್‌ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ‘ಇಬಿ ಸಿಟಿ’ ಅಭಿವೃದ್ಧಿ
14. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 2 30,000 ಕೋಟಿ ಮೊತ್ತದ ‘ಕೆ-ಅಗಿ ಫಂಡ್’ ಸ್ಥಾಪಿಸುತ್ತೇವೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್ ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್ ಗಳನ್ನು ಸ್ಥಾಪಿಸುತ್ತೇವೆ.
15. ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಿ ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು ಕಲ್ಯಾಣ ಸರ್ಕ್ಯೂಟ್ ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಕಾವೇರಿ ಸರ್ಕ್ಯೂಟ್ ಗಾಣಗಾಪುರ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು 91,500 ಕೋಟಿ ವಿನಿಯೋಗಿಸುತ್ತೇವೆ.
16. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಬೆಂಗಳೂರಿನ ಆಚೆ ಸೃಷ್ಟಿಸುವ ಲಾಜಿಸ್ಟಿಕ್ಸ್ ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಸಂಯೋಜಿಸುವ ಮೂಲಕ ‘ಉತ್ಪಾದನಾ ಆಧರಿತ ಪ್ರೋತ್ಸಾಹ’ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ.
Karnataka Election Live: ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು: ಸಿಎಂ ಬೊಮ್ಮಾಯಿ
ಬೆಂಗಳೂರು: ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ನೀಡುತ್ತೇವೆ. 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಸಿರಿಧಾನ್ಯ ನೀಡುತ್ತೇವೆ ಎಂದು ಹೇಳಿದರು.
Karnataka Election Live: ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಈಗಾಗಲೇ ಬಜೆಟ್ನಲ್ಲೂ ಕೃಷಿಗೂ ಹೆಚ್ಚು ಆದ್ಯತೆ ನೀಡಿದ್ದೇವೆ. ಸಿರಿಧಾನ್ಯಗಳ ಉತ್ಪಾದನೆ, ಮೀನುಗಾರಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಹೇಳಿದರು.
Karnataka Election Live: ಜನರ ಹಿತದೃಷ್ಟಿಯಿಂದ ಪ್ರಣಾಳಿಕೆ ತಯಾರಿಸಿದ್ದೇವೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಜನರ ಹಿತದೃಷ್ಟಿಯನ್ನಿಕೊಟ್ಟುಕೊಂಡು ಪ್ರಣಾಳಿಕೆ ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ. ಸುಮಾರು 2 ವರ್ಷ ಕೊರೊನಾದಿಂದ ಆರ್ಥಿಕ ಕುಸಿತ ಆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
Karnataka Election Live: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣಾ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಡಿ.ವಿ ಸದಾನಂದಗೌಡ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಪಸ್ಥಿತರಿದ್ದರು.
Karnataka Election Live: ಕೆಲವೆ ಕ್ಷಣದಲ್ಲಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಕೆಲವೇ ಹೊತ್ತಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಇದು ಜನಪರ ಪ್ರಣಾಳಿಕೆಯಾಗಿದೆ. 224 ಕ್ಷೇತ್ರದ ಜನರು, ಪರಿಣಿತರ ಅಭಿಪ್ರಾಯ ಪಡೆದು ಪ್ರಣಾಳಿಕೆ ಮಾಡಲಾಗಿದೆ. ಇದು ಜನಪರ, ಪ್ರಜಾ ಪ್ರಣಾಳಿಕೆ ಆಗಿ ಹೊರಬೀಳಲಿದೆ. ಜನರಿಗೆ ಏನು ಒಳ್ಳೆಯದನ್ನು ಮಾಡಲಿಕ್ಕೆ ಸಾಧ್ಯವಿದೆ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಇನ್ನೇನು ಎರಡು ಮೂರು ಗಂಟೆಗಳಲ್ಲಿ ಒಳ್ಳೆಯ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದರು.
Karnataka Election Live: ಇಂದು ಮಂಗಳೂರಲ್ಲಿ ಹೆಚ್ ಡಿ ದೇವೇಗೌಡ ಪ್ರಚಾರ
ಮಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು (ಮೇ.01) ರಂದು ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಪರ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 2.00 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಆಗಮಿಸಲಿರುವ ಹೆಚ್.ಡಿ ದೇವೇಗೌಡರು, ಮಧ್ಯಹ್ನಾ 2.30ಕ್ಕೆ ಸುರತ್ಕಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಳಿಕ ಮಂಗಳೂರಿನ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ಭೇಟಿ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಬಲವಂಡಿ ದೈವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಗುರುಪುರ ಕಂಬಳ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ಧಾರೆ. ಮಂಗಳೂರು ಉತ್ತರ ಜೆ.ಡಿ.ಎಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಪರ ಪ್ರಚಾರ ಸಮಾವೇಶ ನಡೆಸಿ ನಂತರ ವಾಪಾಸ್ ಬೆಂಗಳೂರಿಗೆ ಆಗಮಿಸಲಿದ್ದಾರೆ.
Karnataka Election Live: ನಟ ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿ
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಇಂದು (ಮೇ.02) ಬೆಳಿಗ್ಗೆ 11ಕ್ಕೆ ಪ್ರೇಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಪರಿಚಯ ಮಾಡಿಸಲಿದ್ದಾರೆ.
Karnataka Election Live: ಮೇ.2 ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ
ಬೆಂಗಳೂರು: ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ನಾಳೆ (ಮೇ.02) ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗಾಗಲೇ 6 ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕೈ ಪಡೆ ನಾಳೆ ಮತ್ತಷ್ಟು ಹೊಸ ಯೋಜನೆಗಳನ್ನು ಘೋಷಿಸಲು ತುದಿಗಾಲಲ್ಲಿ ನಿಂತಿದೆ.
Karnataka Election Live: ಇಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು (ಮೇ.01) ಬಿಜೆಪಿ ಚುನಾವಣಾ ಪ್ರಣಾಳಿಕೆ ಬುಡುಗಡೆ ಮಾಡಲಿದೆ. ಬೆಳಗ್ಗೆ 10 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ನ ಉಚಿತ ಘೋಷಣೆ ನಡುವೆ ಬಿಜೆಪಿ ಪ್ರಣಾಳಿಕೆ ಹೇಗಿರಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿಸಿದೆ.
Karnataka Election Live: ಚಾಮರಾಜನಗರಕ್ಕೆ ರಾಹುಲ್ ಗಾಂಧಿ ಭೇಟಿ
ಚಾಮರಾಜನಗರ: ಇಂದು (ಮೇ.01) ಚಾಮರಾಜನಗರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಬಳಿಕ ಜಿಲ್ಲೆಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಧ್ಯಾಹ್ನ 3:30ಕ್ಕೆ ನಗರದ ರೇಷ್ಮೆಗೂಡು ಮಾರುಕಟ್ಟೆ ಸಮೀಪದ ಆವರಣದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿಯಿಂದ ವಿ. ಸೋಮಣ್ಣ ಅವರು ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಬರಲಿರುವ ಇಬ್ಬರೂ ನಾಯಕರು, ದಲಿತ ಮತಗಳು ಚದುರದಂತೆ ನೋಡಿಕೊಳ್ಳಲಿದ್ದಾರೆ. ಸಮಾವೇಶ ಹಿನ್ನೆಲೆ ಸಿಆರ್ ಪಿಎಫ್ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಭದ್ರತೆ ಆಯೋಜಿಸಲಾಗಿದೆ.
Karnataka Election Live: ಇಂದು ಕಲ್ಪತರು ನಾಡಲ್ಲಿ ಚುನಾವಣಾ ಚಾಣಕ್ಯನ ಮತಬೇಟೆ
ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು (ಮೇ.01) ತುಮಕೂರು ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಲಿದ್ದಾರೆ. ಗುಬ್ಬಿ – ತಿಪಟೂರು ಕ್ಷೇತ್ರಗಳಲ್ಲಿ ಅಮಿತ್ ಷಾ ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 10.50ಕ್ಕೆ ಗುಬ್ಬಿ ಹೆಲಿಪ್ಯಾಡ್ಗೆ ಆಗಮಿಸುವ ಪ್ರಧಾನಿ ಮೋದಿ, 10.55 ಕ್ಕೆ ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 11 ಗಂಟೆಗೆ ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭವಾಗಿ ಸರ್ಕಾರಿ ಆಸ್ಪತ್ರೆ ಮುಂಭಾಗದವರೆಗೂ ನಡೆಯಲಿದೆ.
ಇದಾದ ನಂತರ ಗುಬ್ಬಿಯಿಂದ 12.15ಕ್ಕೆ ಹೆಲಿಕಾಪ್ಟರ್ ಮೂಲಕ ತಿಪಟೂರಿಗೆ ಪ್ರಯಾಣ ಬೆಳಸುತ್ತಾರೆ. 12.35ಕ್ಕೆ ತಿಪಟೂರು ಕಲ್ಪತರು ಕಾಲೇಜು ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಲಿದ್ದಾರೆ. 12.50ಕ್ಕೆ ತಿಪಟೂರು ಐಬಿ ಸರ್ಕಲ್‌ನಿಂದ ಪ್ರಾರಂಭವಾಗುವ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ. 1 ಗಂಟೆಗಳ ಕಾಲ ರೋಡ್ ಶೋ ನಡೆಯಲಿದೆ.
Karnataka Election Live: ಇಂದು ಚೆನ್ನಮ್ಮನ ನಾಡಿನಲ್ಲಿ ಸುದೀಪ್ ಪ್ರಚಾರ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇಂದು (ಮೇ.01) ನಟ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಂದು ಇಡೀ ದಿನ ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಜಿಲ್ಲೆಯ ಕಿತ್ತೂರು, ಬೆಳಗಾವಿ ಗ್ರಾಮೀಣ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ಮತಯಾಚಿಸಲಿದ್ದಾರೆ.
- ಬೆಳಗ್ಗೆ 10.40ಕ್ಕೆ ವಿಶೇಷ ವಿಮಾನ ಮೂಲಕ ಬೆಂಗಳೂರಿಂದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮನ
- 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಸುದೀಪ್ ರೋಡ್ ಶೋ
- ನೇಸರಗಿಯಲ್ಲಿ ಬೆಳಗ್ಗೆ 11.20ರಿಂದ ಮಧ್ಯಾಹ್ನ 2.30ರವರೆಗೆ ಸುದೀಪ್ ರೋಡ್ ಶೋ ನಡೆಸಿ ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಮತಯಾಚಿಸಲಿದ್ದಾರೆ.
- ಮಧ್ಯಾಹ್ನ 1ಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಗೆ ಆಗಮನ
- ಮಧ್ಯಾಹ್ನ 1 ಗಂಟೆಯಿಂದ 1.50ರವರೆಗೆ ಸುಳೇಭಾವಿ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್ ಪರ ಪ್ರಚಾರ ಮತಯಾಚಿಸಲಿದ್ದಾರೆ.
- ಮಧ್ಯಾಹ್ನ 2.15ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್‌ಗೆ ಆಗಮನ
- ಸಂಜೆ 4ಕ್ಕೆ ಯಮಕನಮರಡಿಗೆ ತೆರಳುವ ನಟ ಸುದೀಪ್
- ಸಂಜೆ 4 ರಿಂದ 5ರವರೆಗೆ ಯಮಕನಮರಡಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಬೇಟೆ
- ಸಂಜೆ 5.30ಕ್ಕೆ ಬೆಳಗಾವಿ ನಗರಕ್ಕೆ ಆಗಮನ
- ಸಂಜೆ 5.30ರಿಂದ 6.30ರವರೆಗೆ ಬೆಳಗಾವಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ್ ಪರ ಪ್ರಚಾರ
- ಸಂಜೆ 6.40ಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಮತಯಾಚನೆ
- ಸಂಜೆ 7.40ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್‌ಗೆ ಆಗಮನ, ಇಂದು ರಾತ್ರಿ ಬೆಳಗಾವಿಯಲ್ಲಿಯೇ ವಾಸ್ತವ್ಯ
Karnataka Election Live: ಶಿವಮೊಗ್ಗ ನಗರಕ್ಕೆ ಇಂದು ಅಮಿತ್ ಶಾ ಭೇಟಿ
ಶಿವಮೊಗ್ಗ: ಇಂದು (ಮೇ.01) ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮತಯಾಚಿಸಲಿದ್ದಾರೆ. ಸಂಜೆ 6 ಗಂಟೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿ ಗುಡಿ, ಜೈಲ್ ರಸ್ತೆ ಮತ್ತು ಲಕ್ಷ್ಮೀ ಟಾಕೀಸ್ವರೆಗೂ ರೋಡ್ಶೋ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪರ ಪ್ರಚಾರ ಮಾಡಲಿದ್ದಾರೆ.
Published On - May 01,2023 6:59 AM