Karnataka Breaking Kannada News Highlights: ಕಾಂಗ್ರೆಸ್​​ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ: ಡಿಕೆ ಶಿವಕುಮಾರ್

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 29, 2023 | 11:02 PM

Karnataka Assembly Polls Breaking News Highlights: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗುತ್ತದೆ. ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಅನೇಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​ನಲ್ಲಿ....

Karnataka Breaking Kannada News Highlights: ಕಾಂಗ್ರೆಸ್​​ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ: ಡಿಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್

Karnataka Assembly Polls Breaking News Highlights: ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಭರದಿಂದ ಪ್ರಚಾರ ಮಾಡುತ್ತಿವೆ. ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಮೂರು ಪ್ರಬಲ ಪಕ್ಷಗಳು ತಂತ್ರ ರಚಿಸಿದ್ದು, ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ನಾನಾ ತಂತ್ರಗಳನ್ನು ಹೆಣೆಯುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್​​ನ ರಾಷ್ಟ್ರೀಯ​ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಗೃಹ ಸಚಿವ ಅಮಿತ್​ ಶಾ, ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.  ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ, ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್​ ಖರ್ಗೆ ಕೂಡ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ಮೂಲಕ ಕೆಲವು ನಾಯಕರು ಚರ್ಚೆ ಆಗುತ್ತಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪ್ಡೇಟ್ಸ್​ ಇಲ್ಲಿದೆ.

LIVE NEWS & UPDATES

The liveblog has ended.
  • 29 Apr 2023 10:58 PM (IST)

    Karnataka Breaking Kannada News Live: ಬಿಜೆಪಿ ದೂರ ಇಡಲು ನಾವು ಕುಮಾರಸ್ವಾಮಿಗೆ ಅಧಿಕಾರ ನೀಡಿದ್ದೆವು

    ಹಾಸನ: ಕಾಂಗ್ರೆಸ್​​ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ ಎಂದು ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಬಡವರಿಗೆ ಒಂದು ಯೋಜನೆ ಮಾಡಲಿಲ್ಲ. ಬಿಜೆಪಿ ದೂರ ಇಡಲು ನಾವು ಕುಮಾರಸ್ವಾಮಿಗೆ ಅಧಿಕಾರ ನೀಡಿದ್ದೆವು ಎಂದು ಹೇಳಿದರು.

  • 29 Apr 2023 10:52 PM (IST)

    Karnataka Breaking Kannada News Live: ನಾಳೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸಿಎಂ ಆದಿತ್ಯನಾಥ್ ಪ್ರಚಾರ

    ಕೊಪ್ಪಳ: ನಾಳೆ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸಿಎಂ ಆದಿತ್ಯನಾಥ್ ಭೇಟಿ ನೀಡುತ್ತಿದ್ದಾರೆ. ಗಂಗಾವತಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ನಾಳೆ ಪ್ರಚಾರ ಮಾಡಲಿದ್ದಾರೆ. ಆ ಮೂಲಕ ಜನಾರ್ದನ ರೆಡ್ಡಿಗೆ ಟಕ್ಕರ್​ ಕೊಡಲು ಸಿದ್ಧರಾಗಿದ್ದಾರೆ. ಗಂಗಾವತಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶ ನಡೆಯಲಿದೆ.

  • 29 Apr 2023 10:48 PM (IST)

    Karnataka Breaking Kannada News Live: ಬಿಜೆಪಿ ಅಭ್ಯರ್ಥಿ ಮನೆಗೆ ಸಿಎಂ ಬೊಮ್ಮಾಯಿ‌ ದಿಢೀರ್ ಭೇಟಿ

    ಗದಗ: ಬಿಜೆಪಿ ಅಭ್ಯರ್ಥಿ ಮನೆಗೆ ಸಿಎಂ ಬಸವರಾಜ್ ಬೊಮ್ಮಾಯಿ‌ ದಿಢೀರ್ ಭೇಟಿ ನೀಡಿದ್ದಾರೆ. ರಾಜೀವಗಾಂಧಿ ನಗರದಲ್ಲಿರುವ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಮನೆಗೆ ದಿಢೀರ್ ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.

  • 29 Apr 2023 10:21 PM (IST)

    Karnataka Breaking Kannada News Live: ಯಾರು ಒಳ್ಳೆಯದು ಮಾಡುತ್ತಾರೆ ಎನ್ನುವುದನ್ನು ನಿರ್ಧರಿಸಿ ಮತಹಾಕಿ

    ಕಾರವಾರ: ಎಲ್ಲಾ ಪಕ್ಷದವರು ಭಾಷಣ ಮಾಡುತ್ತಾರೆ, ಪ್ರಚಾರ ಮಾಡುತ್ತಾರೆ. ಯಾರು ಒಳ್ಳೆಯದು ಮಾಡುತ್ತಾರೆ ಎನ್ನುವುದನ್ನು ನಿರ್ಧರಿಸಿ ಮತಹಾಕಿ ಎಂದು ಹಳಿಯಾಳ ತಾಲೂಕಿನ ದಾಂಡೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದರು. ಪ್ರಧಾನಿ ಮೋದಿಗಾಗಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವಂತೆ ಹೇಳುತ್ತಾರೆ ಎಂದರು.

  • 29 Apr 2023 09:28 PM (IST)

    Karnataka Breaking Kannada News Live: ಮೈಸೂರಿನಲ್ಲಿ ಮೊದಲ ದಿನದ ಮನೆ ಮತದಾನ ಯಶಸ್ಸು

    ಮೈಸೂರು: 2023ರ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದಿನಿಂದಲೇ‌ ಮನೆ ಮತದಾನ ಆರಂಭವಾಗಿದೆ. ಮೈಸೂರಿನಲ್ಲಿ ಮೊದಲ ದಿನದ ಮನೆ ಮತದಾನ ಯಶಸ್ವಿ ಆಗಿದ್ದು, ಮೊದಲನೇ ದಿ‌ನವೇ 954 ಮತದಾನ ಮಾಡಲಾಗಿದೆ. 80 ವರ್ಷ ಮೇಲ್ಪಟ್ಟವರಿಂದ 787 ಮತದಾನ ಮಾಡಲಾಗಿದೆ.

    • ವಿಶೇಷ ಚೇತರಿಂದ 167 ಮತ
    • ಮನೆ ಮನೆಗೆ ಹೋಗಿ ಮತದಾನ ಮಾಡಿಸಿರುವ ಜಿಲ್ಲಾಡಳಿತ
    • ನಂಜನಗೂಡು – 341ಮತ
    • ಚಾಮುಂಡೇಶ್ವರಿ – 138 ಮತ
    • ಪಿರಿಯಾಪಟ್ಟಣ – 183 ಮತ
    • ವರುಣ – 119 ಮತ
    • ಟಿ ನರಸೀಪುರ – 173 ಮತ
  • 29 Apr 2023 09:04 PM (IST)

    Karnataka Breaking Kannada News Live: ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ

    ಹೊಸಪೇಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಹೊಸಪೇಟೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಬಿಜೆಪಿ ಎಷ್ಟೇ ಪ್ರಯತ್ನಿಸಿದ್ರು ಕಾಂಗ್ರೆಸ್ಸೇ ಅಧಿಕಾರಕ್ಕೆ ಬರೋದು ಎಂದು ಹೇಳಿದರು.

  • 29 Apr 2023 08:37 PM (IST)

    Karnataka Breaking Kannada News Live: ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ 5 ಲಕ್ಷ ಕೋಟಿಗೂ ಅಧಿಕ ಸಾಲ

    ವಿಜಯನಗರ: ನಾನು ಸಿಎಂ ಆಗಿದ್ದ ವೇಳೆ ನುಡಿದಂತೆ ನಡೆದಿದ್ದೇವೆ. ನಾನು ಸಿಎಂ ಆಗಿದ್ದ ವೇಳೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು 600 ಭರವಸೆಗಳನ್ನ ನೀಡಿದ್ದರು. ಇಲ್ಲಿಯವರಿಗೆ 66 ಭರವಸೆಗಳನ್ನ ಈಡೇರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೇ ನಿಮ್ಮಗೆ ಕರ್ನಾಟಕದ ಪರಿಸ್ಥಿತಿ ಗೊತ್ತಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ 5 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದ್ದರೆ ರಾಜ್ಯ, ಪ್ರಜಾಪ್ರಭುತ್ವ, ‌ಸಂವಿಧಾನ ಉಳಿಯಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

  • 29 Apr 2023 08:18 PM (IST)

    Karnataka Breaking Kannada News Live: ಎ. ಮಂಜುನಾಥ್ ಮಾತು ನನ್ನ ಹೃದಯ ಕರಗಿಸಿದೆ

    ರಾಮನಗರ: ಎ. ಮಂಜುನಾಥ್ ಮಾತು ನನ್ನ ಹೃದಯ ಕರಗಿಸಿದೆ. ಇಂತಹ ಯೋಗ್ಯ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹೇಳಿದರು. ಹಣ, ಮಂತ್ರಿ ಸ್ಥಾನವನ್ನ ನಿರಾಕರಿಸಿದ್ದಾರೆ ಎಂದು ಎ ಮಂಜುನಾಥ್ ಭಾಷಣದ ವೇಳೆ ಹೆಚ್​.ಡಿ ದೇವೇಗೌಡ ಭಾವುಕರಾದರು.

  • 29 Apr 2023 07:41 PM (IST)

    PM Modi Roadshow Live: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಅಂತ್ಯ

    ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಅಂತ್ಯ ಆಗಿದೆ. ರೋಡ್ ಶೋ ಮುಗಿಸಿ ಸುಮನಹಳ್ಳಿಯಿಂದ ಪ್ರಧಾನಿ ನಿರ್ಗಮಿಸಿದ್ದು, ರಾಜಭವನದತ್ತ ಕಾರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆರಳಿದರು.

  • 29 Apr 2023 07:33 PM (IST)

    M Modi Roadshow Live: ಸುಮ್ಮನಹಳ್ಳಿ ಜಂಕ್ಷನ್​ಗೆ ಮೋದಿ ರೋಡ್‌ ಶೋ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಸುಮ್ಮನಹಳ್ಳಿ ಜಂಕ್ಷನ್​ಗೆ ತಲುಪಿದೆ. ಜನರತ್ತ ಪ್ರಧಾನಿ ಮೋದಿ ಕೈ ಬೀಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ಮೋದಿ ಮೋದಿ ಅಂತಾ ಜೈಕಾರ ಹಾಕಿದರು.

  • 29 Apr 2023 07:16 PM (IST)

    PM Modi Roadshow Live: ಮುಗಿಲು ಮುಟ್ಟಿದ ನಮೋ ಘೋಷಣೆ

    ಬೆಂಗಳೂರು: ನೈಸ್ ರೋಡ್ ಜಂಕ್ಷನ್‌ನಿಂದ ಪ್ರಧಾನಿ ರೋಡ್‌ ಶೋ ಆರಂಭವಾಗಿದ್ದು, 5.3 ಕಿ.ಮೀ. ತೆರೆದ ವಾಹನದಲ್ಲಿ ಮೋದಿ ರೋಡ್​ಶೋ ನಡೆಸಿದರು. ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ಹೂವಿನ ಮಳೆಗರೆದರು.

  • 29 Apr 2023 07:06 PM (IST)

    PM Modi Roadshow Live: ನಾಳೆ ಮೈಸೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ

    ಮೈಸೂರು: ನಾಳೆ ಮೈಸೂರಿಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದೆ. ಹಾಗಾಗಿ ಇಂದು ಮೈಸೂರಿನ ವಿದ್ಯಾಪೀಠ ವೃತ್ತದಿಂದ ತಾಲೀಮು ಮಾಡಲಾಯಿತು. ರೋಡ್ ಶೋ‌ ಮಾರ್ಗದಲ್ಲಿ ಪ್ರಧಾನಿ ಮೋದಿ‌ ಕಾರು ಸಾಗಿದ್ದು, ಸುತ್ತ ಹಗ್ಗ ಹಿಡಿದು ಮೈಸೂರಿನ ವಿಶೇಷ ಕಮಾಂಡೋ‌ ಪಡೆ ಸಾಗಿದೆ.

  • 29 Apr 2023 06:34 PM (IST)

    PM Modi Roadshow Live: ಪ್ರಧಾನಿ ಮೋದಿ ರೋಡ್ ಶೋ‌ ನೋಡಲು ಆಗಮಿಸಿರುವ ರಾಜಸ್ಥಾನದ ಶಾಸಕ

    ಬೆಂಗಳೂರು: ಈಸ್ಟ್ ವೆಸ್ಟ್ ಜಂಕ್ಷನ್​ ಪ್ರಧಾನಿ ಮೋದಿ ರೋಡ್ ಶೋ ನೋಡಲು ರಾಜಸ್ಥಾನ ಶಾಸಕ ಅವಿನಾಶ್ ಗೇಹ್ಲೋಟ್ ಆಗಮಿಸಿದ್ದಾರೆ. ಮೋದಿ ಪ್ಲೇಕ್ಸ್ ಹಿಡಿದು ಶಾಸಕ ಅವಿನಾಶ್ ಘೋಷಣೆ ಕೂಗಿದ್ದಾರೆ.

  • 29 Apr 2023 06:26 PM (IST)

    PM Modi Roadshow Live: 5.3 ಕಿ.ಮೀ. ರೋಡ್‌ ಶೋ ನಡೆಸಲಿರುವ ಪ್ರಧಾನಿ ಮೋದಿ

    ಬೆಂಗಳೂರು: ನೈಸ್ ರೋಡ್ ಜಂಕ್ಷನ್‌ನಿಂದ ಪ್ರಧಾನಿ ರೋಡ್‌ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಪ್ರಧಾನಿ ಮೋದಿ 5.3 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ಮೇಲೆ ಹೂವಿನ ಮಳೆಗರೆದ ಬಿಜೆಪಿ ಕಾರ್ಯಕರ್ತರು. ಡಿ.ವಿ.ಸದಾನಂದಗೌಡ, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತಿ.

  • 29 Apr 2023 06:10 PM (IST)

    PM Modi Roadshow Live: ಪ್ರಧಾನಿ ಮೋದಿ‌ ನೋಡಲು ಹೆಚ್ಚಿದ ಕಾತುರ

    ಬೆಂಗಳೂರು: ಪ್ರಧಾನಿ ಮೋದಿ ರೋಡ್ ಶೋಗೆ ಕ್ಷಣಗಣನೆ ಶುರುವಾಗಿದ್ದು, ಮೋದಿ‌ ನೋಡಲು ರಸ್ತೆಯ ಇಕ್ಕೆಲಗಳಲ್ಲೂ ಕಾರ್ಯಕರ್ತರು, ಮಕ್ಕಳು, ವೃದ್ಧರು, ಯುವಕ, ಯುವತಿಯರು, ಗ್ರಹಿಣಿಯರು ಜಮಾಯಿಸುತ್ತಿದ್ದಾರೆ. ತಂಡ ತಂಡವಾಗಿ ಸಾರ್ವಜನಿಕರು ಆಗಮಿಸುತ್ತಿದ್ದು, ಮೋದಿ‌ ನೋಡಲು ಕಾತುರರಾಗಿದ್ದಾರೆ.

  • 29 Apr 2023 06:07 PM (IST)

    PM Modi Roadshow Live: ಕೆಲ ಹೊತ್ತಿನಲ್ಲೇ ಪ್ರಧಾನಿ ಮೋದಿ ರೋಡ್‌ ಶೋ ಆರಂಭ

    ಬೆಂಗಳೂರು: ಹೆಲಿಕಾಪ್ಟರ್​​ನಲ್ಲಿ ಬಿಐಇಸಿ ಹೆಲಿಪ್ಯಾಡ್​ಗೆ ಆಗಮಿಸಿದ ಪ್ರಧಾನಿ ಮೋದಿ, ಸ್ಥಳೀಯ ಬಿಜೆಪಿ ಮುಖಂಡರಿಂದ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಮಾಡಲಾಯಿತು. ರೋಡ್‌ ಶೋ ಆರಂಭವಾಗುವ ಸ್ಥಳಕ್ಕೆ ಕಾರಿನಲ್ಲಿ ನೈಸ್ ರೋಡ್ ಜಂಕ್ಷನ್‌ಗೆ ಪ್ರಧಾನಿ ಮೋದಿ ತೆರಳುತ್ತಿದ್ದಾರೆ. ಕೆಲ ಹೊತ್ತಿನಲ್ಲೇ ಆರಂಭವಾಗಲಿದೆ.

  • 29 Apr 2023 05:37 PM (IST)

    PM Modi Roadshow Live: ಹೆಚ್​ಎಎಲ್​​ ಏರ್​ಪೋರ್ಟ್​ಗೆ ಆಗಮಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಬೆಳಗಾವಿಯ ಸಾಂಬ್ರಾ ಏರ್​ಪೋರ್ಟ್​ನಿಂದ ಹೊರಟಿರುವ ಪ್ರಧಾನಿ ಮೋದಿ ಹೆಚ್​ಎಎಲ್​​ ಏರ್​ಪೋರ್ಟ್​ಗೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಹೆಚ್​ಎಎಲ್​ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಿಐಇಸಿ ಹೆಲಿಪ್ಯಾಡ್​ಗೆ ತೆರಳಲಿದ್ದಾರೆ.

  • 29 Apr 2023 05:20 PM (IST)

    PM Modi Roadshow Live: ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ

    ಬೆಂಗಳೂರು: ಪ್ರಧಾನಿ ಮೋದಿ ರೋಡ್​ ಶೋ ಹಿನ್ನೆಲೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಾಂಸ್ಕೃತಿಕ ಕಲಾತಂಡಗಳ ಆಯೋಜನೆ ಮಾಡಲಾಗಿದೆ. ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ ಮಾಡಲಾಯಿತು. ಬಿಜೆಪಿ ಬಾವುಟ ಹಿಡಿದು, ಕೇಸರಿ ಶಾಲು ಹಾಕಿಕೊಂಡು ಜನರು ಗುಂಪು ಗೂಡುತ್ತಿದ್ದಾರೆ.

  • 29 Apr 2023 04:58 PM (IST)

    PM Modi Roadshow Live: ಪ್ರಧಾನಿ ಮೋದಿ ನೋಡಲು ಹುಬ್ಬಳ್ಳಿಯಿಂದ ಮೊಮ್ಮಗಳೊಂದಿಗೆ ಬಂದ ಮಹಿಳೆ

    ಬೆಂಗಳೂರು: ಪ್ರಧಾನಿ ಮೋದಿಯನ್ನ ನೋಡಲು ದೂರದ ಹುಬ್ಬಳ್ಳಿಯಿಂದ ಪುಟ್ಟ ಮೊಮ್ಮಗಳೊಂದಿಗೆ ಮಹಿಳೆ ಬಂದಿದ್ದಾರೆ. ಮೋದಿ ತಾತನನ್ನ ನನ್ನ ಮೊಮ್ಮಗಳಿಗೆ ತೋರಿಸೋಕೆ ಬಂದಿದ್ದೀನಿ. ನೀನು ಮುಂದೆ ಚೆನ್ನಾಗಿ ಓದಿ ಈ ರೀತಿ ದೊಡ್ಡವರಾಗಬೇಕು ಅಂತಾ ಮೊಮ್ಮಗಳಿಗೆ ಹೇಳುತ್ತೇನೆ. ಮೋದಿಯವರನ್ನ ನೋಡಲು ತುಂಬಾ ಕಾತರಳಾಗಿದ್ದೇನೆ ಎಂದು ಹೇಳಿದ್ದಾರೆ.

  • 29 Apr 2023 04:45 PM (IST)

    PM Modi Roadshow Live: ಪ್ರಧಾನಿ ಮೋದಿ ಆಗಮನಕ್ಕೆ ಒಂದೂವರೆ ಗಂಟೆ ಅಷ್ಟೇ ಬಾಕಿ

    ಬೆಂಗಳೂರು: ಪ್ರಧಾನಿ ಮೋದಿ ಆಗಮನಕ್ಕೆ ಒಂದೂವರೆ ಗಂಟೆ ಅಷ್ಟೇ ಬಾಕಿಯಿದ್ದು, ನೈಸ್ ರಸ್ತೆ ಜಂಕ್ಷನ್ ಬಳಿ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ ಮಾಡಿಸಿದ್ದಾರೆ. ಮೋದಿ ರೋಡ್​ ಶೋ ವೀಕ್ಷಿಸಲು ಜನರು ಆಗಮಿಸುತ್ತಿದ್ದಾರೆ. ಕಟ್ಟಡದ ಮೇಲ್ಭಾಗಕ್ಕೆ ಯಾರು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

  • 29 Apr 2023 04:27 PM (IST)

    PM Modi Roadshow Live: ಪ್ರಧಾನಿ ಮೋದಿ ನೋಡಲು ಆಗಮಿಸುತ್ತಿರುವ ಸಾರ್ವಜನಿಕರು

    ಬೆಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಈಸ್ಟ್ ವೆಸ್ಟ್ ಜಂಕ್ಷನ್ ಬಳಿಗೆ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಮೋದಿಯನ್ನ ನೋಡಲು ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರು ಆಗಮನ. ನಿಧಾನವಾಗಿ ಜಂಕ್ಷನ್ ಬಳಿ ಕಾರ್ಯಕರ್ತರು ಸೇರುತ್ತಿದ್ದಾರೆ.

  • 29 Apr 2023 04:17 PM (IST)

    PM Modi Roadshow Live: ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋಗೆ ಕ್ಷಣಗಣನೆ

    ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋಗೆ ಕ್ಷಣಗಣನೆ ಆರಂಭವಾಗಿದ್ದು, ಮಾಗಡಿ ರೋಡ್ ನೈಸ್ ರೋಡ್​ನಿಂದ ರೋಡ್ ಶೋ ಆರಂಭವಾಗಲಿದ್ದು, ಸುಮನಹಳ್ಳಿ ಜಂಕ್ಷನ್​ನಲ್ಲಿ ಅಂತ್ಯವಾಗಲಿದೆ. ಈ ಹಿನ್ನೆಲೆ ಸುಮನಹಳ್ಳಿ ಜಂಕ್ಷನ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮ್ನಳ್ಳಿ ಜಂಕ್ಷನ್​ನಲ್ಲಿ  ಎಲ್ಲಾ ರೋಡ್ಗಳು ಕ್ಲೋಸ್​ ಮಾಡಿದ್ದು, ಬ್ಯಾರಿಕೆಡ್​ ಹಾಕಿ ಪೊಲೀಸರು ನಿಯೋಜನೆ ಮಾಡಿದ್ದಾರೆ.

  • 29 Apr 2023 04:00 PM (IST)

    Amit Shah Speech Live: ಕಾಂಗ್ರೆಸ್​ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತೆ

    ಉಡುಪಿ: ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾರಾಯಣ ಗುರುಗಳು ಮಾಡಿದ್ದರು. ಪಿ.ಎಫ್.ಐ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿತು. ನಾನು ಪ್ರವೀಣ್ ನೆಟ್ಟಾರು ಜೀವವನ್ನ ನಾನು ವಾಪಸ್ ತರಲು ಸಾಧ್ಯವಿಲ್ಲ. ಆದರೆ ಹತ್ಯೆ ಮಾಡಿದ ಪಿಎಫ್​ಐಯನ್ನು ನರೇಂದ್ರ ಮೋದಿ ಬ್ಯಾನ್ ಮಾಡಿದೆ. ಪಿ.ಎಫ್.ಯ ನ ಸಾಕಷ್ಟು ಕಾರ್ಯಕರ್ತರನ್ನು ಕಂಬಿ ಹಿಂದೆ ತಳ್ಳಿದೆ. ಕಾಂಗ್ರೆಸ್ ಯಾವಾಗಲು ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡಿದೆ ಎಂದು ಅಮಿತ್ ಶಾ ಕಿಡಿಕಾರಿದರು.

  • 29 Apr 2023 03:49 PM (IST)

    Amit Shah Roadshow Live: ಕಟಪಾಡಿ ಸಮಾವೇಶದಲ್ಲಿ ಅಮಿತ್ ಶಾ

    ಉಡುಪು: ಕಟಪಾಡಿ ಸಮಾವೇಷಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದು, ಉಡುಪಿ ಶ್ರೀ ಕೃಷ್ಣ ಮಂದಿರ, ಶ್ರೀ ಮೂಕಾಂಬಿಕಾ ದೇವಿಗೆ, ಅಷ್ಟ ಮಠಗಳಿಗೂ ನನ್ನ ಪ್ರಣಾಮಗಳು. ಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪ್ರಣಾಮಗಳು. ಶ್ರೀ ನಾರಾಯಣ ಗುರು ಕೋಟಿಗಟ್ಟಲೆ ಯುವಕರಿಗೆ ಪ್ರೇರಣೆ ಎಂದು ಹೇಳಿದರು.

  • 29 Apr 2023 03:34 PM (IST)

    PM Modi Speech Live: ನಾವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆ ಜಾರಿಗೊಳಿಸಿದ್ದೇವೆ

    ಬೆಳಗಾವಿ: ಬಯಲುಮುಕ್ತ ಬಹಿರ್ದೆಸೆ ಮುಕ್ತಕ್ಕಾಗಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಕಾಶಿಯಲ್ಲಿ ಮಹಿಳೆಯರು ಶೌಚಾಲಯಕ್ಕೆ ಬೋರ್ಡ್​ ಅಳವಡಿಸಿದ್ದಾರೆ. ‘ಮರ್ಯಾದ ಮನೆ’ ಎಂಬ ಬೋರ್ಡ್​ಗಳನ್ನು ಅಳವಡಿಸಿದ್ದಾರೆ. ಸಹಕಾರ ಇಲಾಖೆಯಲ್ಲೂ ನಾವು ಬದಲಾವಣೆ ತಂದಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆ ಜಾರಿಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

  • 29 Apr 2023 03:25 PM (IST)

    PM Modi Speech Live Updates: ಸಮಾಜವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ

    ಬೆಳಗಾವಿ: ಸಮಾಜವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ. ಬಸವಣ್ಣನವರು ಸಮಾನತೆಗಾಗಿ ಹೋರಾಡಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ಒಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 29 Apr 2023 03:20 PM (IST)

    PM Modi Speech Live Updates: ಬಸವೇಶ್ವರ, ಕುವೆಂಪು, ಕನಕದಾಸರ ಹೆಸರು ಪ್ರಸ್ತಾಪ

    ಬೆಳಗಾವಿ: ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಸಮಾಜದ ವರ್ಗಗಳು ಪರಸ್ಪರ ಗೌರವ ನೀಡಿ ಬಾಳುವುದು ಎಂದು ತಮ್ಮ ಭಾಷಣದಲ್ಲಿ ಬಸವೇಶ್ವರ, ಕುವೆಂಪು, ಕನಕದಾಸರ ಹೆಸರನ್ನು ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದರು.

  • 29 Apr 2023 03:16 PM (IST)

    PM Modi Speech Live Updates: ಅತಂತ್ರ ಸ್ಥಿತಿ ಬಂದರೆ ರಾಜ್ಯ ಅಭಿವೃದ್ಧಿ ಆಗಲ್ಲ

    ಬೆಳಗಾವಿ: ಸ್ತ್ರೀಯರು, ರೈತರು, ಯುವಕರು ಉತ್ತಮ ಸರ್ಕಾರಕ್ಕೆ ಆಶೀರ್ವದಿಸಿ. ನಿಮ್ಮ ಉತ್ಸಾಹ ನೋಡಿದರೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದೀರಿ. ಅತಂತ್ರ ಸ್ಥಿತಿ ಬಂದರೆ ರಾಜ್ಯ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲ್ಲ. ಪೂರ್ಣ ಬಹುಮತದ ಸರ್ಕಾರ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕೋಳಿಗುಡ್ಡ ಬಳಿ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿದರು.

  • 29 Apr 2023 03:12 PM (IST)

    PM Modi Speech Live Updates: ಜನಸೇವೆಯೇ ಜನಾರ್ದನನ ಸೇವೆ ಎಂಬುದನ್ನು ಬಿಜೆಪಿ ನಂಬಿದೆ

    ಬೆಳಗಾವಿ: ಕರ್ನಾಟಕ ರಾಜ್ಯ ಟ್ರೆಡಿಷನ್, ಟೆಕ್ನಾಲಜಿಯಲ್ಲೂ ಬಹಳ ಮುಂದಿದೆ. ಜನಸೇವೆಯೇ ಜನಾರ್ದನನ ಸೇವೆ ಎಂಬುದನ್ನು ಬಿಜೆಪಿ ನಂಬಿದೆ. ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡುವುದು ಬಿಜೆಪಿ ಶಪಥ.  ಅಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್​ 1 ಮಾಡುವುದಾಗಿ ಭರವಸೆ. ಈ ಚುನಾವಣೆಯಲ್ಲಿ ನೀವು ಬಿಜೆಪಿಗೆ ಆಶೀರ್ವಾದಿಸಿದರೆ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಹೇಳಿದರು.

  • 29 Apr 2023 03:09 PM (IST)

    PM Modi Speech Live Updates: ಪ್ರಧಾನಿ ಮೋದಿ ಜೊತೆಗೆ 16 ಗಣ್ಯರಿಗೆ ಮಾತ್ರ ಅವಕಾಶ

    ಬೆಳಗಾವಿ: ಕೋಳಿಗುಡ್ಡ ಹೊರವಲಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ಆರಂಭವಾಗಿದ್ದು, ಸಮಾವೇಶದಲ್ಲಿ ಪ್ರಧಾನಿ ಮೋದಿ ಜೊತೆಗೆ 16 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಡಗಿದೆ. ಬಿಜೆಪಿ ಸಂಸದರಾದ ಮಂಗಳಾ ಅಂಗಡಿ, ಅಣ್ಣಾಸಾಹೇಬ್  ಜೊಲ್ಲೆ, ಬಿಜೆಪಿ ಅಭ್ಯರ್ಥಿಗಳಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್, ಪಿ.ರಾಜೀವ್​, ದುರ್ಯೋಧನ ಮಹಾಲಿಂಗಪ್ಪ ಐಹೊಳೆ, ಮಹೇಶ್ ಕುಮಟಳ್ಳಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್​ ಕುಮಾರ್ ಸುರಾನ ಭಾಗಿ.

  • 29 Apr 2023 03:06 PM (IST)

    PM Modi Speech Live Updates: ಈ ಬಾರಿ ಚುನಾವಣೆ ಸದೃಢ ರಾಷ್ಟ್ರದ ನಿರ್ಮಾಣಕ್ಕಾಗಿ ಚುನಾವಣೆ

    ಬೆಳಗಾವಿ: ಈ ಬಾರಿ ಚುನಾವಣೆ ಸದೃಢ ರಾಷ್ಟ್ರದ ನಿರ್ಮಾಣಕ್ಕಾಗಿ ಚುನಾವಣೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪುಣ್ಯಭೂಮಿಯಿದು. ಬಿಜೆಪಿ ಸರ್ಕಾರದಿಂದ ಶಿವಾಜಿ ಭವ್ಯ ಪ್ರತಿಮೆ ನಿರ್ಮಾಣ ಮಾಡಿದೆ. ರಾಜಹಂಸಗಡದಲ್ಲಿ ಬಿಜೆಪಿ ಸರ್ಕಾರ ಶಿವಾಜಿ ಪ್ರತಿಮೆ ನಿರ್ಮಿಸಿದೆ. ಡಬಲ್ ಇಂಜಿನ್​ ಸರ್ಕಾರದಿಂದ ಅನೇಕ ಯೋಜನೆ ಜಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 29 Apr 2023 02:59 PM (IST)

    PM Modi Speech Live Updates: ಕುಡಚಿಯ ನನ್ನ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರ

    ಬೆಳಗಾವಿ: ಕುಡಚಿಯ ನನ್ನ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ದೇವಸ್ಥಾನಗಳ ಭೂಮಿಗೆ ಬಂದ ನನಗೆ ಅಪಾರ ಸಂತಸವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಭೂಮಿಗೆ ಬಂದಿದ್ದು ಸಂತಸ. ಅಪಾರಸಂಖ್ಯೆ ಕಾರ್ಯಕರ್ತರನ್ನು ಕಂಡು ಮನಸು ತುಂಬಿಬಂದಿದೆ. ಪೆಂಡಾಲ್​ ಹೊರಗೂ ಸಾಕಷ್ಟು ಜನರ ನೆರೆದಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರವೆಂದು ಪುನರುಚ್ಚಾರ ಮಾಡಿದರು.

  • 29 Apr 2023 02:58 PM (IST)

    PM Modi Speech Live Updates: ಕುಡಚಿಗೆ ಆಗಮಿಸಿದ ಪ್ರಧಾನಿ ಮೋದಿ

    ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಬಳಿ ಬಿಜೆಪಿ ಸಮಾವೇಶದ ವೇದಿಕೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಸಮಾವೇಶದ ವೇದಿಕೆಯಲ್ಲಿ ಮೋದಿಯನ್ನು ಬಿಜೆಪಿ ನಾಯಕರು ಸನ್ಮಾನಿಸಿದರು. ಮೋದಿಗೆ ರುಮಾಲು ತೊಡಿಸಿ, ಬೆಲ್ಲದ ಮೂರ್ತಿ ನೀಡಿ ಸನ್ಮಾನ ಮಾಡಲಾಯಿತು.

  • 29 Apr 2023 02:44 PM (IST)

    Karnataka Election Live: ಕಾಂಗ್ರೆಸ್​ನವರು ಮನಬಂದಂತೆ ಮಾತನಾಡ್ತಾರೆ: ಯಡಿಯೂರಪ್ಪ

    ರಾಯಚೂರು: ಮೋದಿ 100 ಬಾರಿ ಬಂದರೂ BJP ಗೆಲ್ಲಲ್ಲ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದು, ರಾಹುಲ್ ಕರೆದುಕೊಂಡು ಬಂದು ಪ್ರಚಾರ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಮೋದಿ, ಅಮಿತ್ ಶಾ, ನಡ್ಡಾರಂತಹ ನಾಯಕರಿದ್ದಾರೆ. ಹೀಗಾಗಿ ಕಾಂಗ್ರೆಸ್​ನವರು ಮನಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

  • 29 Apr 2023 02:36 PM (IST)

    Karnataka Assembly Election 2023 Live: ಪ್ರಧಾನಿ ಮೋದಿ ಇಂದು ವಿಶ್ವಗುರುವಾಗಿದ್ದಾರೆ: ಸುಧಾಕರ್

    ಚಿಕ್ಕಬಳ್ಳಾಫುರ: ಪ್ರಧಾನಿ ನರೇಂದ್ರ ಮೋದಿ ದೇಶದ ಬಹುದೊಡ್ಡ ಹಿಂದುಳಿದ ನಾಯಕ ಇಂದು ವಿಶ್ವಗುರುವಾಗಿದ್ದಾರೆ ಎಂದು ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಫುರ ವಿಧಾನಸಭಾ ಕ್ಷೇತ್ರದ ಜರಬಂಡಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಯಾವಾಗಲೂ ಮೋದಿಯನ್ನು ಹಿಯಾಳುಸುತ್ತಿದ್ದಾರೆ. ಮೋದಿಯವರನ್ನು ಕಂಡ್ರೆ ಕಾಂಗ್ರೆಸ್​ನವರಿಗೆ ಭಯ. ಕಾಂಗ್ರೆಸ್​ಗೆ ಸೋಲಿನ ಭೀತಿ ಎದುರಾಗಿದೆ ಇದ್ರಿಂದ ಮೋದಿಯನ್ನು ಟೀಕೆ ಮಾಡುತ್ತಿದ್ದಾರೆ ಎಂದರು.

  • 29 Apr 2023 02:31 PM (IST)

    Karnataka Assembly Election 2023 Live: ಸುಳ್ಳು ಹೇಳುವುದು ಕಾಂಗ್ರೆಸ್ ಜಾಯಮಾನವಲ್ಲ: ಸಿದ್ದರಾಮಯ್ಯ

    ವಿಜಯನಗರ: ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆ ಜಾರಿ ಮಾಡಲ್ಲ ಎಂದು ಹೇಳಿದ್ದಾರೆ. ಸುಳ್ಳು ಹೇಳುವುದು ಕಾಂಗ್ರೆಸ್ ಜಾಯಮಾನವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಮದ ರಾಜ್ಯ ಸಾಲಗಾರ ಆಗುತ್ತೆ ಅಂತಿದ್ದಾರೆ.

  • 29 Apr 2023 01:53 PM (IST)

    Karnataka Assembly Election Live: ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಮೋದಿ ವಾಗ್ದಾಳಿ

    ವಿಜಯಪುರ: ರಾಜಕೀಯ ನಿವೃತ್ತಿಯ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ. ಇದು ಮತ ಕೇಳುವ ರೀತಿಯೇ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ಮೋದಿಯವರು ವಾಗ್ದಾಳಿ ಮಾಡಿದರು.

  • 29 Apr 2023 01:50 PM (IST)

    Karnataka Assembly Election Live: ಮೇ 10ರಂದು ಬಿಜೆಪಿ ಬೆಂಬಲಿಸಬೇಕು; ಪ್ರಧಾನಿ ಮೋದಿ

    ವಿಜಯಪುರ: ಮೋದಿ ಬಂದಿದ್ದಾರೆ. ಭಾಷಣ ಕೂಡ ಚೆನ್ನಾಗಿ ಮಾಡಿದ್ದಾರೆ ಎಂದರೆ ಸಾಲದು. ಮೇ 10ರಂದು ಬಿಜೆಪಿ ಬೆಂಬಲಿಸಬೇಕು. ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಬೇಕು. ಬಿಜೆಪಿ ಪರ ಮತ ಚಲಾಯಿಸುವಂತೆ ಮನವರಿಕೆ ಮಾಡಿಕೊಡಬೇಕು. ಮನೆ ಮನೆ ತೆರಳಿ ಕೆಲಸ ಮಾಡಿ. ಇದು ನನ್ನ ಹೃದಯದ ಮಾತು ಎಂದು ಮನವಿ ಮಾಡಿಕೊಂಡರು.

  • 29 Apr 2023 01:47 PM (IST)

    Karnataka Assembly Election Live: ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ: ಪ್ರಧಾನಿ ಮೋದಿ

    ವಿಜಯಪುರ: ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವೋಕಲ್ ಫಾರ್ ಲೋಕಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರವೂ ಅದಕ್ಕೆ ಬೆಂಬಲ ನೀಡಿದೆ. ವಿಜಯಪುರದಲ್ಲಿ ಏರ್​​ಪೋರ್ಟ್​ ನಿರ್ಮಾಣ ಮಾಡಿದ್ದೇವೆ. ವಿಜಯಪುರ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುತ್ತಿವೆ. ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮೋದಿ ಮನವಿ ಮಾಡಿದರು.

  • 29 Apr 2023 01:44 PM (IST)

    Karnataka Assembly Election Live: ಬಿಜೆಪಿಯ ಯೋಜನೆಗಳಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ

    ವಿಜಯಪುರ: ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತು. ಬಿಜೆಪಿ ಸರ್ಕಾರದ ನೀತಿಯಿಂದ ಇಂದು ನಮ್ಮ ಮಾತೆಯರಿಗೆ, ಸಹೋದರಿಯರಿಗೆ ಹೊಸ ಶಕ್ತಿ ದೊರೆತಿದೆ. ಬಿಜೆಪಿ ಸರ್ಕಾರ ಜನಧನ ಬ್ಯಾಂಕ್ ಖಾತೆ ಮೂಲಕ ಮಹಿಳೆಯರ ಜೀವನ ಬದಲಿಸಿದೆ. ಈ ಖಾತೆಯ ಮೂಲಕ ಸರ್ಕಾರಿ ಯೋಜನೆಗಳ ಹಣ ನೇರ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರಗಳು ಮಹಿಳೆಯರ ಕಲ್ಯಾಣಕ್ಕೆ ಗಂಭೀರ ಯತ್ನವನ್ನೇ ಮಾಡಿಲ್ಲ. ಬಿಜೆಪಿ ಸರ್ಕಾರ ಲಕ್ಷಾಂತರ ರೂಪಾಯಿ ನೀಡಿದೆ. ಡಬಲ್ ಎಂಜಿನ್ ಸರ್ಕಾರ ಆಧುನಕ ಸಂಪರ್ಕ, ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚು ಸೃಷ್ಟಿಯಾಗಲಿವೆ ಎಂದರು.

  • 29 Apr 2023 01:42 PM (IST)

    Karnataka Assembly Election Live: ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ

    ವಿಜಯಪುರ: ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್​​ನಲ್ಲಿ ಅನುದಾನ ನೀಡಿದ್ದೇವೆ. ವಿಜಯಪುರದ ರೈತರಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕೆಲಸ ಆರಂಭವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕಟಿಬದ್ಧತೆಯಾಗಿದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೂ ಮೊದಲು ಕುಡಿಯುವ ನೀರನ್ನು ಎಲ್ಲಿಂದಲೋ ತರಬೇಕಿತ್ತು. ಈಗ ಮನೆ ಮನೆಗೆ ನೀರು ಬರುತ್ತಿದೆ ಎಂದರು.

  • 29 Apr 2023 01:40 PM (IST)

    Karnataka Assembly Election Live: ರೈತರ ಸಾಲಮನ್ನಾ ​ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡಿದೆ ಕಾಂಗ್ರೆಸ್: ಪ್ರಧಾನಿ ಮೋದಿ

    ವಿಜಯಪುರ: ಕಾಂಗ್ರೆಸ್ ಘೋಷಿಸಿರುವ ಯಾವುದೇ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ​ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡರು. ಆದರೆ ಬಿಜೆಪಿಯು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ.

  • 29 Apr 2023 01:39 PM (IST)

    Karnataka Assembly Election Live: ಬಿಜೆಪಿ ಸರ್ಕಾರ ತನ್ನ ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ: ಪ್ರಧಾನಿ ಮೋದಿ

    ವಿಜಯಪುರ: ಬಿಜೆಪಿ ಸರ್ಕಾರವು ತನ್ನ ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ. ಎಲ್ಲ ಹಣವೂ ಫಲಾನುಭವಿಗಳ ಬ್ಯಾಂಖ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇಡೀ ದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಹಣ ನೇರವಾಗಿ ರೈತರ ಖಾತೆಗಳಿಗೆ ತಲುಪುತ್ತಿದೆ. ವಿಜಯಪುರದ ರೈತರ ಖಾತೆಗಳಿಗೂ ನೇರ ಹಣ ಜಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಹಣ ಇಲ್ಲಿವರೆಗೆ ಬರುತ್ತಲೇ ಇರಲಿಲ್ಲ ಎಂದು ಪ್ರಧಾನಿ ಮೋದಿಯವರು ಆರೋಪ ಮಾಡಿದರು.

  • 29 Apr 2023 01:35 PM (IST)

    Karnataka Assembly Election Live: ಬಡ ಜನರಿಗೆ ಸಲ್ಲಬೇಕಾದ ಹಣವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿತ್ತು: ಪ್ರಧಾನಿ ಮೋದಿ

    ವಿಜಯಪುರ: ಬಡ ಜನರಿಗೆ ಸಲ್ಲಬೇಕಾದ ದುಡ್ಡನ್ನು ಲೂಟಿ ಮಾಡಲಾಗುತ್ತಿತ್ತು. ನೇರ ನಗದು ವರ್ಗಾವಣೆ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಈಗ ಎಲ್ಲ ಲಾಭಾಂಶವೂ ಫಲಾನುಭವಿಗಳಿಗೆ ತಲುಪುತ್ತಿದೆ. ಇಂದು ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ಹಣ ನೇರ ಜಮೆ ಮಾಡಿದೆ. ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ, ಮಾಡುತ್ತಿದೆ. ಡಬಲ್​ ಇಂಜಿನ್​ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕದಲ್ಲೂ ಬಡವರಿಗೆ ರೇಷನ್​ ನೀಡುತ್ತಿದ್ದೇವೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.

  • 29 Apr 2023 01:34 PM (IST)

    Karnataka Assembly Election Live: ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ವಿಜಯಪುರ: ಕೇಂದ್ರದಿಂದ 1 ರೂಪಾಯಿ ಬಿಡುಗಡೆ ಮಾಡಿದ್ದರೆ ಫಲಾನುಭವಿಗೆ 15 ಪೈಸೆ ಮಾತ್ರ ದೊರೆಯುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯವರೇ ಹೇಳಿದ್ದರು. ಪಂಚಾಯತಿನಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದಾಗ ಪರಿಸ್ಥಿತಿ ಹಾಗಿತ್ತು. ಭ್ರಷ್ಟಾಚಾರ ತೊಡೆದುಹಾಕಲು ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.

  • 29 Apr 2023 01:30 PM (IST)

    Karnataka Assembly Election Live: ಬಸವಣ್ಣರ ತತ್ವಗಳ ಅನುಷ್ಠಾನಕ್ಕೆ ಕಾಂಗ್ರೆಸ್​ ಏನೂ ಮಾಡಿಲ್ಲ: ಪ್ರಧಾನಿ ಮೋದಿ

    ವಿಜಯಪುರ: ಸಾವಿರಾರು ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಣೆ ಮಾಡಿದ್ದೇವೆ. ವಂಚಿತರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದು ನಮ್ಮ ಗುರಿ. ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅನೇಕ ಕೆಲಸ ಮಾಡಿದೆ. ಇದಕ್ಕೆ ಅನೇಕ ಸಾಕ್ಷಿಗಳಿವೆ. ಕಾಂಗ್ರೆಸ್ ಸರ್ಕಾರವು ಬಂಜಾರ, ಲಂಬಾಣಿ ಸಮುದಾಯದವರಿಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರವು ಭಗವಾನ್ ಬಸವಣ್ಣರ ತತ್ವಗಳ ಅನುಷ್ಠಾನಕ್ಕೆ ಏನೂ ಮಾಡಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದರು.

  • 29 Apr 2023 01:29 PM (IST)

    Karnataka Assembly Election Live: ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿದೆ

    ವಿಜಯಪುರ:  ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಸಬ್​ ಕಾ ಸಾತ್ ಸಬ್​ ಕಾ ವಿಕಾಸ್​ಗೆ ಭಗವಾನ್ ಬಸವಣ್ಣನವರೂ ಸ್ಫೂರ್ತಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿದೆ. ಆದಿವಾಸಿ, ಮಹಿಳೆಯರು, ದಲಿತರು ಸೇರಿದಂತೆ ಎಲ್ಲ ವರ್ಷಗಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅನ್ನ, ಆಶ್ರಯ್, ಅಕ್ಷರಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 29 Apr 2023 01:27 PM (IST)

    Karnataka Assembly Election Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ

    ವಿಜಯಪುರ: ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿಯವರು ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಗೆ ಬಂದಿದ್ದೇನೆ. 2014ರಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ನಾನು ಬಂದಿದ್ದೆ. ಹೊಸ ವರ್ಷದ ಜೊತೆಗೆ ನಿಮ್ಮ ಆಶೀರ್ವಾದ ಕೂಡ ಸಿಕ್ಕಿತ್ತು ಎಂದು ನೆನಪಿಸಿಕೊಂಡರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂದು ಕನ್ನಡದಲ್ಲೇ ಹೇಳಿದರು.

  • 29 Apr 2023 01:24 PM (IST)

    Karnataka Assembly Election Live: ಪಂಚನದಿಗಳ‌ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು

    ವಿಜಯಪುರ: ಪಂಚನದಿಗಳ‌ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಪ್ರಧಾನಿ ಮೋದಿಯವರು ಭಾಷಣ ಆರಂಭಿಸಿದ್ದಾರೆ.

  • 29 Apr 2023 01:22 PM (IST)

    Karnataka Assembly Election Live: ವಿಜಯಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ವಿಜಯಪುರಕ್ಕೆ ಆಗಮಿಸಿದ್ದಾರೆ.  ಸೈನಿಕ ಶಾಲೆ ಆವರಣದಲ್ಲಿ ನಡೆಯುತ್ತಿರವ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಸಂಸದರಾದ ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ್, ಶಾಸಕರಾದ ಎ.ಎಸ್.ಪಾಟೀಲ್ ನಡಹಳ್ಳಿ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

  • 29 Apr 2023 12:54 PM (IST)

    Karnataka Assembly Election Live: ಕಾರಿನ ಬಾಗಿಲ ಬಳಿ ಕುಸಿದು ಬಿದ್ದ ಸಿದ್ದರಾಮಯ್ಯ

    ವಿಜಯನಗರ: ಕಾರು ಹತ್ತುವಾಗ ಬಾಗಿಲ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುಸಿದಿರುವ ಘಟನೆ ಜಿಲ್ಲೆಯ ಕೂಡ್ಲಗಿ ಹೆಲಿಪ್ಯಾಡ್ ಬಳಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ್ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕೆಂದು ಹೆಲಿಕಾಪ್ಟರ್​ ಮೂಲಕ ಕೂಡ್ಲಗಿಗೆ ಆಗಮಿಸಿದ್ದ ವೇಳೆ ಘಟನೆ ಸಂಭವಿಸಿದೆ.

  • 29 Apr 2023 12:05 PM (IST)

    Karnataka Assembly Election Live: ವಿಜಯಪುರದತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿ

    ಬೀದರ್​​: ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದ ವೇದಿಕೆಯಿಂದ ನಿರ್ಗಮಿಸಿದ್ದು, ಹುಮ್ನಾಬಾದ್​ ಹೆಲಿಪ್ಯಾಡ್​ನತ್ತ ತೆರಳಿದ್ದಾರೆ. ಅಲ್ಲಿಂದ ವಿಜಯಪುರಕ್ಕೆ ಪ್ರಯಾಣ ಬೆಳಸಲಿದ್ದಾರೆ. ವಿಜಯಪುರದಲ್ಲಿ ನಡೆಯುವ ಬೃಹತ್​​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

  • 29 Apr 2023 11:53 AM (IST)

    Karnataka Assembly Election Live: ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿ: ಪ್ರಧಾನಿ ಮೋದಿ ಮತಯಾಚನೆ

    ಬೀದರ್​​​: ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬೇಕು. ಇದರಿಂದ ಮೂಲಸೌಕರ್ಯ, ವಿದೇಶಿ ಹೂಡಿಕೆ ಉತ್ತಮವಾಗಲಿದೆ. ಕರ್ನಾಟಕಕ್ಕೆ ಯಾಕೆ ಡಬಲ್ ಎಂಜಿನ್ ಸರ್ಕಾರ ಬೇಕೆಂದರೆ ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ನನಗೆ ವಿಶ್ವಾಸವಿದೆ. ಮತಗಟ್ಟೆಗೆ ತೆರಳಿ ಕಮಲದ ಚಿಹ್ನೆಗೆ ಮತ ನೀಡಿ. ಈ ಬಾರಿಯ ಮತ ಕರ್ನಾಟಕವನ್ನು ನಂಬರ್ 1 ಮಾಡಲು, ಅಮೃತ ಕಾಲಕ್ಕೆ ಕೊಡುಗೆ ನೀಡಲು ಎಂಬುದು ನೆನಪಿಡಿ. ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿ. ಮೇ 10ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ನೀಡಿ. ಕರ್ನಾಟಕದ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ. ಹಗಲಿರುಳು ನಿಮ್ಮೆಲ್ಲರ ಸೇವೆಗೂ ನಾನು ಬದ್ಧನಾಗಿದ್ದೇನೆ. ನಿಮ್ಮ ಆಶೀರ್ವಾದದಿಂದ ಬೈಗುಳಗಳು ಮಣ್ಣಲ್ಲಿ ಮಣ್ಣಾಗುತ್ತೆ. ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ. ನಿಮ್ಮ ಸೇವಕ ಮೋದಿಯಿಂದ ನಿಮಗೆಲ್ಲ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಹೇಳಿದರು.

  • 29 Apr 2023 11:49 AM (IST)

    Karnataka Assembly Election Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ

    ಬೀದರ್​: ವೀರ ಸಾವರ್ಕರ್​​ ಅವರನ್ನೂ ಕಾಂಗ್ರೆಸ್​ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನೂ ನಿಂದಿಸುತ್ತಿದ್ದಾರೆ. ಮಹಾನ್​ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್​​ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇದ್ದಾಗ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದರು.

  • 29 Apr 2023 11:45 AM (IST)

    Karnataka Assembly Election Live: ನನ್ನನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್

    ಬೀದರ್​​: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​​ನವರು ನನ್ನನ್ನು ಬೈಯ್ಯುತ್ತಿದ್ದಾರೆ. 91 ಬಾರಿ ಕಾಂಗ್ರೆಸ್​​ನವರು ನನಗೆ ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲೇ ಕಾಂಗ್ರೆಸ್​​ನವರು ಸಮಯ ವ್ಯರ್ಥ ಮಾಡ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್​​ನವರ ಚಾಳಿ. ಮೊದಲು ಚೌಕೀದಾರ್ ಚೋರ್ ಎಂದರು. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ.ಅಂಬೇಡ್ಕರ್​​ ಅವರನ್ನು ಕೂಡ ಕಾಂಗ್ರೆಸ್​​ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಕಾಂಗ್ರೆಸ್​​ನವರು. ಅವರಂತ ಮಹಾನ್ ಪುರುಷರನ್ನೂ ಕಾಂಗ್ರೆಸ್​ ನಿಂದಿಸಿದೆ ಎಂದು ಪ್ರಧಾನಿ ಮೋದಿ ಆರೋಪ ಮಾಡಿದರು.

  • 29 Apr 2023 11:43 AM (IST)

    Karnataka Assembly Election Live: ಸಮಾಜದಲ್ಲಿ ಕಂದಕ ಸೃಷ್ಟಿಸುವ ಕೆಲಸ ಕಾಂಗ್ರೆಸ್​ ಮಾಡುತ್ತಿದೆ: ಪ್ರಧಾನಿ ಮೋದಿ

    ಬೀದರ್​: ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿರಲಿಲ್ಲ. ನಾವು ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು, ಮೀಸಲಾತಿ ನೀಡಿದ್ದೇವೆ. ನಮ್ಮ ಸರ್ಕಾರ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದೆ. ಕಾಂಗ್ರೆಸ್ ಪಕ್ಷ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸಮಾಜದಲ್ಲಿ ಕಂದಕ ಸೃಷ್ಟಿಸುವ ಕೆಲಸ ಕಾಂಗ್ರೆಸ್​ ಮಾಡುತ್ತಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 29 Apr 2023 11:38 AM (IST)

    Karnataka Assembly Election Live: ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ

    ಬೀದರ್​: ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಬಿಜೆಪಿಯು ಬಡವರಿಗೆ ಮನೆ ಕಲ್ಪಸುವ ಯೋಜನೆಗೆ ವೇಗ ನೀಡಿತು. ಕರ್ನಾಟಕದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ. ಜಲ್​ಜೀವನ್​ ಮಿಷನ್​ ಯೋಜನೆಯಡಿ ದೇಶದಲ್ಲಿ 9  ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆಇಂದು ದೇಶದಲ್ಲಿ 9 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿಯೂ ಲಕ್ಷಾಂತರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಸಲಾಗಿದೆ. ಒಂಬತ್ತು ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. ಬೀದರ್ ಜಿಲ್ಲೆಯೊಂದರಲ್ಲೇ ಮೂವತ್ತು ಸಾವಿರ ಮನೆಗಳ ನಿರ್ಮಾಣವಾಗಿವೆ. ಮಹಿಳೆಯರ ಹೆಸರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

  • 29 Apr 2023 11:35 AM (IST)

    Karnataka Assembly Election Live: ಬಿಜೆಪಿ ಸರ್ಕಾರದಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ

    ಬೀದರ್​​: ಎಥೆನಾಲ್ ಉತ್ಪಾದನೆ ಹೆಚ್ಚಿಸಿದ್ದೇವೆ. ಅದರಿಂದ ರೈತರಿಗೆ ಲಾಭವಾಗಲಿದೆ. ಪೆಟ್ರೋಲ್ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ. ಸಿರಿಧಾನ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಂಡಿದ್ದೇವೆ. ಇದರಿಂದಲೂ ರೈತರಿಗೆ ಪ್ರಯೋಜನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

  • 29 Apr 2023 11:30 AM (IST)

    Karnataka Assembly Election Live: ಕಾಂಗ್ರೆಸ್​ ರೈತರಿಗೆ ವಂಚನೆ ಮಾಡಿದೆ: ಪ್ರಧಾನಿ ಮೋದಿ

    ಬೀದರ್​​: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರವೂ ಹಣ ಸೇರಿಸಿ ನೀಡಲಾರಂಭಿಸಿತು. ರಾಜಸ್ಥಾನದಲ್ಲಿ ಕಾಂಗ್ರೆಸ್​​ ಸರ್ಕಾರ ಸಾಲಮನ್ನಾ ಮಾಡುವುದಾಗಿ ಸುಳ್ಳು ಹೇಳಿ ರೈತರಿಗೆ ವಂಚನೆ ಮಾಡಿದೆ. ಇದು ಕಾಂಗ್ರೆಸ್​​ನ ಅಸಲೀ ಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

  • 29 Apr 2023 11:27 AM (IST)

    Karnataka Assembly Election Live: ಕಾಂಗ್ರೆಸ್, ಜೆಡಿಎಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಬೀದರ್​: ಡಬಲ್ ಎಂಜಿನ್​ನ ಡಬಲ್​ ಸ್ಪೀಡ್​ನಿಂದ ಅಭಿವೃದ್ಧಿ ಸಾಧ್ಯವಾಗಿದೆ. ಒಂದು ವೇಳೆ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿಗೆ ವೇಗ ದೊರೆಯುತ್ತಿರಲಿಲ್ಲ. ಬೀದರ್​​ನಲ್ಲಿಯೂ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ವೇಗ ಪಡೆದುಕೊಂಡಿವೆ. ನೀವೆಲ್ಲ ನೋಡುತ್ತಿದ್ದೀರಿ. ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಬಹಳಷ್ಟು ನೆರವಾಗಿದೆ. ಸಣ್ಣಪುಟ್ಟ ಖರ್ಚಿಗೆ ರೈತರಿಗೆ ನೆರವಾಗಿದೆ. ಯೋಜನೆ ಶುರು ಮಾಡಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇಲ್ಲಿತ್ತು. ಆಗ ಜನರಿಗೆ ಕೇಂದ್ರದ ಯೋಜನೆ ಸರಿಯಾಗಿ ತಲುಪುತ್ತಿರಲಿಲ್ಲ. ಫಲಾನುಭವಿಗಳ ಪಟ್ಟಿಯನ್ನೂ ಇಲ್ಲಿನ ಮೈತ್ರಿ ಸರ್ಕಾರ ನೀಡಿರಲಿಲ್ಲ. ರಾಜ್ಯ ಸರ್ಕಾರ ಒಂದು ಪೈಸೆ ಕೊಡೋದು ಬೇಕಿರಲಿಲ್ಲ. ಆದರೂ ಅವರು ಪಟ್ಟಿ ಕೊಡಲಿಲ್ಲ. ಯಾಕೆಂದರೆ ಅದರಿಂದ ಅವರಿಗೆ ಲಾಭ ಆಗುತ್ತಿರಲಿಲ್ಲ. ಹಾಗಾಗಿ ಅವರು ಫಲಾನುಭವಿಗಳ ಪಟ್ಟಿಯನ್ನೂ ಕೊಡಲಿಲ್ಲ ಎಂದು ಪ್ರಧಾನಿ ಮೋದಿಯವರು ವಾಗ್ದಾಳಿ ಮಾಡಿದರು.

  • 29 Apr 2023 11:25 AM (IST)

    Karnataka Assembly Election Live: ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಹೆಚ್ಚಾಗಿದೆ- ಪ್ರಧಾನಿ ಮೋದಿ

    ಬೀದರ್​​: ಡಬಲ್ ಎಂಜಿನ್ ಸರ್ಕಾರದ ಶಕ್ತಿಯಿಂದ ಕರ್ನಾಟಕವನ್ನು ನಂಬರ್ 1 ಮಾಡುವುದನ್ನು ಯಾರೂ ತಡೆಯಲಾರರು. ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಬಿಜೆಪಿ ಸರ್ಕಾರದಿಂದ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.

  • 29 Apr 2023 11:23 AM (IST)

    Karnataka Assembly Election Live: ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತಿದೆ

    ಬೀದರ್​: ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕ ಎತ್ತ ಸಾಗುತ್ತಿದೆ? ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ. ಹೆದ್ದಾರಿ, ಮೆಟ್ರೋ ವಿಸ್ತರಣೆಯಾಗುತ್ತಿವೆ.

  • 29 Apr 2023 11:22 AM (IST)

    Karnataka Assembly Election Live: ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ಮಾಡಲಿರುವ ಚುನಾವಣೆ

    ಬೀದರ್​​: ರಾಜ್ಯದ ಈ ಚುನಾವಣೆ 5 ವರ್ಷಗಳಿಗೆ ಸರ್ಕಾರ ರಚಿಸುವುದಕ್ಕಷ್ಟೇ ಇರುವ ಚುನಾವಣೆಯಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ಮಾಡಲಿರುವ ಚುನಾವಣೆಯಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 29 Apr 2023 11:21 AM (IST)

    Karnataka Assembly Election Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

    ಬೀದರ್​: ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಂದು ಇಡೀ ದೇಶಕ್ಕೆ ಸಂದೇಶ ನೀಡಿದ್ದೀರಿ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • 29 Apr 2023 11:17 AM (IST)

    Karnataka Assembly Election Live: ಭಾಷಣ ಆರಂಭದಲ್ಲಿ ಬಸವೇಶ್ವರರನ್ನ ನೆನೆದ ಪ್ರಧಾನಿ ಮೋದಿ

    ಬೀದರ್​: ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್​​ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್​​ನ ಆಶೀರ್ವಾದ ನನಗೆ ಸಿಕ್ಕಿದೆ.

  • 29 Apr 2023 11:14 AM (IST)

    Karnataka Assembly Election Live: ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

    ಬೀದರ್​: ಲಿಂಗಾಯತ ನಾಯಕರನ್ನು ಭ್ರಷ್ಟರು ಎನ್ನುವ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಚಿಕೆಯಾಗಬೇಕು. ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯ ಕಂಡಿರುವುದು ಸಿದ್ದರಾಮಯ್ಯನವರದ್ದು. ಕಡುಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರದ್ದಾಗಿತ್ತು. ಮೋದಿ ಬಗ್ಗೆ ಖರ್ಗೆ ಅವರು ಕೆಟ್ಟ ಪದ ಬಳಸಿ ಟೀಕಿಸಿದರು. ಮೋದಿ ಎಂದರೆ ಕಾಂಗ್ರೆಸ್​​ಗೆ ಸೋಲು ಅಂತಲೇ ಅರ್ಥ. ಕಾಂಗ್ರೆಸ್​​ ನಾಯಕರು ಹತಾಶೆಯಿಂದ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ವಿಷವನ್ನು ಕುಡಿದು ಜನರಿಗೆ ಒಳಿತನ್ನು ಮಾಡುವ ನಾಯಕ ಮೋದಿ ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು

  • 29 Apr 2023 11:12 AM (IST)

    Karnataka Assembly Election Live: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ವಿಶೇಷ ಕೊಡುಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ವಿಶೇಷ ಕೊಡುಗೆ: ಸಿಎಂ ಬೊಮ್ಮಾಯಿ

    ಬೀದರ್​​: ಕರ್ನಾಟಕಕ್ಕೆ 17 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದು ನರೇಂದ್ರ ಮೋದಿಯವರು. ಒಂದೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 12 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎರಡೂವರೆ ಲಕ್ಷ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ಗಮನಾರ್ಹ ಸಾಧನೆ ಮಾಡಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಕಲಬುರಗಿಯ ಮೆಗಾ ಟೆಕ್ಸ್​ಟೈಲ್ ಪಾರ್ಕ್​ನಿಂದಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಗೆ ಹೆಚ್ಚಿನ ಕೊಡುಗೆ ನೀಡಿದ ಧೀಮಂತ ನಾಯಕ ಮೋದಿಯವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

  • 29 Apr 2023 11:09 AM (IST)

    Karnataka Assembly Election Live: ಸಮಾವೇಶ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ

    ಬೀದರ್: ಜೆಲ್ಲೆಯ ಹುಮ್ನಾಬಾದ್​ ತಾಲೂಕಿನ ಚಿನಕೇರಾ ಕ್ರಾಸ್​​​ ಬಳಿ ಬಿಜೆಪಿ ಬೃಹತ್​ ಸಮಾವೇಶ ವೇದಿಕೆ ತಲುಪಿದ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದಾರೆ.

  • 29 Apr 2023 11:07 AM (IST)

    Karnataka Assembly Election Live: ಬೀದರ್​ಗೆ ಆಮಿಸಿದ ಪ್ರಧಾನಿ ಮೋದಿ

    ಬೀದರ್​​: ಪ್ರಧಾನಮಂತ್ರಿ ನರೇಂದ್ರ  ಮೋದಿಯವರು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್​ ಏರ್​ಬೇಸ್​ಗೆ ಆಗಮಿಸಿದ್ದಾರೆ. ಬೀದರ್​ ಏರ್​ಬೇಸ್​ನಿಂದ ಹುಮ್ನಾಬಾದ್​ ಹೆಲಿಪ್ಯಾಡ್​​​ನತ್ತ ಪ್ರಧಾನಿ  ಮೋದಿ ತೆರಳಿದ್ದಾರೆ.

  • 29 Apr 2023 09:48 AM (IST)

    Karnataka Assembly Election Live: ವಿಜಯಪುರದಲ್ಲಿ ಪ್ರಧಾನಿ ಮೋದಿಗೆ ಸಿದ್ದೇಶ್ವರಶ್ರೀಗಳ ವಿಲ್​ ಪತ್ರ ನೀಡಲಿರುವ ಬಿಜೆಪಿ ನಾಯಕರು

    ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.29) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ರಾಜ್ಯ ಪ್ರವಾಸದ ವೇಳಾಪಟ್ಟಿ ಪ್ರಕಾರ ವಿಜಯಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರಿಗೆ ವಿಶೇಷ ಉಡುಗೊರೆ ನೀಡಲು ಜಿಲ್ಲಾ ಬಿಜೆಪಿ ಮುಖಂಡರು ಸಿದ್ದತೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರ, ಮತ್ತು ಅವರು ಬರೆದಿದ್ದ “ಅಂತಿಮ ಅಭಿವಂದನ ಪತ್ರ” ವಿಲ್​ ಪ್ರತಿಯನ್ನು ನೀಡಲಿದ್ದಾರೆ.   ಈ ಹಿಂದೆ ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಿದ್ದೇಶ್ವರ ಶ್ರೀಗಳು ಪ್ರಶಂಸನೆಯ ಮಾತುಗಳನ್ನು ಆಡಿದ್ದರು.  ಹೀಗಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಲ್ ಪ್ರತಿ ಭಾವಚಿತ್ರ ನೀಡಲಾಗುತ್ತಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.

  • 29 Apr 2023 09:37 AM (IST)

    Karnataka Assembly Election Live: ಇಂದು ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಮಿತ್​ ಶಾ ಮತಯಾಚನೆ

    ಮಡಿಕೇರಿ: ಮಡಿಕೇರಿಗೆ ಇಂದು (ಏ.29) ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಲಿದ್ದಾರೆ. ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ರೋಡ್ ಶೋ ನಡೆಸಲಿದ್ದಾರೆ. ನಗರದ ಚೌಡೇಶ್ವರಿ ದೇವಸ್ಥಾನದಿಂದ ಜನರಲ್​​ ತಿಮ್ಮಯ್ಯ ವೃತ್ತದವರೆಗೆ ಶಕ್ತಿ ಪ್ರದರ್ಶನ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳಾದ ಅಪ್ಪಚ್ಚು ರಂಜನ್, ಕೆಜಿ ಬೋಪಯ್ಯ ಪರ ಮತಯಾಚಿಸಲಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲಿದ್ದಾರೆ.

  • 29 Apr 2023 09:19 AM (IST)

    Karnataka Election 2023 Live: ಮಂಡ್ಯ ಜಿಲ್ಲೆಯಲ್ಲಿಂದು ಖರ್ಗೆ, ಡಿ.ಕೆ.ಶಿವಕುಮಾರ್​ ಕ್ಯಾಂಪೇನ್​

    ಮಂಡ್ಯ ಜಿಲ್ಲೆಯಲ್ಲಿಂದು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್​ ಕ್ಯಾಂಪೇನ್​ ನಡೆಸಲಿದ್ದಾರೆ. ಮಳವಳ್ಳಿ, ಕೆ.ಆರ್​.ಪೇಟೆ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಳವಳ್ಳಿಗೆ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಭೇಟಿ ನೀಡಲಿದ್ದು ಮಳವಳ್ಳಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೆ.ಆರ್​.ಪೇಟೆ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಪ್ರಚಾರ ಮಾಡಲಿದ್ದಾರೆ.

  • 29 Apr 2023 08:49 AM (IST)

    Karnataka Assembly Election Live: ಇಂದು ಕೊಪ್ಪಳಕ್ಕೆ ಕೇಂದ್ರ ಸಚಿವ ಸ್ಮೃತಿ ಇರಾನಿ ಭೇಟಿ

    ಕೊಪ್ಪಳ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇಂದು (ಏ.29) ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಹ್ನ 2:30ಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಸಂಜೆ 4.30 ಕ್ಕೆ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.

  • 29 Apr 2023 08:22 AM (IST)

    Karnataka Assembly Election Live: ಇಂದು ಧಾರವಾಡ ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಭೇಟಿ

    ಧಾರವಾಡ: ಇಂದು (ಏ.29) ರಾಜ್ಯಕ್ಕೆ ಮತ್ತೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಾರೆ.  ಬೆಳಗ್ಗೆ 11.30ಕ್ಕೆ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನವಲಗುಂದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುತ್ತಾರೆ. ಸಂಜೆ 5 ಗಂಟೆಗೆ ದಾಂಡೇಲಿ-ಹಳಿಯಾಳದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.

  • 29 Apr 2023 07:52 AM (IST)

    Karnataka Assembly Election Live: ಇಂದು ಮೈಸೂರಿಗೆ ಕೇಂದ್ರ ಸಚಿವ ರಾಜನಾಥ್​​ ಸಿಂಗ್​ ಭೇಟಿ

    ಮೈಸೂರು: ರಾಜ್ಯ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಇಂದು (ಏ.29) ಮೈಸೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸುತ್ತಿದ್ದಾರೆ. ಬೆಳಗ್ಗೆ 11.15ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಮೈಸೂರಿಗೆ ಆಗಮಿಸುತ್ತಾರೆ. 11.30 ರಿಂದ 12.30ರವರೆಗೂ ನಗರದ ವಿವೇಕಾನಂದ ವೃತ್ತದಲ್ಲಿ ಆಯೋಚಿಸಲಾಗಿರುವ ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ 12.40ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡುತ್ತಾರೆ. ಮಠದಲ್ಲಿಯೇ ಭೋಜನ ಸವಿದು, ಬಳಿಕ ಹೆಲಿಕ್ಯಾಪ್ಟರ್ ಮೂಲಕ ಶ್ರೀರಂಗಪಟ್ಟಣಕ್ಕೆ ಪ್ರಯಾಣ ಬೆಳಸುತ್ತಾರೆ.

  • 29 Apr 2023 07:31 AM (IST)

    Karnataka Assembly Election Live: ಇಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸದ ವೇಳಾಪಟ್ಟಿ

    ಬೆಂಗಳೂರು: ಬೆಳಗ್ಗೆ 8.20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಹೊರಡಲಿದ್ದಾರೆ. 10.20ಕ್ಕೆ ಬೀದರ್​​ ಏರ್​ಬೇಸ್​ಗೆ​ ಆಗಮಿಸಿ,  10.25ಕ್ಕೆ ಏರ್​ಬೇಸ್​​ನಿಂದ ಹುಮ್ನಾಬಾದ್​ ಕಡೆಗೆ ಪ್ರಯಾಣ ಬೆಳಸಲಿದ್ದಾರೆ.  10.50ಕ್ಕೆ ಹುಮ್ನಾಬಾದ್​ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್​ ಆಗಿ, 10.55ಕ್ಕೆ ಹುಮ್ನಾಬಾದ್​ ಹೆಲಿಪ್ಯಾಡ್​ನಿಂದ ಹೊರಡಲಿದ್ದಾರೆ. ನಂತರ 11 ಗಂಟೆಯಿಂದ 11:40ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗುತ್ತಾರೆ.

    11.40ಕ್ಕೆ ಕಾರ್ಯಕ್ರಮದ ಸ್ಥಳದಿಂದ ಹೆಲಿಪ್ಯಾಡ್​​ನತ್ತ ಹೊರಟು,  11.45ಕ್ಕೆ ಹೆಲಿಪ್ಯಾಡ್​​​ ತಲುಪಲಿದ್ದಾರೆ.  ಬೆಳಗ್ಗೆ 11.50ಕ್ಕೆ MI-17 ಹೆಲಿಕಾಪ್ಟರ್​​ ಮೂಲಕ ವಿಜಯಪುರದತ್ತ ಪ್ರಯಾಣ ಬೆಳಸಲಿದ್ದಾರೆ. ಮಧ್ಯಾಹ್ನ 12.50ಕ್ಕೆ ವಿಜಯಪುರ ಹೆಲಿಪ್ಯಾಡ್​ ತಲುಪಲಿರುವ ಅವರು, 12.55ಕ್ಕೆ ವಿಜಯಪುರ ಹೆಲಿಪ್ಯಾಡ್​ನಿಂದ ರಸ್ತೆ ಮೂಲಕ​ ಪ್ರಯಾಣ ಬೆಳಸಿ, 1 ಗಂಟೆಗೆ ವಿಜಯಪುರದಲ್ಲಿ ಸಮಾವೇಶ ಸ್ಥಳವನ್ನು ತಲುಪಲಿದ್ದಾರೆ. 1 ಗಂಟೆಯಿಂದ 1.40ರವರೆಗೂ ಸಮಾವೇಶದಲ್ಲಿ ಪಾಲ್ಗೊಂಡು, 1.45ಕ್ಕೆ ವಿಜಯಪುರ ಸಮಾವೇಶ ಸ್ಥಳದಿಂದ ಹೊರಡುತ್ತಾರೆ.

    ಮಧ್ಯಾಹ್ನ 1.55ಕ್ಕೆ ಹೆಲಿಕಾಪ್ಟರ್​​ ಮೂಲಕ ಕುಡಚಿಯತ್ತ ಪ್ರಯಾಣ ಬೆಳಸಲಿದ್ದಾರೆ. 2.35ಕ್ಕೆ ಕುಡಚಿ ಹೆಲಿಪ್ಯಾಡ್​ಗೆ ಬಂದಿಳಿಯಲಿರುವ ಪ್ರಧಾನಿ ಮೋದಿಯವರು, ಮಧ್ಯಾಹ್ನ 2.40ಕ್ಕೆ ರಸ್ತೆ ಮಾರ್ಗವಾಗಿ​ ಸಮಾವೇಶ ಸ್ಥಳದತ್ತ ಹೊರಡುತ್ತಾರೆ. 2.45ಕ್ಕೆ ಕುಡಚಿ ಸಮಾವೇಶದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. 2.45ರಿಂದ 3.25ರವರೆಗೆ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ. 3.30ಕ್ಕೆ ಕುಡಚಿ ಸಮಾವೇಶ ಮುಗಿಸಿ, 3.40ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಬೆಳಗಾವಿಯತ್ತ ಸಾಗುತ್ತಾರೆ.

    ಸಂಜೆ 4.20ಕ್ಕೆ ಬೆಳಗಾವಿ ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿಯವರು, 4.25ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ. 5.30ಕ್ಕೆ HAL ಏರ್​ಪೋರ್ಟ್​​ಗೆ​ ಬಂದಿಳಿಯಲಿದ್ದು, 5.35ಕ್ಕೆ ಹೆಚ್​ಎಎಲ್​ನಿಂದ MI-17 ಹೆಲಿಕಾಪ್ಟರ್​​ ಮೂಲಕ  5.55ಕ್ಕೆ ಬಿಐಇಸಿ ಹೆಲಿಪ್ಯಾಡ್​ಗೆ ಆಗಮಿಸುತ್ತಾರೆ. ಸಂಜೆ 6 ಗಂಟೆಗೆ ಹೆಲಿಪ್ಯಾಡ್​ನಿಂದ ಮಾಗಡಿ ರಸ್ತೆಗೆ ಬರುತ್ತಾರೆ. 6.18ರಿಂದ 7 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್​ ಶೋ ನಡೆಸಲಿದ್ದಾರೆ.

    ಸಂಜೆ 7.05ಕ್ಕೆ ಸುಮನಹಳ್ಳಿಯಿಂದ ರಸ್ತೆ ಮೂಲಕ ರಾಜಭವನದತ್ತ ಪ್ರಯಾಣ ಬೆಳಸಲಿದ್ದು, ಸಂಜೆ 7.25ಕ್ಕೆ ರಾಜಭವನ ತಲುಪಲಿದ್ದಾರೆ. ಇಂದು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

  • 29 Apr 2023 07:06 AM (IST)

    Karnataka Assembly Election Live: ಬಸವಣ್ಣನ ಕರ್ಮಭೂಮಿ ಬೀದರ್​ಗೆ ಆಗಮಿಸಲಿರುವ ಪ್ರಧಾನಿ ಮೋದಿ

    ಬೀದರ್​​: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತಯಾಚನೆಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ಚಗರು ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ. ಇಂದು ಮುಂಜಾನೆ 8:20ಕ್ಕೆ ಸೇನಾ ವಿಮಾನದ ಮೂಲಕ ದೆಹಲಿಯಿಂದ ಹೊರಟು, ಮುಂಜಾನೆ 10:20ಕ್ಕೆ ಬೀದರ್ ಏರ್ ಬೇಸ್ ಗೆ ಆಗಮಿಸಲಿದ್ದಾರೆ. ಬೀದರ್ ಏರ್ ಬೇಸ್​ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಪಟ್ಟಣಕ್ಕೆ ಬರುತ್ತಾರೆ. ಪಟಣ್ಣದ ಚೀನಕೇರಾ ಕ್ರಾಸ್ ಬಳಿ ಆಯೋಜಿಸಲಾಗಿರುವ ಬೃಹತ್​ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.

  • Published On - Apr 29,2023 6:58 AM

    Follow us
    Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
    Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
    ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
    ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
    ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
    ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
    ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
    ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
    ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
    ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
    ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
    ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
    ‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
    ‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
    Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
    Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
    ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ