
KR Nagar Assembly Election Results 2023:ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಕೆಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ (KR Nagar Assembly Constituency) ಕಾಂಗ್ರೆಸ್ ಅಭ್ಯರ್ಥಿ ಡಿ ರವಿಶಂಕರ್ ಗೆದ್ದಿದ್ದಾರೆ. ಜೆಡಿಎಸ್‌ನಿಂದ ನಿರೀಕ್ಷೆಯಂತೆ ಸಾರಾ ಮಹೇಶ್ ಅವರು ಸ್ಪರ್ಧೆ ಮಾಡಿದ್ದರು. ಇನ್ನು ಬಿಜೆಪಿಯಿಂದ ವೆಂಕಟೇಶ್ ಹೊಸಳ್ಳಿ ಅವರು ಸ್ಪರ್ಧೆ ಮಾಡಿದ್ದರು. ಆಮ್ ಆದ್ಮಿ ಪಾರ್ಟಿಯಿಂದ ಮುರಗೇಶ್ ಕಣದಲ್ಲಿದ್ದರು.
ಜೆಡಿಎಸ್ ಭದ್ರಕೋಟೆಯಾಗಿದೆ. ಕೆಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನಾಲ್ಕನೇ ಗೆಲುವು ಸಾಧಿಸಲು ಶಾಸಕ ಸಾ.ರಾ.ಮಹೇಶ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ, ಅದೃಷ್ಟ ಕೈ ಹಿಡಿಯಲಿಲ್ಲ.
2.10 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿರುವ ಕೃಷ್ಣರಾಜನಗರ ಹ್ಯಾಟ್ರಿಕ್ ಸಾಧನೆ ಮಾಡಿದ ಜೆಡಿಎಸ್ ನಾಯಕರ ಪ್ರಬಲ ಕ್ಷೇತ್ರವಾಗಿದೆ. ಜೆಡಿಸ್ಗೆ ಕಠಿಣ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದ್ದರೂ, ಜನತಾ ದಳದ (ಜಾತ್ಯತೀತ) ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಮತ್ತು ಒಕ್ಕಲಿಗ ನಾಯಕರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ವಿಫಲವಾಗಿದೆ.
Published On - 3:21 am, Sat, 13 May 23