Piriyapatna Election Results: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕೆ ವೆಂಕಟೇಶ್‌, ಕೆ ಮಹಾದೇವ್‌ ಮಧ್ಯೆ ಪೈಪೋಟಿ

Periyapatna Assembly Election Result 2023 Live Counting Updates: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿಎಚ್‌ ವಿಜಯಶಂಕರ್‌ ಸ್ಪರ್ಧಿಸಿದ್ದರೇ, ಕಾಂಗ್ರೆಸ್‌ನಿಂದ ಕೆ ವೆಂಕಟೇಶ್‌ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಕೆ ಮಹಾದೇವ್‌ ಅವರು ಸ್ಪರ್ಧಿಸಿದ್ದು ಮತ ಎಣಿಕೆಯ ವಿವರ ಇಲ್ಲಿದೆ.

Piriyapatna Election Results: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕೆ ವೆಂಕಟೇಶ್‌, ಕೆ ಮಹಾದೇವ್‌ ಮಧ್ಯೆ ಪೈಪೋಟಿ
ಜೆಡಿಎಸ್,​ ಕಾಂಗ್ರೆಸ್​
Edited By:

Updated on: May 13, 2023 | 3:18 AM

Piriyapatna Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ (Periyapatna Assembly Constituency) ಈ ಭಾರಿ ಬಿಜೆಪಿಯಿಂದ ಸಿಎಚ್‌ ವಿಜಯಶಂಕರ್‌ ಅವರು ಕಣದಲ್ಲಿದ್ದರೆ ಕಾಂಗ್ರೆಸ್‌ನಿಂದ ಕೆ ವೆಂಕಟೇಶ್‌ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್‌ನಿಂದ ಕೆ ಮಹಾದೇವ್‌ ಅವರು ಕಣಕ್ಕಿಳಿದಿದ್ದಾರೆ. ಎಎಪಿಯಿಂದ ರಾಜಶೇಖರ್‌ ದೊಡ್ಡಣ್ಣ ಕಣಕ್ಕೆ ಇಳಿದಿದ್ದಾರೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರಾ ಹಣಾಹಣಿಯಿದ್ದು, ಈ ಬಾರಿ ಬಿಜೆಪಿ ಕೂಡ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯ ಬೇಕು ಎನ್ನುವ ಪ್ರಯತ್ನದಲ್ಲಿದೆ.

ಕ್ಷೇತ್ರದಲ್ಲಿ ​ಕೆ.ವೆಂಕಟೇಶ್‌ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್‌ ಭದ್ರಕೋಟೆ ಮಾಡಿದ್ದರು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿ ಕೆ.ಮಹದೇವ್‌ ಅವರು ಕೆ.ವೆಂಕಟೇಶ್‌ ಅವರ ಸತತ ಗೆಲುವಿಗೆ ಬ್ರೇಕ್ ಹಾಕಿದರು. ಇನ್ನು ಬಿಜೆಪಿ ಖಾತೆ ತೆರೆಯಲು ಮುಂದಾಗಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ