AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls 2023:ಇಂದಿನಿಂದ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಿಳಿದ ಸುದೀಪ್, ಕಿಚ್ಚನ ಕ್ಯಾಂಪೇನ್​ ಎಲ್ಲೆಲ್ಲಿ?

ಕಿಚ್ಚ ಸುದೀಪ್ ಇಂದಿನಿಂದ ಚುನಾವಣಾ ಪ್ರಚಾರದ ಅಕಾಡಕ್ಕಿಳಿದಿದ್ದು, ಇಂದು ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕ್ಯಾಂಪೇನ್ ಮಾಡಲಿದ್ದಾರೆ.

Karnataka Assembly Polls 2023:ಇಂದಿನಿಂದ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಿಳಿದ ಸುದೀಪ್, ಕಿಚ್ಚನ ಕ್ಯಾಂಪೇನ್​ ಎಲ್ಲೆಲ್ಲಿ?
ಬೊಮ್ಮಾಯಿ-ಸುದೀಪ್
ರಮೇಶ್ ಬಿ. ಜವಳಗೇರಾ
| Edited By: |

Updated on:Apr 26, 2023 | 10:11 AM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿವಿಧ ಪಕ್ಷಗಳ ನಾಯಕರು ಮತಬೇಟೆಗಿಳಿದಿದ್ದಾರೆ. ಅದರಲ್ಲೂ ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸಿದ್ದಾರೆ. ಇನ್ನು ಬಿಜೆಪಿ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದ ನಟ ಕಿಚ್ಚ ಸುದೀಪ್(Kichcha Sudeep), ಇದೀಗ ಮತ್ತೊಮ್ಮೆ ಮತಬೇಟೆಗೆ ಇಳಿದಿದ್ದಾರೆ. ಇಂದು (ಏಪ್ರಿಲ್ 26) ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ಮತ್ತೊಮ್ಮೆ ಭರ್ಜರಿ ಕ್ಯಾಂಪೇನ್ ನಡೆಸಲಿದ್ದಾರೆ. ಕಿಚ್ಚ ಇಂದು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಒಟ್ಟು 6 ಕಡೆ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ಹಾಕಿ ಎಂದ ಹೆಚ್​ಡಿ ಕುಮಾರಸ್ವಾಮಿ ಪರಮಾಪ್ತ: ವಿಡಿಯೋ ಬೆನ್ನಲ್ಲೇ ಫೋಟೋ ವೈರಲ್

ಇಂದು ಕೋಟೆನಾಡಿಗೆ ನಟ ಕಿಚ್ಚ ಸುದೀಪ್‌ ಎಂಟ್ರಿ ಕೊಡಲಿದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗ್ಗೆ 10:55ರಿಂದ 11:40ರವರೆಗೆ ರೋಡ್ ಶೋ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಬಳಿಕ ಜಗಳೂರಿಗೆ ತೆರಳಲಿರುವ ಕಿಚ್ಚ ಸುದೀಪ್, ಅಲ್ಲೂ ಕೂಡ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮಾಯಕೊಂಡ, ಸಂಜೆ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡಲಿದ್ದಾರೆ. ಬಳಿಕ ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಮತಯಾಚನೆ ನಡೆಸಲಿದ್ದಾರೆ.

ಸುದೀಪ್ ಹೇಳಿದ್ದೇನು?

ಇನ್ನು ಚಿತ್ರದುರ್ಗಕ್ಕೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಇಂದಿನಿಂದ ನನ್ನ ಪ್ರಚಾರ ಪ್ರಾರಂಭವಾಗುತ್ತಿದೆ. ನಾನು ಹೋದ ಕಡೆ ಜನರು ತುಂಬಾ ಪ್ರೀತಿ ತೋರಿಸುತ್ತಾರೆ. ಜನರನ್ನು ಭೇಟಿಯಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದರು.

ಎಲ್ಲದಕ್ಕಿಂತ ಹೆಚ್ಚಾಗಿ ರೋಡ್ ಶೋ ಮಾಡಿ ತುಂಬಾ ವರ್ಷಗಳಾಗಿದೆ. ಹೆಬ್ಬುಲಿಗೆ ಲಾಸ್ಟ್ ಮಾಡಿದ್ದೆ. ಇವತ್ತಿಂದ ಫುಲ್ ಪ್ಲೇಡ್ಜ್ ಆಗಿ ಪ್ರಚಾರವನ್ನ ಮಾಡುತ್ತೇನೆ. ಮಧ್ಯಾಹ್ನ ಬಿಸಿಲು ಬೇಡ ಎಂದು ಗ್ಯಾಪ್ ಇಟ್ಟಿದ್ದರು. ಅದರೂ ಸಹ ನಾನು ಅದಷ್ಟು ಮಾಡುತ್ತಿದ್ದೇನೆ. ನನಗೆ ಎಲ್ಲಾ ಕಡೆ ಸ್ನೇಹಿತರು ಇದಾರೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 am, Wed, 26 April 23