ಹೊಸ ಹೊಸ ಯೋಜನೆಗಳ ಜಾರಿಗೆ ತರಲು ಉತ್ಸುಕರಾಗಿದ್ದೇವೆ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ಹಲವು ಭಾಗ್ಯಗಳನ್ನ ಜನರಿಗೆ ನೀಡಿದೆ. ಹೊಸ ಹೊಸ ಯೋಜನೆಗಳ ಜಾರಿಗೆ ತರಲು ಉತ್ಸುಕರಾಗಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಹೊಸ ಹೊಸ ಯೋಜನೆಗಳ ಜಾರಿಗೆ ತರಲು ಉತ್ಸುಕರಾಗಿದ್ದೇವೆ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)
Rakesh Nayak Manchi

Updated on: May 07, 2023 | 9:26 PM

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ಹಲವು ಭಾಗ್ಯಗಳನ್ನ ಜನರಿಗೆ ನೀಡಿದ್ದು, ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕರಾಗಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ. ಎರಡೂವರೆ ಲಕ್ಷ ಸರ್ಕಾರಿ ನೌಕರಿಯನ್ನು ಒಂದು ವರ್ಷದಲ್ಲಿ ಕಾಂಗ್ರೆಸ್ (Congress) ಸರ್ಕಾರ ತುಂಬಲಿದೆ. ನಿಮ್ಮ ಅಗತ್ಯ ವಸ್ತುಗಳನ್ನು ನಿಮ್ಮ ಮನೆಗೆ ತಲುಪಿಸುವ ಹಲವು ಉದ್ಯೋಗಿಗಳನ್ನ ಯೋಜನೆ ಜಾರಿಗೆ ತರಲಿದ್ದೇವೆ ಎಂದರು.

ಟ್ಯಾಕ್ಸಿ, ಆಟೋ ಚಾಲಕರಿಗೆ 50 ಜನರ ಗುಂಪು ಮಾಡಿ ಆರ್ಥಿಕ ಸಬಲರನ್ನಾಗಿ ಮಾಡಲು ಯೋಜನೆ ರೂಪಿಸಲಾಗುವುದು, ರಾಜ್ಯದಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ನೌಕರರಿಗೆ ಕನಿಷ್ಟ ಸಂಬಳ ಸಿಗುವಂತೆ ಯೋಜನೆ ರೂಪಿಸುತ್ತೇವೆ, ಹೊಸ ಹೊಸ ಯೋಜನೆಗಳ ಜಾರಿಗೆ ತರಲು ಉತ್ಸುಕರಾಗಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಸಣ್ಣ ಪ್ರಮಾಣದ ಉದ್ಯಮಿ, ಉದ್ಯಮಗಳಿಗೆ ಸಹಕಾರ ನೀಡಬೇಕಿದೆ. ಗುಡಿಕೈಗಾರಿಕೆಗಳನ್ನ, ಮಧ್ಯಮ ಸ್ಥರದ ಉದ್ಯೋಗಗಳನ್ನ, ಅಭಿವೃದ್ಧಿ ಯತ್ತ ಕೊಂಡ್ಯೋಯ್ಯಬೇಕಿದೆ. ಭಾರತದಲ್ಲಿ ಸಣ್ಣ, ಮಧ್ಯಮ ಉದ್ಯಮಗಳ ಬೆನ್ನು ಮೂಳೆ ಸರ್ಕಾರ ಮುರಿದಿದೆ. ಈ ನೀತಿ ಕಾರಣದಿಂದ ನಿರುದ್ಯೋಗ ಹೆಚ್ಚಾಗಿದೆ. ಸಣ್ಣ, ಮಧ್ಯಮ ಸ್ಥರ ಉದ್ಯೋಗ ಬಲಗೊಳಿಸಲು ಆರ್ಥಿಕ ಬಲ ತುಂಬುವುದು ನಮ್ಮ ಆದ್ಯತೆಯಾಗಿದೆ ಎಂದರು.

ಇದನ್ನೂ ಓದಿ: ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ ಎಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಬೀದರ್​ನಿಂದ ಚಾಮರಾಜನಗರದವರೆಗೆ, ಮೈಸೂರು, ಬಳ್ಳಾರಿ, ಹುಬ್ಬಳ್ಳಿಯಿಂದ ಐಟಿ ಕಾರಿಡರ್ ನಿರ್ಮಾಣವಾಗಬೇಕು. ಕರ್ನಾಟಕದಲ್ಲಿ ಆಟೋಮೊಬೈಲ್, ಎಲೆಕ್ಟ್ರಾನಿಕ್ ಉದ್ಯಮಿ ನಿರ್ಮಣಕ್ಕೆ ಆದ್ಯತೆ ನೀಡುವ ಉದ್ದೇಶ ನಮ್ಮದಾಗಿದೆ. ನಮ್ಮ ಸರ್ಕಾರ ಎಂದು ಹೆಮ್ಮೆ ಪಡುವ ಸರ್ಕಾರ ನೀಡುವ ಇರಾದೆ ಹೊಂದಿದ್ದೇವೆ. ಮುಂದೆ ಕರ್ನಾಟಕದ ಸರ್ಕಾರ ನಿಮಗೆ ಬದ್ಧವಾಗಿರಲಿದೆ, ನಿಮ್ಮೊಟ್ಟಿಗೆ ಇರಲಿದೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಆರ್ ಕೆ ರಮೇಶ್ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಉಮಾಪತಿ ಗೌಡಗೆ ಮತ ನೀಡುವಂತೆ ವಿನಂತಿ ಮಾಡಿದ ಪ್ರಿಯಾಂಕಾ ಗಾಂಧಿ, 40 ಪರ್ಸೆಂಟ್ ಸರ್ಕಾರದ ಬದಲಾಗಿ ಜನಪರ ಸರ್ಕಾರಕ್ಕೆ ಕಾಂಗ್ರೆಸ್ ಗೆವಮತ ನೀಡುವಂತೆ ಮನವಿ ಮಾಡಿದರು.

ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾ ಭಾಗ್ಯ, ಇಂದಿರಾ ಕ್ಯಾಂಟೀನ್ ನಂತ ಹಲವು ಜನಪರ ಯೋಜನೆಗಳು ನಿಮ್ಮ ಮುಂದಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನ ಹೊಂದಿದೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ತಮ್ಮ ಪಕ್ಷದ ಉಚಿತ ಘೋಷಣೆಗಳ ಬಗ್ಗೆ ಮುಂದಿಟ್ಟರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us