ತೇರದಾಳ ಕ್ಷೇತ್ರಕ್ಕೆ ನೇಕಾರ ಸ್ವಾಮೀಜಿ ಎಂಟ್ರಿ: ಯೋಗಿ ಆದಿತ್ಯನಾಥ್​ ಪ್ರೇರಣೆ ನಾ?

ತೇರದಾಳ‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಬುಧವಾರ ಪಾದಯಾತ್ರೆ ಮೂಲಕ ಆಗಮಿಸಿ ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ತೇರದಾಳ ಕ್ಷೇತ್ರಕ್ಕೆ ನೇಕಾರ ಸ್ವಾಮೀಜಿ ಎಂಟ್ರಿ: ಯೋಗಿ ಆದಿತ್ಯನಾಥ್​ ಪ್ರೇರಣೆ ನಾ?
ಶಿವಶಂಕರ ಶಿವಾಚಾರ್ಯ ಸ್ವಾಮೀಜಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 19, 2023 | 6:55 PM

ಬಾಗಲಕೋಟೆ: ಉತ್ತರ ಕರ್ನಾಟಕದ (North Karnataka) ಬಾಗಲಕೋಟೆ (Bagalkote) ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳ ಪೈಕಿ ತೇರದಾಳ (Terdal) ವಿಧಾನಸಭಾ ಮತಕ್ಷೇತ್ರ ಕೂಡ ಒಂದು. ಸದ್ಯ ಈ ಕ್ಷೇತ್ರಕ್ಕೆ ನೇಕಾರ ಸ್ವಾಮೀಜಿ ಎಂಟ್ರಿ ಆಗಿದೆ. ತೇರದಾಳ‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಬುಧವಾರ ಪಾದಯಾತ್ರೆ ಮೂಲಕ ಆಗಮಿಸಿ ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಟಿವಿ9 ಜೊತೆ ಮಾತನಾಡಿದ ಅವರು,  ಖಾವಿಧಾರಿಗಳು, ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದು ಅಂತೇನಿಲ್ಲ. ರಾಜಕಾರಣ ನಾವು ಮಾಡಬೇಕು. ಆದರೆ ರಾಜಕಾರಣ ಧರ್ಮದಲ್ಲಿ ತರಬೇಕು ಅಂತಿಲ್ಲ. ಧರ್ಮ ಜೀವನ ಮಾಡುವುದರ ಜೊತೆಗೆ ರಾಜಕಾರಣ ಮಾಡಬೇಕು ಅಂತ ಬಂದಿದ್ದೇನೆ ಎಂದು ಹೇಳಿದರು.

ಸರಕಾರದಿಂದ ನೇಕಾರ ಸಮಾಜದ ಬಗ್ಗೆ ಅಸಡ್ಡೆ ಭಾವನೆ ಇದೆ. ನಮ್ಮ ನೇಕಾರ ಸಮಾಜಕ್ಕೆ ಯಾವುದೇ ಪಕ್ಷದಲ್ಲಿ ಟಿಕೆಟ್ ನೀಡಲಿಲ್ಲ. ಇದರಿಂದ ನೇಕಾರ ಸಮಾಜದಲ್ಲಿ ಆಕ್ರೋಶವಿತ್ತು. ಅವರೆಲ್ಲರೂ ಸೇರಿ ಸ್ವಾಮೀಜಿಗಳೆ ನೀವೇ ನಿಲ್ಲಿ ಎಂದ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿ ನೇಕಾರ ಟಿಕೆಟ್ ಸಿಗದ ಒಂದೇ ಬಣ ನಮ್ಮನ್ನು ನಿಲ್ಲಿಸುತ್ತಿಲ್ಲ. ಎಲ್ಲ ನೇಕಾರ ಸಮಾಜದ ಜನರು ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ನಾನು ಯಶಸ್ವಿಯಾಗಲಿದ್ದೇನೆ ಎಂದರು.

ಇದನ್ನೂ ಓದಿ: ಟಿಕೆಟ್​ ವಂಚಿತರ ಮಾಸ್ಟರ್​ ಪ್ಲಾನ್​: ತೇರದಾಳದಲ್ಲಿ ನೇಕಾರ ಸಮುದಾಯದ ಸ್ವಾಮೀಜಿ ಸ್ಪರ್ಧೆ ಸಾಧ್ಯತೆ

ಯೋಗಿ ಆದಿತ್ಯನಾಥ್ ನಿಮಗೆ ಪ್ರೇರಣೆ ನಾ?

ಯೋಗಿ ಆದಿತ್ಯನಾಥ್​ ನಿಮಗೆ ಪ್ರೇರಣೆ ನಾ ಎಂಬ ಪ್ರಶ್ನೆಗೆ ಉತ್ತರಿಸಿ, ಯೋಗಿ ಆದಿತ್ಯನಾಥ ನಮ್ಮ ಗುರುಗಳು, ನಮ್ಮ ಶಕ್ತಿ ಕೂಡ ಆಗಿದ್ದಾರೆ. ಆದರೆ ಅವರನ್ನು ಐಡಲ್ ಆಗಿ ಇಟ್ಟುಕೊಂಡು ರಾಜಕೀಯ ಮಾಡಬೇಕು ಅಂತಿಲ್ಲ. ಶೋಷಿತರಿಗೆ, ಬಡವರಿಗೆ, ನೇಕಾರರಿಗೆ ಒಳ್ಳೆಯ ಕೆಲಸ ಮಾಡಬೇಕು ಅಂತ ಬಂದಿದ್ದೇನೆ. ಜೆಸಿಬಿ ಮೇಲೆ ಮೆರವಣಿಗೆ, ಜೆಸಿಬಿ ಚಿಹ್ನೆ ಬಳಕೆ ವಿಚಾರವಾಗಿ ಮಾತನಾಡಿ, ಇದೆಲ್ಲ ನಮ್ಮ ಬೆಂಬಲಿಗರು ಭಕ್ತಿಯಿಂದ ಹಾಗೆ ಮಾಡುತ್ತಿದ್ದಾರೆ. ನಾನೇನು ಆ ಬಗ್ಗೆ ಹೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Karnataka Assembly Election: ಜೆಡಿಎಸ್​​ ಮೂರನೇ ಪಟ್ಟಿ ಬಿಡುಗಡೆ: 59 ಅಭ್ಯರ್ಥಿಗಳ ಹೆಸರು ಪ್ರಕಟ

ಸಿದ್ದು ಸವದಿ ಸೋಲಿಸಲು ಸ್ವಾಮೀಜಿ ಅಖಾಡಕ್ಕೆ

ಸಿದ್ದು ಸವದಿ ಸೋಲಿಸಲು ಸ್ವಾಮೀಜಿ ಅಖಾಡಕ್ಕೆ ಕರೆತಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತಿರಿಸಿ, ನಾನು ಯಾರ ಗುರಾಣಿಗೂ ನಾನು ಬಲಿಯಾಗೋದಿಲ್ಲ. ಯಾರ ಗುರಾಣಿಗೂ ನಾನು ಒಳಗಾಗೋದಿಲ್ಲ. ನನಗೆ ನಮ್ಮದೆ ಆದ ಭಕ್ತರ ಬಳಗವಿದೆ. ಎಲ್ಲರೂ ನನ್ನ ಭಕ್ತರೆ. ಭಕ್ತರೇ ನಮ್ಮನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:54 pm, Wed, 19 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ