AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Election: ಜೆಡಿಎಸ್​​ ಮೂರನೇ ಪಟ್ಟಿ ಬಿಡುಗಡೆ: 59 ಅಭ್ಯರ್ಥಿಗಳ ಹೆಸರು ಪ್ರಕಟ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಜೆಡಿಎಸ್​ ಬುಧವಾರ ಬಿಡುಗಡೆ ಮಾಡಿದೆ. 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ.

Karnataka Assembly Election: ಜೆಡಿಎಸ್​​ ಮೂರನೇ ಪಟ್ಟಿ ಬಿಡುಗಡೆ: 59 ಅಭ್ಯರ್ಥಿಗಳ ಹೆಸರು ಪ್ರಕಟ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Apr 19, 2023 | 5:24 PM

Share

ಮುಖ್ಯಾಂಶಗಳು

  • ಜೆಡಿಎಸ್​ 3ನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರು ಪ್ರಕಟ
  • 12 ಅಭ್ಯರ್ಥಿಗಳ ಬದಲಾವಣೆ
  • ಆಯನೂರು ಮಂಜುನಾಥ್​ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್​ ಲಭ್ಯ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಜೆಡಿಎಸ್​ ಬುಧವಾರ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ​​ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಪಕ್ಷಾಂತರ ಮಾಡಿದ ಹಲವು ನಾಯಕರು ಪ್ರಾದೇಶಿಕ ಪಕ್ಷದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ನಗರ, ಮಂಡ್ಯ, ವರುಣಾ, ರಾಜಾಜಿನಗರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ 12 ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

ಆಯನೂರು ಮಂಜುನಾಥ್​ಗೆ ಶಿವಮೊಗ್ಗ ಟಿಕೆಟ್

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಸೇರ್ಪಡೆ ಆಗಿರುವ ಶಿವಮೊಗ್ಗ ಬಿಜೆಪಿ MLC ಆಯನೂರು ಮಂಜುನಾಥ್​ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್​ ಲಭ್ಯವಾಗಿದೆ.  ಕಳೆದ ವಾರ ಜೆಡಿಎಸ್ ಸೇರ್ಪಡೆ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಎನ್.ಆರ್.ಸಂತೋಷ್ ಅವರು ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಅಭ್ಯರ್ಥಿಗಳ ವಿವರ ಹೀಗಿದೆ

  • ನಿಪ್ಪಾಣಿ- ರಾಜು ಮಾರುತಿ ಪವಾರ್​
  • ಚಿಕ್ಕೋಡಿ ವಿಧಾನಸಭಾ ಕ್ಷೇತ್ರ-ಸದಾಶಿವ ವಾಳಕೆ
  • ಕಾಗವಾಡ ವಿಧಾನಸಭಾ ಕ್ಷೇತ್ರ- ಮಲ್ಲಪ್ಪ ಎಂ ಚುಂಗ
  • ಹುಕ್ಕೇರಿ ಕ್ಷೇತ್ರ- ಬಸವರಾಜಗೌಡ ಪಾಟೀಲ್​
  • ಅರಭಾವಿ ಕ್ಷೇತ್ರ- ಪ್ರಕಾಶ ಕಾಶ ಶೆಟ್ಟಿ
  • ಶಿವಮೊಗ್ಗ ನಗರ- ಆಯನೂರು ಮಂಜುನಾಥ್​
  • ಯಮಕನಮರಡಿ ಕ್ಷೇತ್ರ -ಮಾರುತಿ ಮಲ್ಲಪ್ಪ ಅಷ್ಟಗಿ
  • ಬೆಳಗಾವಿ ಉತ್ತರ ಕ್ಷೇತ್ರ- ಶಿವಾನಂದ ಮುಗಲಿಹಾಳ್​
  • ಬೆಳಗಾವಿ ದಕ್ಷಿಣ ಕ್ಷೇತ್ರ- ಶ್ರೀನಿವಾಸ್​ ತೋಳಲ್ಕರ್​
  • ಬೆಳಗಾವಿ ಗ್ರಾಮಾಂತರ ಕ್ಷೇತ್ರ- ಶಂಕರಗೌಡ ರುದ್ರಗೌಡ ಪಾಟೀಲ್
  • ರಾಮದುರ್ಗ ಕ್ಷೇತ್ರ- ಪ್ರಕಾಶ್​​ ಮುಧೋಳ
  • ಮುಧೋಳ ಕ್ಷೇತ್ರ-ಧರ್ಮರಾಜ್​ ವಿಠ್ಠಲ್ ದೊಡ್ಮನಿ
  • ತೇರದಾಳ ಕ್ಷೇತ್ರ-ಸುರೇಶ್ ಅರ್ಜುನ್ ಮಡಿವಾಳರ್​
  • ಜಮಖಂಡಿ ಕ್ಷೇತ್ರ-ಯಾಕೂಬ್ ಬಾಬಲಾಲ್​ ಕಪಡೇವಾಲ
  • ಬೀಳಗಿ ಕ್ಷೇತ್ರ-ರುಕ್ಕುದ್ದೀನ್ ಸೌದಗರ್​
  • ಬಾಗಲಕೋಟೆ ಕ್ಷೇತ್ರ-ದೇವರಾಜ ಪಾಟೀಲ್
  • ಹುನಗುಂದ ಕ್ಷೇತ್ರ-ಶಿವಪ್ಪ ಮಹದೇವಪ್ಪ ಬೋಲಿ
  • ವಿಜಯಪುರ ಕ್ಷೇತ್ರ-ಬಂಡೇನವಾಜ್​ ನಾಜರಿ
  • ಸುರಪುರ ಕ್ಷೇತ್ರ-ಶ್ರವಣಕುಮಾರ ನಾಯ್ಕ್​
  • ಕಲಬುರಗಿ ದಕ್ಷಿಣ ಕ್ಷೇತ್ರ-ಕೃಷ್ಣಾರೆಡ್ಡಿ
  • ಔರಾದ್ ಕ್ಷೇತ್ರ-ಜೈಸಿಂಗ್ ರಾಥೋಡ್​
  • ರಾಯಚೂರು ನಗರ ಕ್ಷೇತ್ರ-ಈ.ವಿನಯ್ ಕುಮಾರ್​
  • ಮಸ್ಕಿ ಕ್ಷೇತ್ರ-ರಾಘವೇಂದ್ರ ನಾಯಕ
  • ಕನಕಗಿರಿ ಕ್ಷೇತ್ರ-ರಾಜಗೋಪಾಲ
  • ಯಲಬುರ್ಗಾ ಕ್ಷೇತ್ರ-ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
  • ಕೊಪ್ಪಳ ಕ್ಷೇತ್ರ-ಚಂದ್ರಶೇಖರ
  • ಶಿರಹಟ್ಟಿ ಕ್ಷೇತ್ರ-ಹನುಮಂತಪ್ಪ ನಾಯಕ
  • ಗದಗ ಕ್ಷೇತ್ರ-ಯಂಕನಗೌಡ ಗೋವಿಂದಗೌಡರ
  • ರೋಣ ಕ್ಷೇತ್ರ-ಮುಗದಮ್​ ಸಾಬ್ ಮುಧೋಳ
  • ಚಿತ್ರದುರ್ಗ ಕ್ಷೇತ್ರ-ರಘು ಆಚಾರ್​
  • ರಾಜರಾಜೇಶ್ವರಿನಗರ ಕ್ಷೇತ್ರ-ಡಾ.ನಾರಾಯಣಸ್ವಾಮಿ
  • ಮಲ್ಲೇಶ್ವರಂ ಕ್ಷೇತ್ರ-ಉತ್ಕರ್ಷ್
  • ಚಿಕ್ಕಪೇಟೆ ಕ್ಷೇತ್ರ-ಇಮ್ರಾನ್ ಪಾಷಾ
  • ಚಾಮರಾಜಪೇಟೆ ಕ್ಷೇತ್ರ-ಗೋವಿಂದರಾಜ್
  • ಪದ್ಮನಾಭನಗರ ಕ್ಷೇತ್ರ-ಬಿ.ಮಂಜುನಾಥ
  • ಬಿಟಿಎಂ ಲೇಔಟ್​ ಕ್ಷೇತ್ರ-ವೆಂಕಟೇಶ್​
  • ಜಯನಗರ ಕ್ಷೇತ್ರ-ಕಾಳೇಗೌಡ
  • ಬೊಮ್ಮನಹಳ್ಳಿ ಕ್ಷೇತ್ರ-ನಾರಾಯಣರಾಜು
  • ಅರಸೀಕೆರೆ ಕ್ಷೇತ್ರ-ಎನ್.ಆರ್.ಸಂತೋಷ್​
  • ಮೂಡಬಿದ್ರೆ ಕ್ಷೇತ್ರ-ಅಮರಶ್ರೀ
  • ಸುಳ್ಯ ಕ್ಷೇತ್ರ-ಹೆಚ್.ಎನ್.ವೆಂಕಟೇಶ್
  • ವಿರಾಜಪೇಟೆ ಕ್ಷೇತ್ರ-ಮನ್ಸೂರ್ ಅಲಿ
  • ಚಾಮರಾಜ ಕ್ಷೇತ್ರ-ಹೆಚ್.ಕೆ.ರಮೇಶ್
  • ನರಸಿಂಹರಾಜ ಕ್ಷೇತ್ರ-ಅಬ್ದುಲ್ ಖಾದರ್ ಶಾಹಿದ್​
  • ಚಾಮರಾಜನಗರ ಕ್ಷೇತ್ರ-ಮಲ್ಲಿಕಾರ್ಜುನ ಸ್ವಾಮಿ
  • ಕೂಡ್ಲಿಗಿ ಕ್ಷೇತ್ರ-ಕೋಡಿಹಳ್ಳಿ ಭೀಮಪ್ಪ

12 ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಬದಲಾವಣೆ

  • ಬಸನಬಾಗೇವಾಡಿ ಕ್ಷೇತ್ರ-ಸೋಮನಗೌಡ ಪಾಟೀಲ್
  • ಬಸವಕಲ್ಯಾಣ ಕ್ಷೇತ್ರ-ಸಂಜಯ್ ವಾಡೇಕರ್​
  • ಬೀದರ್ ಕ್ಷೇತ್ರ-ಸೂರ್ಯಕಾಂತ್ ನಾಗಮಾರಪಳ್ಳಿ
  • ಕುಷ್ಟಗಿ ಕ್ಷೇತ್ರ-ಶರಣಪ್ಪ ಕುಂಬಾರ
  • ಹಗರಿಬೊಮ್ಮನಹಳ್ಳಿ ಕ್ಷೇತ್ರ-ನೇಮಿರಾಜ ನಾಯ್ಕ್​
  • ಬಳ್ಳಾರಿ ನಗರ ಕ್ಷೇತ್ರ-ಅನಿಲ್ ಲಾಡ್​
  • ಚನ್ನಗಿರಿ ಕ್ಷೇತ್ರ-ತೇಜಸ್ವಿ ಪಟೇಲ್​
  • ಮೂಡಿಗೆರೆ ಕ್ಷೇತ್ರ-ಎಂ.ಪಿ.ಕುಮಾರಸ್ವಾಮಿ
  • ರಾಜಾಜಿನಗರ ಕ್ಷೇತ್ರ-ಡಾ.ಅಂಜನಪ್ಪ
  • ಬೆಂಗಳೂರು ದಕ್ಷಿಣ ಕ್ಷೇತ್ರ-ರಾಜಗೋಪಾಲರೆಡ್ಡಿ
  • ಮಂಡ್ಯ ಕ್ಷೇತ್ರ-ಬಿ.ಆರ್.ರಾಮಚಂದ್ರ
  • ವರುಣ ಕ್ಷೇತ್ರ-ಭಾರತಿ ಶಂಕರ್​

ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಬಾಹ್ಯ ಬೆಂಬಲ

ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣಗೆ, ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ), ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ), ಸಿ.ವಿ.ರಾಮನ್​ನಗರ ಕ್ಷೇತ್ರದಲ್ಲಿ ಆರ್​ಪಿಐ, ಮಹದೇವಪುರ ಕ್ಷೇತ್ರದಲ್ಲಿ ಆರ್​ಪಿಐ ಮತ್ತು ವಿಜಯನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಜೆಡಿಎಸ್​ ಬಾಹ್ಯ ಬೆಂಬಲ ಘೋಷಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:40 pm, Wed, 19 April 23

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು