ಬಸವ ಜಯಂತಿ ದಿನದಂದೇ ಬಸವಣ್ಣನವರಿಗೆ ಅವಮಾನಿಸಿದ್ದೀರಿ, ಇದರ ಪರಿಣಾಮ ಚುನಾವಣೆಯಲ್ಲಿ ಎದುರಿಸುತ್ತೀರಿ; ಈರಣ್ಣ ಕಡಾಡಿ
ಲಿಂಗಾಯತ ಸಿಎಂ ರಾಜ್ಯ ಹಾಳು ಮಾಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ‘ ಬಸವ ಜಯಂತಿ ದಿನದಂದೇ ಬಸವಣ್ಣನವರಿಗೆ ಅವಮಾನಿಸಿದ್ದೀರಿ, ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದೀರಾ. ಇದರ ಪರಿಣಾಮ ಮುಂಬರುವ ಚುನಾವಣೆಯಲ್ಲಿ ಎದುರಿಸುತ್ತೀರಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿ: ಲಿಂಗಾಯತ ಸಿಎಂ ರಾಜ್ಯ ಹಾಳು ಮಾಡಿದ್ದಾರೆಂಬ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರ ‘ ಬಸವ ಜಯಂತಿ ದಿನದಂದೇ ಬಸವಣ್ಣನವರಿಗೆ ಅವಮಾನಿಸಿದ್ದೀರಿ, ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದೀರಾ. ಇದರ ಪರಿಣಾಮ ಮುಂಬರುವ ಚುನಾವಣೆಯಲ್ಲಿ ಎದುರಿಸುತ್ತೀರಿ. ಸಿದ್ದರಾಮಯ್ಯ ಅಷ್ಟೇ ಅಲ್ಲ, ಕಾಂಗ್ರೆಸ್ ಸಹ ಪರಿಣಾಮ ಎದುರಿಸುತ್ತೆ. ಸಿದ್ದರಾಮಯ್ಯಗೆ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಹೈಕಮಾಂಡ್ ತಣ್ಣೀರೆರಚಿದೆ. ವರುಣದಲ್ಲಿ ತಮಗೆ ಯಾರೂ ಸ್ಪರ್ಧೆ ಇಲ್ಲ ಎಂಬ ಭ್ರಮೆಯಲ್ಲಿದ್ದರು. ಲಿಂಗಾಯತ ಸಮಾಜದ ಸೋಮಣ್ಣ ಸ್ಪರ್ಧೆಯಿಂದ ಕಂಗಲಾಗಿದ್ದು, ಇಡೀ ಸಮಾಜ ಬಿಜೆಪಿ ಜೊತೆ ನಿಂತಿದ್ದನ್ನ ಕಂಡು ಗಾಬರಿಯಾಗಿದ್ದಾರೆ ಎಂದು ಈರಣ್ಣ ಕಡಾಡಿ (Eranna Kadadi) ಹೇಳಿದರು.
ಬೆಳಗಾವಿಯಲ್ಲಿ ಟಿವಿ9 ಜೊತೆ ‘ನನ್ನ ಹೇಳಿಕೆ ಬಿಜೆಪಿ ತಿರುಚುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ನಾವು ತಿರುಚುವ ಪ್ರಶ್ನೆಯೇ ಇಲ್ಲ, ನೀವು ಮಾತನಾಡಿದ್ದು ರೆಕಾರ್ಡ್‌ನಲ್ಲಿದೆ. ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಚಿತ್ತರಗಿ ಶ್ರೀ, ಪೇಚಿಗೆ ಸಿಲುಕಿದ ಸಂಘಟಕರು
ಇನ್ನು 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಕೊಡಲಿಲ್ಲ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣರ ಆರೋಪದ ಆಧಾರದ ಮೇಲೆ ಮಾತನಾಡುತ್ತಿದ್ದೀರಿ. ಆರೋಪ ಸಾಬೀತು ಮಾಡಲಾಗದೇ, ದಾಖಲೆ ಒದಗಿಸದೇ ಕೆಂಪಣ್ಣ ಜೈಲಿಗೆ ಹೋದ್ರು, ಸಮರ್ಥವಾದ ವಿಪಕ್ಷ ನಾಯಕ ಆಧಾರ ರಹಿತ ಆರೋಪ ಮಾಡಲು ಸಾಧ್ಯವಿಲ್ಲ. ಚುನಾವಣೆ ಹೋಗಲಿಕ್ಕೆ ಅವರ ಬಳಿ ಯಾವುದೇ ವಿಷಯ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ