AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Election 2021 Voting LIVE: ಕೇರಳದಲ್ಲಿ ಮತದಾನ ಪ್ರಕ್ರಿಯೆ ಆರಂಭ

ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ, ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ, ಪಶ್ಚಿಮಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಹಾಗೂ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

Kerala Election 2021 Voting LIVE: ಕೇರಳದಲ್ಲಿ ಮತದಾನ ಪ್ರಕ್ರಿಯೆ ಆರಂಭ
ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್​ ಧ್ವಜಗಳು
Skanda
| Edited By: |

Updated on:Apr 06, 2021 | 10:40 PM

Share

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿದ್ದು, ಈಗಾಗಲೇ ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಮತದಾನ ಆರಂಭವಾಗಿದ್ದು, ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ, ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ, ಪಶ್ಚಿಮಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಹಾಗೂ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಕಡೆಗಳಿಂದ ಒಟ್ಟು 20 ಕೋಟಿಗೂ ಅಧಿಕ ಜನ ಇಂದು ಮತ ಚಲಾಯಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.

LIVE NEWS & UPDATES

The liveblog has ended.
  • 06 Apr 2021 08:19 AM (IST)

    ಒಟ್ಟು‌ 2.74 ಕೋಟಿ‌ ಮತದಾರರಿಂದ‌ ಮತದಾನ

    ಕೇರಳದ ಚುನಾವಣಾ ಕಣದಲ್ಲಿ ಒಟ್ಟು 957‌ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 40,771 ಮತದಾನ‌ ಕೇಂದ್ರಗಳ‌ ವ್ಯವಸ್ಥೆ ಮಾಡಲಾಗಿದೆ. ಒಟ್ಟು‌ 2.74 ಕೋಟಿ‌ ಮತದಾರರು ಮತ ಚಲಾಯಿಸಲಿದ್ದು, ಶಾಂತಿಯುತ ಮತದಾನಕ್ಕೆ‌‌ ಸೂಕ್ತ‌ ಭದ್ರತೆಯೊಂದಿಗೆ ಸಕಲ‌ ವ್ಯವಸ್ಥೆ ಮಾಡಲಾಗಿದೆ.

  • 06 Apr 2021 08:17 AM (IST)

    ಕೇರಳದಲ್ಲಿ ತ್ರಿಕೋನ ಸ್ಪರ್ಧೆಯಿಂದ ಹೆಚ್ಚಿದ ಕುತೂಹಲ

    ಕೇರಳದಲ್ಲಿ‌ ಚುನಾವಣೆ ಕಾವು ಜೋರಾಗಿದ್ದು, ತ್ರಿಕೋನ‌ ಸ್ಪರ್ಧೆಯಿಂದಾಗಿ‌ ಭಾರೀ ಕುತೂಹಲ ಮೂಡಿದೆ.ಚುನಾವಣಾ ‌ಕಣದಲ್ಲಿ‌ ಅಧಿಕಾರ ರೂಢ‌‌ ಎಲ್.ಡಿ.ಎಫ್, ಕಾಂಗ್ರೆಸ್​ ನೇತೃತ್ವದ ಯೂಡಿಎಫ್​ ಹಾಗೂ ಬಿಜೆಪಿ ಒಕ್ಕೂಟಗಳ‌‌ ಪೈಪೋಟಿ ಜೋರಾಗಿದೆ.

Published On - Apr 06,2021 8:24 AM