ABP-CVoter Exit Poll 2024: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಿಂತ ಮೇಲುಗೈ ಸಾಧಿಸಲಿದೆ ಬಿಜೆಪಿ

ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 21 ರಿಂದ 23 ಸ್ಥಾನಗಳನ್ನು ಗಳಿಸಬಹುದು. ಅದೇ ವೇಳೆ ಇಂಡಿಯಾ ಬಣ 2 ರಿಂದ 4 ಸ್ಥಾನ ಗಳಿಸುವ ಸಾಧ್ಯತೆ ಇದೆ. ಮತ ಹಂಚಿಕೆ ಶೇಕಡಾವಾರು ಪ್ರಕಾರ, ಎನ್​​ಡಿಎ 54.5% ಮತಗಳನ್ನು ಗಳಿಸಬಹುದು. ಇಂಡಿಯಾ ಬಣ ಶೇ 38.6% ಗಳಿಸಲಿದ್ದು ಇತರರು ಶೇ.6.9ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ABP-CVoter Exit Poll 2024: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಿಂತ ಮೇಲುಗೈ ಸಾಧಿಸಲಿದೆ ಬಿಜೆಪಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jun 01, 2024 | 8:58 PM

ದೆಹಲಿ ಜೂನ್ 01: ಲೋಕಸಭಾ ಚುನಾವಣೆಗೆ (Lok Sabha Election) ಮತದಾನ ಮುಕ್ತಾಯವಾಗಿದ್ದು ವಿವಿಧ ಮಾಧ್ಯಮ ಸಂಸ್ಥೆಗಳು, ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆಯನ್ನು (Exit polls) ಪ್ರಕಟಿಸಿವೆ. ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಮತ್ತೊಮ್ಮೆ ಸರ್ಕಾರ ರಚಿಸಲಿದ್ದು ನರೇಂದ್ರ ಮೋದಿ (Narendra Modi) ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 23 ರಿಂದ 27 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಟಿಎಂಸಿ 13 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು ಕಾಂಗ್ರೆಸ್ + ಸಿಪಿಎಂ 1 ರಿಂದ 3 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ. ಮತ ಹಂಚಿಕೆಯ ಶೇಕಡಾವಾರು ಪ್ರಕಾರ, ಎನ್‌ಡಿಎ 42.5% ಮತಗಳನ್ನು ಪಡೆದುಕೊಳ್ಳಬಹುದು. ಟಿಎಂಸಿ 41.5% ಗಳಿಸಬಹುದು, ಕಾಂಗ್ರೆಸ್ + ಸಿಪಿಐಎಂ 13.2 ಗಳಿಸಬಹುದು. ಇತರರು ಶೇ.2.8ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಗೋವಾದಲ್ಲಿ ಇಂಡಿಯಾ ಮೈತ್ರಿಕೂಟ 46.1% ಮತ ಹಂಚಿಕೆಯೊಂದಿಗೆ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಎನ್​​ಡಿಎ 45.2% ಮತ ಪಾಲನ್ನು ಪಡೆಯಬಹುದು ಮತ್ತು ಒಂದು ಸ್ಥಾನವನ್ನು ಕಳೆದುಕೊಳ್ಳಬಹುದು. ಒಂದು ವೇಳೆ 2019 ರ ಲೋಕಸಭಾ ಚುನಾವಣೆಯ ಕಾರ್ಯಕ್ಷಮತೆಯನ್ನು ಪುನರಾವರ್ತಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಗುಜರಾತ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಲೋಕಸಭೆಯ ಫಲಿತಾಂಶದಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಎನ್​​ಡಿಎ 25 ರಿಂದ 26 ಸ್ಥಾನಗಳನ್ನು ಪಡೆದರೆ ಇಂಡಿಯಾ ಬಣ ಒಂದು ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮತ ಹಂಚಿಕೆ ಶೇಕಡಾವಾರು ಪ್ರಕಾರ ಎನ್​​ಡಿಎ 62% ಮತಗಳನ್ನು ಗಳಿಸಬಹುದು. ಆದರೆ ಇಂಡಿಯಾ ಬಣ 34.9 ರಷ್ಟು ಮತ ಪಡೆಯುವ ಸಾಧ್ಯತೆಯಿದೆ. ಇತರರು ಶೇ.3.1ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 21 ರಿಂದ 23 ಸ್ಥಾನಗಳನ್ನು ಗಳಿಸಬಹುದು. ಅದೇ ವೇಳೆ ಇಂಡಿಯಾ ಬಣ 2 ರಿಂದ 4 ಸ್ಥಾನ ಗಳಿಸುವ ಸಾಧ್ಯತೆ ಇದೆ. ಮತ ಹಂಚಿಕೆ ಶೇಕಡಾವಾರು ಪ್ರಕಾರ, ಎನ್​​ಡಿಎ 54.5% ಮತಗಳನ್ನು ಗಳಿಸಬಹುದು. ಇಂಡಿಯಾ ಬಣ ಶೇ 38.6% ಗಳಿಸಲಿದ್ದು ಇತರರು ಶೇ.6.9ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಮಧ್ಯಪ್ರದೇಶದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ 26 ರಿಂದ 28 ಸ್ಥಾನಗಳನ್ನು ಗಳಿಸಬಹುದು. ಇಂಡಿಯಾ ಮೈತ್ರಿಕೂಟ 1 ರಿಂದ 3 ಸ್ಥಾನಗಳನ್ನು ಗೆಲ್ಲಬಹುದು. ಮತ ಹಂಚಿಕೆಯ ಶೇಕಡಾವಾರು ಪ್ರಕಾರ, ಎನ್ ಡಿಎ 53.5% ಮತಗಳನ್ನು ಗಳಿಸಬಹುದು, ಇಂಡಿಯಾ 37.6% ಮತ್ತು. ಇತರರು 8.9% ಮತಗಳನ್ನು ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ:Karnataka Exit Poll Results: ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ

ಛತ್ತೀಸ್‌ಗಢದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 10 ರಿಂದ 11 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಇಂಡಿಯಾ ಮೈತ್ರಿಕೂಟಕ್ಕೆ 1 ಸ್ಥಾನ ಸಿಗಬಹುದು. ಮತ ಹಂಚಿಕೆ ಶೇಕಡಾವಾರು ಪ್ರಕಾರ, ಎನ್ ಡಿಎ 60.8% ಮತಗಳನ್ನು ಗಳಿಸಬಹುದು. ಇಂಡಿಯಾ 33.2% ಮತಗಳನ್ನು ಗಳಿಸಿದೆ ಇತರರು ಶೇ.5.9ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಇಂಡಿಯಾ ಬಣ ನಡುವಿನ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಇಲ್ಲಿ ಎನ್ ಡಿಎ 22 ರಿಂದ 26 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಇಂಡಿಯಾ ಬಣ 23 ರಿಂದ 25 ಸ್ಥಾನಗಳನ್ನು ಪಡೆಯಬಹುದು. ಮತ ಹಂಚಿಕೆ ಶೇಕಡಾವಾರು ಪ್ರಕಾರ, ಎನ್ ಡಿಎ 45.3% ಮತಗಳನ್ನು ಗಳಿಸಬಹುದು. ಇಂಡಿಯಾ 44%ಮತ್ತು ಇತರರು ಶೇ.10.7ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್ 3 ರಿಂದ 5 ಸ್ಥಾನಗಳನ್ನು ಗಳಿಸಬಹುದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟ 23 ರಿಂದ 25 ಸ್ಥಾನಗಳನ್ನು ಪಡೆಯಬಹುದು. ಮತಹಂಚಿಕೆ ನೋಡುವುದಾದರೆ ಇಂಡಿಯಾ ಬಣ 41.8% ಮತ್ತು ಬಿಜೆಪಿ 54.2% ಮತ ಪಾಲನ್ನು ಪಡೆಯಬಹುದು.

ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇರುವ 7 ಸ್ಥಾನಗಳಲ್ಲಿ ಇಂಡಿಯಾ1ರಿಂದ 3, ಎನ್‌ಡಿಎಗೆ 2ರಿಂದ 6 ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ. 25 ಈಶಾನ್ಯ ಸ್ಥಾನಗಳಲ್ಲಿ ಇಂಡಿಯಾ 3ರಿಂದ 7, ಎನ್‌ಡಿಎಗೆ 16ರಿಂದ 21 ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ. ತೆಲಂಗಾಣದಲ್ಲಿ ಎನ್ ಡಿಎ ಮತ್ತು ಇಂಡಿಯಾ ಬಣ 7 ರಿಂದ 9 ಗಳಿಸುವ ನಿರೀಕ್ಷೆಯಿದೆ. AIMIM 1 ಸ್ಥಾನವನ್ನು ಪಡೆದುಕೊಳ್ಳಬಹುದು. ಇಂಡಿಯಾ ಬಣ 38.6% , ಬಿಜೆಪಿ 33%, BRS 20.3% ಮತ್ತು AIMIM 2% ಮತಗಳನ್ನು ಗಳಿಸಬಹುದು.

ಆಂಧ್ರಪ್ರದೇಶದಲ್ಲಿ ಇಂಡಿಯಾ ಬಣಕ್ಕೆ ಹೆಚ್ಚಿನ ಲಾಭವಾಗಲ್ಲ. ಬಿಜೆಪಿಗೆ 21 ರಿಂದ 25, ಮತ್ತು ವೈಎಸ್‌ಆರ್‌ಸಿಪಿಗೆ 0 ರಿಂದ 4 ಸೀಟು ಸಿಗಲಿದೆ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು 37 ರಿಂದ 39 ಸ್ಥಾನಗಳನ್ನು ಗಳಿಸಬಹುದು, ಬಿಜೆಪಿಯು 0 ರಿಂದ 2 ಸ್ಥಾನಗಳನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿಕಾಂಗ್ರೆಸ್ 17ರಿಂದ 19, ಎನ್‌ಡಿಎ 1ರಿಂದ 3 ಸ್ಥಾನಗಳಿಸಲಿದ್ದು, ಎಲ್‌ಡಿಎಫ್‌ಗೆ  ಹೊಡೆತಬೀಳಲಿದೆ. ಇಂಡಿಯಾ ಮೈತ್ರಿಕೂಟಕ್ಕೆ 41.9%, ಬಿಜೆಪಿ 22.6% ಮತ್ತು ಎಲ್ ಡಿಎಫ್  33.3% ಮತ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇತರರು 2.2% ಮತಗಳನ್ನು ಪಡೆಯಬಹುದು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Sat, 1 June 24