Lok Sabha Election 2024: ಉರಿಬಿಸಿಲಲ್ಲಿ ಗದ್ದೆಗೆ ಹೋಗಿ ಗೋಧಿ ಬೆಳೆ ಕಟಾವು ಮಾಡಿದ ಸಂಸದೆ ಹೇಮಾ ಮಾಲಿನಿ

ಲೋಕಸಭಾ ಸಂಸದೆ ಹೇಮಾ ಮಾಲಿನಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ, ತನ್ನ ಕ್ಷೇತ್ರವಾದ ಮಥುರಾದಲ್ಲಿ ಗದ್ದೆಗೆ ತೆರಳಿ ಗೋಧಿ ಬೆಳೆಯನ್ನು ಕಟಾವು ಮಾಡಿರುವ ಚಿತ್ರವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಜತೆ ಕೆಲವು ಮಹಿಳಾ ರೈತರು ಕೂಡ ಇದ್ದು, ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

Lok Sabha Election 2024: ಉರಿಬಿಸಿಲಲ್ಲಿ ಗದ್ದೆಗೆ ಹೋಗಿ ಗೋಧಿ ಬೆಳೆ ಕಟಾವು ಮಾಡಿದ ಸಂಸದೆ ಹೇಮಾ ಮಾಲಿನಿ
ಹೇಮಾ ಮಾಲಿನಿ

Updated on: Apr 12, 2024 | 11:49 AM

ಮಥುರಾ ಲೋಕಸಭಾ ಸಂಸದೆ ಹಾಗೂ ನಟಿ ಹೇಮಾ ಮಾಲಿನಿ(Hema Malini) ಅವರು ಇತ್ತೀಚಿನ ದಿನಗಳಲ್ಲಿ  ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಗುರುವಾರ ಚುನಾವಣಾ ಪ್ರಚಾರದ ವೇಳೆ ರೈತರ ಮಧ್ಯೆ ಆಗಮಿಸಿದ ಹೇಮಾ ಮಾಲಿನಿ ಸುಡು ಬಿಸಿಲಿನಲ್ಲಿ ಕೈಯಲ್ಲಿ ಕುಡುಗೋಲು ಹಿಡಿದು ಗದ್ದೆಗೆ ತೆರಳಿ ಗೋಧಿ ಬೆಳೆ ಕಟಾವು ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಹೇಮಾ ಮಾಲಿನಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರೈತರು ಹೊಲಗಳಲ್ಲಿ ಬೆಳೆ ಕಟಾವು ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಕಂಜೀವರಂ ಸೀರೆಯನ್ನು ಧರಿಸಿ ಮಧ್ಯಾಹ್ನದ ಸಮಯದಲ್ಲಿ ರೈತರೊಂದಿಗೆ ಬೆಳೆ ಕಟಾವು ಮಾಡುತ್ತಿರುವುದನ್ನು ಕಾಣಬಹುದು.

ಹೇಮಾ ಮಾಲಿನಿ ಅವರನ್ನು ಇದ್ದಕ್ಕಿದ್ದಂತೆ ನೋಡಿ ರೈತರೂ ಆಶ್ಚರ್ಯಚಕಿತರಾಗಿದ್ದಾರೆ.  ಇದಕ್ಕೂ ಮುನ್ನ 2019ರ ಲೋಕಸಭೆ ಚುನಾವಣೆಯಲ್ಲಿ ಹೇಮಾ ಮಾಲಿನಿ ಇದೇ ರೀತಿ ರೈತರೊಂದಿಗೆ ಕಾಣಿಸಿಕೊಂಡಿದ್ದರು.

 

ಹೇಮಾ ಮಾಲಿನಿ ಸತತ ಎರಡು ಬಾರಿ ಈ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಈ ಬಾರಿಯೂ ಬಿಜೆಪಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ . ಹೇಮಾ ಮಾಲಿನಿ ಸತತ ಎರಡು ಬಾರಿ ಈ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಈ ಬಾರಿಯೂ ಬಿಜೆಪಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ .

ಮತ್ತಷ್ಟು ಓದಿ: Hema Malini: ‘ಸೀರೆಯ ಸೆರಗು ಜಾರಿ ಬೀಳಿಸುವ ಆಲೋಚನೆಯಲ್ಲಿ ಆ ನಿರ್ದೇಶಕ ಇದ್ದ’; ಹೇಮಾ ಮಾಲಿನಿ

ನಾನು ಕಳೆದ ಹತ್ತು ವರ್ಷಗಳಿಂದ ಈ ಗ್ರಾಮಕ್ಕೆ ಬರುತ್ತಿದ್ದೇನೆ, ರೈತರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಮಮಾಲಿನಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲಿ ರೈತ ಮಹಿಳೆಯರೊಂದಿಗೆ ಫೋಟೊಗಳನ್ನು ಕೂಡ ತೆಗೆಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ