ಲೋಕ ಟಿಕೆಟ್ ತಮಗೆ ಬೇಡ -ಮಗನಿಗೆ ಕೊಡಿ ಅನ್ನುತ್ತಿರುವ ಸಿದ್ದರಾಮಯ್ಯ ಆಪ್ತ ಮಹದೇವಪ್ಪ! ಕ್ಷೇತ್ರದಲ್ಲಿ ಏನಿದೆ ಲೆಕ್ಕಾಚಾರ?

ಒಂದು ಕಡೆ ಮಹದೇವಪ್ಪ ಮಗನಿಗೆ ಟಿಕೆಟ್ ಬೇಡಿಕೆ ಇಡುತ್ತಿದ್ರೆ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕರು ಮಾತ್ರ ಸುನಿಲ್ ಬೋಸ್ ಗೆ ಟಿಕೆಟ್ ಬೇಡ, ಬೇಕಾದ್ರೆ ಮಹದೇವಪ್ಪ ಓಕೆ ಅಂತಿದ್ದಾರೆ. ಇದ್ರಿಂದ ಮಹದೇವಪ್ಪರಿಗೆ ಧರ್ಮಸಂಕಟ ಶುರುವಾಗಿದೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಕಾಂಗ್ರೆಸ್ ಶಾಸಕರಿದ್ದರೂ, ಮಗನಿಗೆ ಬೇಡ ಅಂತಿರೋದು ಮಹದೇವಪ್ಪರಿಗೆ ನುಂಗಲಾರದ ತುತ್ತಾಗಿದೆ.

ಲೋಕ ಟಿಕೆಟ್ ತಮಗೆ ಬೇಡ -ಮಗನಿಗೆ ಕೊಡಿ ಅನ್ನುತ್ತಿರುವ ಸಿದ್ದರಾಮಯ್ಯ ಆಪ್ತ ಮಹದೇವಪ್ಪ! ಕ್ಷೇತ್ರದಲ್ಲಿ ಏನಿದೆ ಲೆಕ್ಕಾಚಾರ?
ಮಗನ ರಾಜಕೀಯ ಭವಿಷ್ಯಕ್ಕಾಗಿ ಮಹದೇವಪ್ಪ ಹೈಕಮಾಂಡ್ ಆಫರ್ ತಿರಸ್ಕರಿಸಿದರೇ?
Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on:Feb 22, 2024 | 12:51 PM

ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಕಾಂಗ್ರೆಸ್ ಸಾಕಷ್ಟು ತಂತ್ರ ರೂಪಿಸುತ್ತಿದೆ.‌ ಈ ನಡುವೆ ಸಚಿವರುಗಳೆ ಸ್ಪರ್ಧೆ ಮಾಡಿದ್ರೆ ಅನುಕೂಲ ಅನ್ನುವ ಕಾಂಗ್ರೆಸ್ ಹೈ ಕಮಾಂಡ್ ಆಲೋಚನೆ ಮಾಡಿದೆ. ಆದ್ರೆ ಸಚಿವ ಡಾ. ಹೆಚ್​ ಸಿ ಮಹದೇವಪ್ಪ (Minister HC Mahadevappa) ಮಾತ್ರ ಮಗನ ರಾಜಕೀಯ ಭವಿಷ್ಯಕ್ಕಾಗಿ ಸ್ಪರ್ಧೆಗೆ ಹಿಂದೇಟು ಹಾಕಿದ್ದು,ಟಿಕೆಟ್ ಕೊಟ್ಟರೆ ಮಗನಿಗೆ ಕೊಡಿ ಇಲ್ಲದಿದ್ದರೆ ಬೇಡ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ.

ಹೌದು, ಈ ಬಾರಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸಲು ಒಂದಿಲ್ಲೊಂದು ಕಸರತ್ತು ನಡೆಸುತ್ತಲೆ ಇದೆ.‌ ಈ ನಡುವೆ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನ ಮತ್ತೆ ಕೈ ವಶ ಮಾಡಿಕೊಳ್ಳಲು ಹಲವು ತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಚಾಮರಾಜನಗರ ಕ್ಷೇತ್ರದಿಂದ ಸಚಿವ ಮಹದೇವಪ್ಪ ಅವರೇ ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಒತ್ತಡವನ್ನ ಹಾಕಿದೆ. ‌ಆದ್ರೆ ಸಚಿವ ಮಹದೇವಪ್ಪ ಮಾತ್ರ ಹೈಕಮಾಂಡ್ ಆಫರ್ ಅನ್ನು ತಿರಸ್ಕಾರ ಮಾಡಿದ್ದಾರೆ.

ಆದರೆ ಟಿಕೆಟ್ ಮಾತ್ರ ತಮ್ಮ ಪುತ್ರ ಸುನೀಲ್ ಬೋಸ್ (Sunil Bose) ಗೆ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲದೆ ಅವರ ಆಪ್ತರಿಗು ಮಕ್ಕಳ ಭವಿಷ್ಯದ್ದೆ ದೊಡ್ಡ ಚಿಂತೆಯಾಗಿದೆ‌. ಸಿದ್ದರಾಮಯ್ಯರಿಗೆ ಮಗ ಯತೀಂದ್ರ ರಾಜಕೀಯ ಭವಿಷ್ಯದ ಚಿಂತೆಯಾಗಿದ್ರೆ, ಮಹದೇವಪ್ಪರಿಗೆ ಪುತ್ರ ಸುನೀಲ್ ಬೋಸ್ ಬಗ್ಗೆ ದೊಡ್ಡ ಚಿಂತೆಯಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು, ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!

ಕಳೆದ ಚುನಾವಣೆಯಲ್ಲಿ ಟಿ.ನರಸೀಪುರ ಟಿಕೆಟ್ ಆಕಾಂಕ್ಷಿಯಾಗಿದ್ದ ಸುನೀಲ್ ಬೋಸ್ ಗೆ ಟಿಕೆಟ್ ಕೊಟ್ಟಿರಲಿಲ್ಲ, ಅದರ ಜೊತೆಗೆ ಈ ಹಿಂದೆ ನಂಜನಗೂಡು ಉಪಚುನಾವಣೆಯಲ್ಲಿಯೂ ಸುನೀಲ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಆ ಸಂಧರ್ಭದಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿಯೇ ಈ ಕಾರಣದಿಂದಲೇ ಮಗನಿಗೆ ಈ ಚುನಾವಣೆಯಲ್ಲಾದರೂ ಟಿಕೆಟ್ ಕೊಡಿಸಬೇಕು ಎಂದು ಪಟ್ಟು ಹಿಡಿದಿರುವ ಮಹಾದೇವಪ್ಪ ತಮಗೆ ಟಿಕೆಟ್ ಬೇಡ – ಮಗನಿಗೆ ಟಿಕೆಟ್ ಕೊಡಿ ಅಂತ ಹೇಳುತ್ತಿದ್ದಾರೆ.

ಒಂದು ಕಡೆ ಮಹದೇವಪ್ಪ ಮಗನಿಗೆ ಟಿಕೆಟ್ ಬೇಡಿಕೆ ಇಡುತ್ತಿದ್ರೆ, ಲೋಕಸಭ ವ್ಯಾಪ್ತಿಯ ಶಾಸಕರು ಮಾತ್ರ ಸುನಿಲ್ ಬೋಸ್ ಗೆ ಟಿಕೆಟ್ ಬೇಡ, ಬೇಕಾದ್ರೆ ಮಹದೇವಪ್ಪ ಓಕೆ ಅಂತಿದ್ದಾರೆ. ಇದ್ರಿಂದ ಒಂದು ರೀತಿಯಲ್ಲಿ ಮಹದೇವಪ್ಪರಿಗೆ ಧರ್ಮ ಸಂಕಟ ಶುರುವಾಗಿದೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಕಾಂಗ್ರೆಸ್ ಶಾಸಕರಿದ್ದರೂ, ಮಗನಿಗೆ ಬೇಡ ಅಂತಿರೋದು ಮಹದೇವಪ್ಪರಿಗೆ ನುಂಗಲಾರದ ತುತ್ತಾಗಿದೆ.

ಒಟ್ಟಾರೆ, ಮಗನ ರಾಜಕೀಯ ಭವಿಷ್ಯಕ್ಕೆ ಮಹದೇವಪ್ಪ ತಮಗೆ ಟಿಕೆಟ್ ಬೇಡ ಮಗನಿಗೆ ಟಿಕೆಟ್ ಕೊಡಿ ಅಂತಿದ್ದಾರೆ. ಆದ್ರೆ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Thu, 22 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ