ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ದಿಗ್ವಿಜಯ ಸಾಧ್ಯತೆ

80 ಲೋಕಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ, ಬಿಜೆಪಿ ಮೈತ್ರಿಕೂಟದ ಎನ್​ಡಿಎ 69 ರಿಂದ 74 ಸ್ಥಾನ ಗಳಿಸುವ ಸಾಧ್ಯತೆ ಇದೆ. ಇಂಡಿಯಾ ಪಡೆ 6ರಿಂದ 11 ಸ್ಥಾನ ಗೆಲ್ಲಲಿದೆ ಅಂತ ಮ್ಯಾಟ್ರೀಜ್​​ ಮತ್ತದಾನೋತ್ತರ ಸಮೀಕ್ಷೆ ಹೇಳಿದೆ.

ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ದಿಗ್ವಿಜಯ ಸಾಧ್ಯತೆ
ಬಿಜೆಪಿ
Follow us
Ganapathi Sharma
|

Updated on: Jun 01, 2024 | 9:51 PM

ನವದೆಹಲಿ, ಜೂನ್ 1: ಲೋಕಸಭಾ ಗದ್ದುಗೆ ಏರಬೇಕಾದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಅಧಿಕ ಸ್ಥಾನಗಳನ್ನು ಗಳಿಸಬೇಕು. ಬಿಜೆಪಿ ಪಾಲಿಗೆ ಮತಕಣಜ ಆಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿಗೆ (BJP) ಅಧಿಕ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂಬುದು ಮತಗಟ್ಟೆ ಸಮೀಕ್ಷೆಗಳಿಂದ (Exit Polls) ತಿಳಿದುಬಂದಿದೆ. 80 ಲೋಕಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ, ಬಿಜೆಪಿ ಮೈತ್ರಿಕೂಟದ ಎನ್​ಡಿಎ 69 ರಿಂದ 74 ಸ್ಥಾನ ಗಳಿಸುವ ಸಾಧ್ಯತೆ ಇದೆ. ಇಂಡಿಯಾ ಪಡೆ 6ರಿಂದ 11 ಸ್ಥಾನ ಗೆಲ್ಲಲಿದೆ ಅಂತ ಮ್ಯಾಟ್ರೀಜ್​​ ಮತ್ತದಾನೋತ್ತರ ಸಮೀಕ್ಷೆ ಹೇಳಿದೆ.

ಇನ್ನು, ಟಿವಿ9 ನಡೆಸಿರುವ ಸಮೀಕ್ಷೆಯಲ್ಲಿ ಎನ್​ಡಿಎ ಪಡೆ 65 ಸ್ಥಾನ ಗೆಲ್ಲಲಿದ್ದು, ಇಂಡಿಯಾ ಮೈತ್ರಿಕೂಟಕ್ಕೆ 15 ಸ್ಥಾನ ಬರುವ ಸಂಭವವಿದೆ. ಹಾಗೆ, ಇಂಡಿಯಾ ನ್ಯೂಸ್​ ಡೈನಮಿಕ್ಸ್​ನ ಸರ್ವೆಯಲ್ಲಿ ಎನ್​ಡಿಎಗೆ 69 ಇಂಡಿಯಾಗೆ 11 ಸ್ಥಾನ ಬರುವ ಸಾಧ್ಯತೆ ಇದೆ.

ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಎನ್​ಡಿಎ 69-74, ಇಂಡಿಯಾ ಮೈತ್ರಿಕೂಟ 6 -11 ಸ್ಥಾನ ಗೆಲ್ಲುವ ಸುಳಿವು ನೀಡಲಾಗಿದೆ. ಟಿವಿ9 ಸಮೀಕ್ಷೆ ಪ್ರಕಾರ ಎನ್​ಡಿಎ 65, ಇಂಡಿಯಾ 15 ಸ್ಥಾನ ಗೆಲ್ಲಲಿವೆ. ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷೆ ಪ್ರಕಾರ ಎನ್​ಡಿಎ 69 ಹಾಗೂ ಇಂಡಿಯಾ 11 ಸ್ಥಾನ ಗೆಲ್ಲಲಿವೆ.

ತಮಿಳುನಾಡಿನಲ್ಲಿ INDIA, ಗುಜರಾತ್​​​ನಲ್ಲಿ ಬಿಜೆಪಿ ಕೇಕೆ ಸಂಭವ

ಪ್ರಧಾನಿ ಮೋದಿಯ ತವರಾದ ಗುಜರಾತ್​ನಲ್ಲಿ ಗುಜರಾತ್​​ನಲ್ಲಿ ಎಲ್ಲ 26 ಸ್ಥಾನ ಬಿಜೆಪಿ ಪಾಲಾಗಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೆ ಸಹ ಬಿಜೆಪಿಗೆ 25-26 ಸ್ಥಾನ ಹಾಗೂ ಇತರರಿಗೆ 1 ಸ್ಥಾನದ ಭವಿಷ್ಯ ನುಡಿದಿದೆ. ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಸಹ ಬಿಜೆಪಿಗೆ 26 ಸ್ಥಾನ ದೊರೆಯಲಿದೆ ಎಂದಿದೆ.

ತಮಿಳುನಾಡಿನಲ್ಲಿ ಈ ಬಾರಿ ಎನ್​​ಡಿಎ 2ರಿಂದ 4 ಕ್ಷೇತ್ರ ಗೆಲ್ಲಲಿದೆ ಅಂತ ಇಂಡಿಯಾ ಟುಡೇ ಸಮೀಕ್ಷಾ ವರದಿ ಹೇಳಿದ್ದು, ಇಂಡಿಯಾ ಕೂಟಕ್ಕೆ 33ರಿಂದ 37 ಸ್ಥಾನ ಬರಲಿದೆ ಅಂತ ಹೇಳಿದೆ. ಇನ್ನು, ನ್ಯೂಸ್​ 18ರ ಸರ್ವೇ ಪ್ರಕಾರ ಎನ್​ಡಿಎ 1ರಿಂದ 3 ಸ್ಥಾನ ಗೆದ್ರೆ, ಇಂಡಿಯಾ ಕೂಟ 36ರಿಂದ 39 ಸ್ಥಾನ ಗೆಲ್ಲಲಿದೆ.

ಇದನ್ನೂ ಓದಿ: ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ

ಮತದಾನೋತ್ತರ ಸಮೀಕ್ಷೆಗಳು ಏನೇ ಇದ್ದರೂ, ಇನ್ನೆರಡು ದಿನದಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ. ಗದ್ದುಗೆ ಎನ್​ಡಿಎಗೋ, ಇಂಡಿಯಾ ಮೈತ್ರಿಕೂಟಕ್ಕೋ ಅನ್ನೋದು ಅಧಿಕೃತವಾಗಿ ಗೊತ್ತಾಗಲಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್