Karnataka Exit Poll Results: ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ

|

Updated on: Jun 01, 2024 | 8:47 PM

Karnataka Poll of Polls 2024: ಟಿವಿ9 ಪೋಲ್​ಸ್ಟ್ರಾಟ್, ಟುಡೇಸ್ ಚಾಣ್ಯ ಸೇರಿದಂತೆ ಬಹುತೇಕ ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚಿನ ಸ್ಥಾನ ದೊರೆಯಲಿವೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಂತೂ ಕರ್ನಾಟಕದಲ್ಲಿ ಎನ್​ಡಿಎಗೆ 23-25 ​​ಸ್ಥಾನಗಳ ಭವಿಷ್ಯ ನುಡಿದಿದೆ. ಯಾವೆಲ್ಲ ಸಂಸ್ಥೆಗಳು ಯಾವ ಸಂಖ್ಯೆ ನೀಡಿವೆ ಎಂಬ ವಿವರ ಇಲ್ಲಿದೆ.

Karnataka Exit Poll Results: ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ
ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ
Follow us on

ಬೆಂಗಳೂರು, ಜೂನ್ 1: ಲೋಕಸಭೆ ಚುನಾವಣೆಯ (Lok Sabha Elections) 7 ಹಂತಗಳ ಮತದಾನ ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷಗಳು ಪ್ರಕಟವಾಗಿವೆ. ಬಹುತೇಕ ಎಲ್ಲ ಸಮೀಕ್ಷೆಗಳೂ ಕರ್ನಾಟಕದಲ್ಲಿ (Karnataka) ಬಿಜೆಪಿ (BJP) ಹಾಗೂ ಎನ್​​ಡಿಎಗೆ ಹೆಚ್ಚಿನ ಸ್ಥಾನಗಳ ಭವಿಷ್ಯ ನುಡಿದಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್​​ಪೋಲ್ ಸಮೀಕ್ಷೆಗಳು ತಿಳಿಸಿವೆ. ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳು ಇವೆ.

  1. ಟಿವಿ9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ ಸಮೀಕ್ಷೆ ಎನ್‌ಡಿಎಗೆ 20 ಮತ್ತು ಕಾಂಗ್ರೆಸ್‌ಗೆ 8 ಸ್ಥಾನಗಳ ಭವಿಷ್ಯ ನುಡಿದಿದೆ.
  2. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಎನ್‌ಡಿಎಗೆ 23-25 ​​ಸ್ಥಾನಗಳನ್ನು ಮತ್ತು ಕಾಂಗ್ರೆಸ್ 3-5 ಸ್ಥಾನಗಳನ್ನು ನೀಡಿದೆ.
  3. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಎನ್‌ಡಿಎಗೆ 19-25 ಮತ್ತು ಕಾಂಗ್ರೆಸ್ 4-8 ಸ್ಥಾನಗಳನ್ನು ನೀಡಿದೆ.
  4. ಎನ್‌ಡಿಎ 21-23 ಮತ್ತು ಕಾಂಗ್ರೆಸ್ 7-5 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜನ್ ಕೀ ಬಾತ್ ಭವಿಷ್ಯ ನುಡಿದಿದೆ.
  5. ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆ ಎನ್‌ಡಿಎಗೆ 22 ಮತ್ತು ಕಾಂಗ್ರೆಸ್‌ಗೆ 6 ಸ್ಥಾನಗಳ ಭವಿಷ್ಯ ನುಡಿದಿದೆ.
  6. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಎನ್‌ಡಿಎಗೆ 23-25 ​​ಮತ್ತು ಕಾಂಗ್ರೆಸ್‌ಗೆ 3-5 ಎಂದು ಭವಿಷ್ಯ ನುಡಿದಿದೆ.
  7. ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಸಮೀಕ್ಷೆ ಎನ್‌ಡಿಎಗೆ 23 ಮತ್ತು ಕಾಂಗ್ರೆಸ್‌ಗೆ 5 ಸ್ಥಾನಗಳ ಭವಿಷ್ಯ ನುಡಿದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ

ಇನ್ನು ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಪಡೆಯಲಿದ್ದು, ಎನ್​ಡಿಎ 20 ಸ್ಥಾನಗಳನ್ನು ಪಡೆಯಲಿದೆ. ಅತ್ತ ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಕಳೆದ ಬಾರಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಜೆಡಿಎಸ್ 2 ಸ್ಥಾನ ಗಳಿಸಲಿದೆ. ಪಕ್ಷೇತರರು ರಾಜ್ಯದಲ್ಲಿ ಒಂದು ಸ್ಥಾನ ಕೂಡ ಗಳಿಸಿಲ್ಲ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Sat, 1 June 24