ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತದಾನ ಮಾಡುವವರಿಗೆ ಕೆಲವು ಸಲಹೆಗಳು

Lok Sabha Election 2024: ಕರ್ನಾಟಕ ಲೋಕಸಭಾ ಚುನಾವಣೆ ಏಪ್ರಿಲ್​ 26ರಂದು ನಡೆಯಲಿದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ಇರುವ ಆತಂಕವನ್ನು ದೂರ ಮಾಡಲು ಸಣ್ಣ ಪ್ರಯತ್ನ. ಅಂಜಿಕೆ ಇಲ್ಲದೆ ನೀವು ಮತದಾನ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತದಾನ ಮಾಡುವವರಿಗೆ ಕೆಲವು ಸಲಹೆಗಳು
ಮತದಾರರು
Follow us
ನಯನಾ ರಾಜೀವ್
|

Updated on: Apr 25, 2024 | 10:00 AM

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಪ್ರಿಲ್​ 26ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಮೊದಲ ಬಾರಿಗೆ ಮತದಾನ ಮಾಡುವವರು ತಮ್ಮ ಮತಗಟ್ಟೆ ಯಾವುದು ಎಂದು ತಿಳಿಯವುದು ಹೇಗೆ ಹಾಗೂ ಎಪಿಕ್ ನಂಬರ್​ ಮೂಲಕ ವೋಟರ್​ ಐಡಿ ಹುಡುಕುವುದು ಹೇಗೆ ಎಂಬುದರ ಕುರಿತು ನಾವು ಮಾಹಿತಿ ನೀಡಲಿದ್ದೇವೆ. ಮೊದಲನೆಯದಾಗಿ ತಿಳಿದುಕೊಳ್ಳಬೇಕಾದ ವಿಷೆಯವೇನೆಂದರೆ ಮತದಾರರಾಗಲು ಏನು ಅರ್ಹತೆ ಇರಬೇಕು. -ಭಾರತೀಯ ಪ್ರಜೆಯಾಗಿರಬೇಕು -ಜನವರಿ 1ಕ್ಕೆ 18 ವರ್ಷಗಳನ್ನು ಪೂರೈಸಿರಬೇಕು -ಮತಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು -ಅನೂರ್ಜಿತಗೊಂಡಿರಬಾರದು

ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯಾರಿಗೆ ಅರ್ಹತೆ ಇಲ್ಲ -ಭಾರತೀಯ ಪ್ರಜೆಯಲ್ಲದವರು -ಮಾನಸಿಕ ಸ್ಥಿಮಿತ ಇಲ್ಲದವರು -ಚುನಾವಣೆ ಸಂಬಂಧಿತ ನಿಗಧಿತ ಭ್ರಷ್ಟಾಚಾರದಲ್ಲಿ ತೊಡಗಿ ಮತದಾನ ಪ್ರಕ್ರಿಯೆಯಿಂದ ನಿಷೇಧಕ್ಕೆ ಒಳಗಾದವರು.

ಮುಂದೆ ಬರುವಂಥದ್ದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮತಕ್ಷೇತ್ರದ ನೋಂದಣಿ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯಿಂದ ನಮೂನೆ 6ನ್ನು ಪಡೆಯಿರಿ. ನಮೂನೆ ಭರ್ತಿ ಮಾಡಿ ಇಂಟರ್ನೆಟ್​ನಿಂದ ನಮೂನೆ 6ನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳು ಅಥವಾ www.nsvp.in /www.ceokarnataka.nic.inನಲ್ಲಿ ದಾಖಲೆಗಳ ಪ್ರತಿಯನ್ನು ಅಪ್​ಲೋಡ್​ ಮಾಡಿ. ಅಥವಾ ಅಂಚೆ ಮೂಲಕ ಕಳುಹಿಸಿ. ನಮೂನೆ 6ಕ್ಕೆ ಅಗತ್ಯವಿರುವ ದಾಖಲೆಗಳು ಪಾಸ್​ಪೋರ್ಟ್​ ಸೈಜ್ ಕಲರ್​ ಫೋಟೊ ವಯಸ್ಸು ಮತ್ತು ವಿಳಾಸದ ದೃಢೀಕರಣ 18-21 ವಯೋಮಾನದವರಿಗೆ ವಯಸ್ಸು ದೃಢೀಕರಣ ಪ್ರತಿ

ಮತ್ತಷ್ಟು ಓದಿ: Lok Sabha Elections 2024: ಮತದಾನ ಕೇಂದ್ರ ತಿಳಿಯಲು ಮೊಬೈಲ್​ ಆ್ಯಪ್​ ಸಿದ್ಧಪಡಿಸಿದ ಬಿಬಿಎಂಪಿ

ಎಪಿಕ್ ಮತದಾರರ ಫೋಟೊ ಗುರುತಿನ ಚೀಟಿ ಮತದಾರ ನೀಡಿರುವ ವಿಳಾಸಕ್ಕೆ ಮತಗಟ್ಟೆ ಅಧಿಕಾರಿ ಭೇಟಿ ನೀಡುತ್ತಾರೆ ನಮೂನೆ ಸರಿಯಾಗಿದ್ದು, ಸ್ವೀಕೃತವಾದಲ್ಲಿ ಮತಗಟ್ಟೆ ಅಧಿಕಾರಿ ಎಪಿಕ್ ಕಾರ್ಡನ್ನು ನೀಡುತ್ತಾರೆ ಅಥವಾ ಕಚೇರಿಗೆ ಬರುವಂತೆ ಸೂಚಿಸುತ್ತಾರೆ.

ಮತದಾನ ಮಾಡುವುದು ಹೇಗೆ? ಮುಖ್ಯ ಚುನಾವಣಾಧಿಕಾರಿಗಳ ವೆಬ್​ಸೈಟ್​ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಬೇಕು. ಮತದಾನದ ದಿನ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ ಚುನಾವಣಾಧಿಕಾರಿಗಳ ಬಳಿಯೂ ಮತದಾರರ ಪಟ್ಟಿ ಲಭ್ಯವಿರುತ್ತದೆ. ಮೊಬೈಲ್​ ಫೋನ್ ಮತ್ತಿತರೆ ವಸ್ತುಗಳಿಗೆ ಮತಗಟ್ಟೆ ಕೇಂದ್ರಕ್ಕೆ ನಿರ್ಬಂಧವಿಧಿಸಿದೆ. ಸರತಿ ಸಾಲಿನಲ್ಲಿ ನಿಂತು ಶಾಯಿ ಹಾಕಿಸಿಕೊಂಡು ಮತ ಚಲಾಯಿಸಬೇಕು.

ಮತದಾರರು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಮತದಾನ ದಿನಕ್ಕೆ ಮುನ್ನವೇ ನಿಮ್ಮ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ವೆಬ್​​ಸೈಟ್​ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಿ. ಮತದಾರರ ಫೋಟೊ ಗುರುತಿನ ಚೀಟಿಯೊಂದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಕಡ್ಡಾಯ. ಚುನಾವಣೆ ಸಂದರ್ಭದಲ್ಲಿ ನೋಂದಣಿ ಹಾಗೂ ಮತದಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಹಾಯವಾಣಿ 1950ಕ್ಕೆ ಕರೆ ಮಾಡಿ ಪಡೆಯಬಹುದು. EPIC ಕಾರ್ಡ್ ಸುರಕ್ಷಿತ ಮತ್ತು ಪೋರ್ಟಬಲ್ ಡಿಜಿಟಲ್ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ವೋಟರ್ ಸ್ಲಿಪ್ ಮತ್ತು EPIC ಕಾರ್ಡ್ ಜೊತೆಗೆ, ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಹೆಚ್ಚುವರಿ ಗುರುತಿನ ಚೀಟಿಯನ್ನು ಒಯ್ಯಿರಿ.

ಒಂದಕ್ಕಿಂತ ಹೆಚ್ಚಿನ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶವಿಲ್ಲ, ಹಾಗಾಗಿ ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಮುನ್ನ ಹಳೆಯ ಮತಕ್ಷೇತ್ರದ ಪಟ್ಟಿಯಲ್ಲಿ ಹೆಸರನ್ನು ತೆಗೆಸಬೇಕು. ನಿಮ್ಮ ಕ್ಷೇತ್ರದ ಹೆಸರು ಹಾಗೂ ಮಾಹಿತಿಯನ್ನು www.ceokarnataka.kar.nic.in, www.eci.nic.in, www.ecisvee.nic.in ಅಥವಾ www.nsvp.in ನಿಂದ ಪಡೆಯಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ