ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು: ಹಿನ್ನಡೆಗೆ ಕಾರಣಗಳು ಇಲ್ಲಿವೆ ನೋಡಿ

ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಗೆದ್ದ ಕ್ಷೇತ್ರಗಳನ್ನೂ ಬಿಜೆಪಿ ಕಳೆದುಕೊಂಡಿದೆ. ಅದಕ್ಕೆ ಕಾರಣ ಪಂಚರಾಜ್ಯಗಳು. ಬಿಜೆಪಿಗೆ ಹಿನ್ನಡೆ ಆಗಿದ್ದು ಎಲ್ಲಿ? ಯಾವ್ಯಾವ ಕಾರಣಗಳಿಂದ ಬಿಜೆಪಿಗೆ ಹಿನ್ನೆಡೆ ಆಯ್ತು ಎಂಬ ವಿವರ ಇಲ್ಲಿದೆ.

ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು: ಹಿನ್ನಡೆಗೆ ಕಾರಣಗಳು ಇಲ್ಲಿವೆ ನೋಡಿ
ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on: Jun 05, 2024 | 7:04 AM

ಬೆಂಗಳೂರು, ಜೂನ್ 5: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಪ್ರಧಾನಿ ನರೇಂದ್ರ ಮೋದಿಯ (Narendra Modi) ಹವಾ, ಮಾತಿನ ಪ್ರಭಾವವೂ ಹೆಚ್ಚು ವರ್ಕ್​ಔಟ್ ಆದಂತಿಲ್ಲ. ಹೋದಲ್ಲಿ ಬಂದಲ್ಲಿ ಮೋದಿ ‘ಚಾರ್​ ಸೋ ಪಾರ್’ ಎನ್ನುತ್ತಿದ್ದರೂ ಎನ್​​​ಡಿಎ (NDA) ಮೈತ್ರಿಕೂಟ ಈಗ 300ರ ಗಡಿಯಲ್ಲೇ ನಿಲ್ಲುವಂತಾಗಿದೆ. ಇನ್ನು ತನ್ನ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರಿಟ್ಟ ಕಾಂಗ್ರೆಸ್, ಇಡೀ ಇಂಡಿಯಾವನ್ನೇ ಗೆಲ್ಲುವ ಉತ್ಸಾಹದಲ್ಲಿ ಬಿಜೆಪಿಯ ಬೃಹತ್ ಹಿನ್ನಡೆಗೆ ಕಾರಣವಾಗಿದೆ.

ಈ ಹಿಂದೆ ಗೆದ್ದ ಕ್ಷೇತ್ರಗಳನ್ನೂ ಬಿಜೆಪಿ ಕಳೆದುಕೊಂಡಿದೆ. 2019ರ ಚುನಾವಣೆಯಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಮುನ್ನೂರರ ಗಡಿಯಲ್ಲೇ ಗಿರ್ಕಿ ಹೊಡೆದಿದೆ. ಬಿಜೆಪಿ ಭವಿಷ್ಯ ನಿರ್ಧರಿಸಲಿದ್ದ 5 ರಾಜ್ಯಗಳಲ್ಲಿ ಹಿನ್ನಡೆಯಾಗಿದೆ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ ರಾಜ್ಯದಲ್ಲಿ 9 ಸ್ಥಾನಗಳನ್ನು ಕಳೆದುಕೊಂಡಿದ್ದೇ ಬಿಜೆಪಿ ಹಿನ್ನಡೆಗೆ ಮುಖ್ಯ ಕಾರಣ.

‘ಉತ್ತರ’ದ ಫಲಿತಾಂಶದಿಂದ ಬಿಜೆಪಿ ಆಘಾತ

ಉತ್ತರ ಪ್ರದೇಶದಲ್ಲಿ ಮತದಾರರು ಕೊಟ್ಟ ಫಲಿತಾಂಶವೇ ಬಿಜೆಪಿ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಎಸ್​​ಪಿ ಮತ ಎಸ್​​ಪಿ & ಕಾಂಗ್ರೆಸ್​ಗೆ ಶಿಫ್ಟ್ ಆಗಿದ್ದು, ಸಂವಿಧಾನ ಬದಲಾವಣೆ ಹೇಳಿಕೆಯೇ ಬಿಜೆಪಿ ಹಿನ್ನೆಡೆಗೆ ಕಾರಣವಾದರೆ, ಅಲ್ಪಸಂಖ್ಯಾತ ಮತಗಳು ಇಂಡಿಯಾ ಒಕ್ಕೂಟದ ತೆಕ್ಕೆಗೆ ಹೋಗಿವೆ. ಬಿಎಸ್​​​ಪಿಗೆ ಹೋಗುತ್ತಿದ್ದ ಮುಸ್ಲಿಂ ಮತಗಳು ಕಾಂಗ್ರೆಸ್​, ಎಸ್​​ಪಿಯತ್ತ ವಾಲಿವೆ. ಇನ್ನು ಉತ್ತರ ಪ್ರದೇಶದಲ್ಲಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಿರುದ್ಯೋಗದಿಂದ ಯುವಕರು ಹೈರಾಣಾಗಿದ್ದರು. ಆದರೆ, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಗೊಂದಲ ಸೃಷ್ಟಿಸಿತ್ತು. ಠಾಕೂರ್ ಮತ್ತು ಬಾಹ್ಮಣರ ಮಧ್ಯೆ ಇದ್ದ ಕೋಲ್ಡ್​ವಾರ್​​​ನಿಂದಾಗಿ ಬ್ರಾಹ್ಮಣ ಮತಗಳು ಎಸ್​ಪಿಗೆ ಶಿಫ್ಟ್​ ಆಗಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈ ಬಾರಿ ಅಖಿಲೇಶ್, ರಾಹುಲ್ ಜೋಡಿ ಪ್ರಚಾರ ವರ್ಕೌಟ್ ಆಗಿದೆ.

ಶಿವಸೇನೆ, ಎನ್​ಸಿಪಿ ಇಬ್ಭಾಗದ ಅಪಕೀರ್ತಿ; ಬಿಜೆಪಿಗೆ ‘ಮಹಾ’ ಮುಳ್ಳು

ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್, ಈ ಬಾರಿ 11 ಸ್ಥಾನ ಗೆಲ್ಲುವ ಮೂಲಕ ಹೊಸ ಅಲೆ ಸೃಷ್ಟಿಸಿದೆ. ಶಿವಸೇನೆ ಮತ್ತು ಎನ್​ಸಿಪಿ ಇಬ್ಭಾಗ ಮಾಡಿದ ಅಪಕೀರ್ತಿಯೇ ಬಿಜೆಪಿಗೆ ಮುಳ್ಳಾಗಿದೆ. ಜನರ ಅನುಕಂಪ ಗಿಟ್ಟಿಸಿದ್ದ ಉದ್ಧವ್​ ಠಾಕ್ರೆ & ಶರದ್ ಪವಾರ್, ಶಿವಸೇನೆ, ಎನ್​ಸಿಪಿ ನಾಯಕರ ಮೇಲೆ ಕೇಂದ್ರೀಯ ಸಂಸ್ಥೆಗಳ ಬಳಕೆ ಮಾಡಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ದೀದಿ ಪ್ರಚಾರದ ಮುಂದೆ ಮೋದಿಯ ಮ್ಯಾರಥಾನ್ ಪ್ರಚಾರಗಳೂ ವರ್ಕೌಟ್ ಆಗಿಲ್ಲ.

ಇದನ್ನೂ ಓದಿ: ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು

ಈ ಬಾರಿಯೂ ಮೋದಿ ಹವಾ, ಮಾತಿನ ಪ್ರಭಾವವೇ ಚಮತ್ಕಾರ ಮಾಡುತ್ತೆ ಅಂದಿಕೊಂಡಿದ್ದ ಬಿಜೆಪಿಗೆ ಈ ಬಾರಿಯ ಫಲಿತಾಂಶ ದೊಡ್ಡ ಹೊಡೆತ ಕೊಟ್ಟಿದ್ದಂತೂ ಸುಳ್ಳಲ್ಲ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ