ವಿಶ್ವೇಶ್ವರ ಹೆಗಡೆ ಕಾಗೇರಿ ಸಾಲ ಇಲ್ಲ, ಬದಲಿಗೆ ದೀನದಯಾಳ ಟ್ರಸ್ಟ್ಗೆ ಸಾಲ ಕೊಟ್ಟಿದ್ದಾರೆ
ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಹಾಗಾದ್ರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಸ್ತಿ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ.
ಕಾರವಾರ, (ಏಪ್ರಿಲ್ 12): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ(Uttara kannada BJP candidate) ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar hegde kageri) ಅವರು ಇಂದು (ಏಪ್ರಿಲ್ 12) ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲರೊಂದಿಗೆ ಮೆರವಣಿಗೆ ಮೂಲಕ ತೆರಳಿ ಕಾರವಾರದಲ್ಲಿ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇನ್ನು ತಮ್ಮ ಹೆಸರಿನಲ್ಲಿ ಒಟ್ಟು 16.76 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಅಫಿಡೆವಿಟ್ನಲ್ಲಿ ಘೋಷಿಸಿದ್ದಾರೆ. ವಿಶೇಷ ಅಂದ್ರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಾವುದೇ ಸಾಲ ಮಾಡಿಕೊಂಡಿಲ್ಲ. ಬದಲಿಗೆ ಸಂಘ ಪರಿವಾರದ ದೀನದಯಾಳ ಟ್ರಸ್ಟ್ಗೆ 24.50 ಲಕ್ಷ ರೂ. ಕೈ ಸಾಲ ಕೊಟ್ಟಿದ್ದಾರೆ.
ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಒಟ್ಟು 16.76 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ವಾರ್ಷಿಕ ಆದಾಯ ವೈಯಕ್ತಿಕ- 36,31,300 ರೂಪಾಯಿ, ಅವಿಭಕ್ತ ಕುಟುಂಬದ ಆದಾಯ 45,18,753 ರೂ, ಮೊದಲ ಪುತ್ರಿ ಜಯಲಕ್ಷ್ಮೀ ಆದಾಯ 5,51,540 ರೂ, ಕೈಯಲ್ಲಿ 5 ಲಕ್ಷ ರೂ, ಹಣ, ಅವಿಭಕ್ತ ಕುಟುಂಬದ ಬಳಿ 1 ಲಕ್ಷ ರೂ, ವಿವಿಧ ಬ್ಯಾಂಕುಗಳಲ್ಲಿರುವ ಒಟ್ಟು ಎಫ್‌ಡಿ- 1,11,48,727 ರೂ,. ಪತ್ನಿ ಭಾರತಿ ಬಳಿ 4,72,053 ರೂ, ಅವಿಭಕ್ತ ಕುಟುಂಬಕ್ಕೆ ಸೇರಿದ್ದು 1,08,69,516 ರೂ, ಎರಡನೇ ಪುತ್ರಿ ರಾಜಲಕ್ಷ್ಮೀ- 8,53,776 ರೂ. ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶ್ರೀರಾಮುಲು ಬಳಿ ಕೋಟ್ಯಾಂತರ ರೂ. ಆಸ್ತಿ, ಸಾಲ ಇಲ್ಲ: ಕಾರು ಜತೆ ಬಸ್ಸು ಸಹ ಇದೆ
ಪತ್ನಿ ಭಾರತಿ ಹೆಗಡೆ ಅವರಿಗಿಂತ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಹೆಚ್ಚಿನ ಚಿನ್ನ, ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 1.100 ಕೆ.ಜಿ. ಚಿನ್ನ ಇದ್ದರೆ, ಕಾಗೇರಿ ಬಳಿ 1.250 ಕೆ.ಜಿ. ಚಿನ್ನ, 3.500 ಕೆ.ಜಿ. ಬೆಳ್ಳಿ ಇದೆ. ಇನ್ನು ಕಾಗೇರಿ ಅವರು ತಮ್ಮ ಪತ್ನಿ, ಮಕ್ಕಳ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲ ಎಂದು ಉಲ್ಲೇಖಿಸಿದ್ದಾರೆ.
ಉಳಿತಾಯ ಖಾತೆಯಲ್ಲಿ 3,04,81,874 ರೂ., ಪತ್ನಿ ಖಾತೆಯಲ್ಲಿ 8,07,552ರೂ, ಅವಿಭಕ್ತ ಕುಟುಂಬದ್ದು 2,15,34,528 ರೂ, ಅವಿಭಕ್ತ ಕುಟುಂಬದ ಚಾಲ್ತಿ ಖಾತೆಯಲ್ಲಿ 23,50,458 ರೂ ಇರುವುದಾಗಿ ತಿಳಿಸಿದ್ದಾರೆ. ವಿವಿಧ ಬಾಂಡ್‌ಗಳಲ್ಲಿನ ಹೂಡಿಕೆ 5 ಲಕ್ಷ ರೂ, ಪೋಸ್ಟ್ ಹೂಡಿಕೆ- 27,400 ರೂಪಾಯಿ, ಇನ್ಶುರೆನ್ಸ್ ಪಾಲಿಸಿ 21,25,219, ಇನ್ನು ಶಿರಸಿ ದೀನದಯಾಳ್ ಟ್ರಸ್ಟ್ಗೆ 24,50,000 ರೂ. ಸಾಲ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 am, Sat, 13 April 24