ಜಾತಿಯಾಧಾರಿತ ಮತಬೇಟೆಗೆ ಬಿಜೆಪಿಯಿಂದ ಹೊಸ ತಂತ್ರ; ತಮಿಳುನಾಡು ತಿರುಪತ್ತೂರಿನಲ್ಲಿ ಕುರುಬ ಸಮಾವೇಶ

Tamil Nadu Assembly Election: ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುರುಬ ಸಮಾವೇಶ ನಡೆಯಲಿದೆ. ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್.ವಿಶ್ವನಾಥ್‌ಗೆ ಸಮಾವೇಶದ ನೇತೃತ್ವ ವಹಿಸಲಾಗಿದೆ.

ಜಾತಿಯಾಧಾರಿತ ಮತಬೇಟೆಗೆ ಬಿಜೆಪಿಯಿಂದ ಹೊಸ ತಂತ್ರ; ತಮಿಳುನಾಡು ತಿರುಪತ್ತೂರಿನಲ್ಲಿ ಕುರುಬ ಸಮಾವೇಶ
ಈಶ್ವರಪ್ಪ ಹಾಗೂ ಎಚ್. ವಿಶ್ವನಾಥ್
Follow us
TV9 Web
| Updated By: ganapathi bhat

Updated on:Apr 06, 2022 | 7:32 PM

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Assembly Election 2021) ಹಿನ್ನೆಲೆಯಲ್ಲಿ ಕುರುಬ ಮತ ಸೆಳೆಯಲು ಜಾತಿಯಾಧಾರಿತ ಮತ ಬೇಟೆಗೆ ಬಿಜೆಪಿ ಹೊಸ ಉಪಾಯ ಮಾಡಿದೆ. ಜಾತಿಯಾಧಾರಿತ ಮತ ಬೇಟೆಗೆ ಬಿಜೆಪಿಯಿಂದ ಹೊಸ ತಂತ್ರ ಹೆಣೆಯಲಾಗಿದೆ. ಕುರುಬ ಮತದಾರರನ್ನು ಸೆಳೆಯುವುದಕ್ಕೆ ಸಮಾವೇಶ ನಡೆಸಲು ಬಿಜೆಪಿ ಯೋಚಿಸಿದೆ. ಮಾರ್ಚ್15ರಂದು ತಿರುಪತ್ತೂರಿನಲ್ಲಿ ಕುರುಬ ಸಮಾವೇಶ ನಡೆಸುವ ಬಗ್ಗೆ ಬಿಜೆಪಿ ಮಾಹಿತಿ ನೀಡಿದೆ.

ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುರುಬ ಸಮಾವೇಶ ನಡೆಯಲಿದೆ. ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್.ವಿಶ್ವನಾಥ್‌ಗೆ ಸಮಾವೇಶದ ನೇತೃತ್ವ ವಹಿಸಲಾಗಿದೆ. ತಮಿಳುನಾಡಿನ 66 ಕ್ಷೇತ್ರಗಳಲ್ಲಿ ಕುರುಬರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಆದ್ದರಿಂದ ಬಿಜೆಪಿ ಈ ತಂತ್ರ ಹೆಣೆದಿದೆ. ಕುರುಬ ಸಮುದಾಯದ ಸಂಘಟನೆಗೆ ವಿಶ್ವನಾಥ್‌ಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಎಂಎಲ್‌ಸಿ ಹೆಚ್.ವಿಶ್ವನಾಥ್‌ಗೆ ಸಿ.ಟಿ.ರವಿ ಸೂಚನೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ತಮಿಳುನಾಡು ಬಿಜೆಪಿಯ ಉಸ್ತುವಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತಿಯಾಧಾರಿತ ಮತ‌ ಬೇಟೆಗೆ ಬಿಜೆಪಿ ಇಳಿದಿದೆ. ಕುರುಬ ಮತ ಸೆಳೆಯಲು ಕರ್ನಾಟಕದ ಬಿಜೆಪಿ ನಾಯಕರ ಮೂಲಕ ಮತಯಾಚನೆಗೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಚೆನ್ನೈ ನಗರ, ಕೃಷ್ಣಗಿರಿ, ಮಧುರೈ ಸೇರಿದಂತೆ 66 ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತ ಬೇಟೆ ಮಾಡಲು ಬಿಜೆಪಿ ಪಕ್ಷ ಯೋಜನೆ ಹಾಕಿಕೊಂಡಿದೆ. ಕುರುಂಬರ್, ಕುರುಮಾ ಹೆಸರಿನಲ್ಲಿ ಕುರುಬ ಸಮುದಾಯದ ಮತದಾರರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ.

ಚುನಾವಣಾ ದಿನಾಂಕ ಪ್ರಕಟವಾಗಿದೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ 2ರಂದು ನಡೆಯಲಿದೆ. ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ.

ಅಸ್ಸಾಂನಲ್ಲಿ 27 ಮಾರ್ಚ್, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ. ಕೇರಳದಲ್ಲಿ 14 ಜಿಲ್ಲೆ, 148 ಕ್ಷೇತ್ರಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕೂಡ ಒಂದೇ ಬಾರಿ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​

ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ: ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ

Published On - 1:14 pm, Tue, 2 March 21