Assembly Election Voter Slip: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು, ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡುವುದು ಹೇಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2022 | 6:30 AM

ಫೋಟೊ ವೋಟರ್ ಸ್ಲಿಪ್​ಗಳು ಒಂದು ವೇಳೆ ನಿಮಗೆ ಸಕಾಲಕ್ಕೆ ತಲುಪದಿದ್ದರೆ ನೀವೇ ಅದನ್ನು ಚುನಾವಣಾ ಆಯೋಗದ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು

Assembly Election Voter Slip: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು, ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡುವುದು ಹೇಗೆ
ಮತದಾರರ ಫೋಟೊ ಗುರುತಿನ ಚೀಟಿ
Follow us on

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಎಂದು ಪರಿಶೀಲಿಸುವುದು ತುಂಬಾ ಸುಲಭ. ಫೋಟೊ ವೋಟರ್ ಸ್ಲಿಪ್​ಗಳು ಒಂದು ವೇಳೆ ನಿಮಗೆ ಸಕಾಲಕ್ಕೆ ತಲುಪದಿದ್ದರೆ ನೀವೇ ಅದನ್ನು ಚುನಾವಣಾ ಆಯೋಗದ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಮತಗಟ್ಟೆ ಕೇಂದ್ರ, ಮತದಾನದ ದಿನಾಂಕ ಮತ್ತು ಕ್ಷೇತ್ರದ ವಿವರಗಳು ಫೋಟೊ ವೋಟರ್​ ಸ್ಲಿಪ್​ನಲ್ಲಿ ಸಿಗುತ್ತವೆ. ಉತ್ತರ ಪ್ರದೇಶದಲ್ಲಿ (Uttar Pradesh) ಮೊದಲ ಹಂತದ ಮತದಾನ ಫೆ 10ರಂದು ನಡೆಯಲಿದೆ.

ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡಿಕೊಳ್ಳುವ ಹಂತಹಂತದ ವಿವರ ಹೀಗಿದೆ.
1) ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್​ಗೆ (National Voters’ Service Portal – NVSP) ಭೇಟಿ ನೀಡಿ. ಪೋರ್ಟಲ್​ನ ವೆಬ್​ಸೈಟ್ https://www.nvsp.in/
2) ಇದರಲ್ಲಿ ಎಲೆಕ್ಟ್ರಾಲ್ ರೋಲ್​ ಟ್ಯಾಬ್ ಕ್ಲಿಕ್ ಮಾಡಿ
3) ಹೊಸದೊಂದು ವೆಬ್​ಪೇಜ್ ಓಪನ್ ಆಗುತ್ತದೆ. ಅದರಲ್ಲಿ ವೋಟರ್ ಲಿಸ್ಟ್​ ಮೇಲೆ ಕ್ಲಿಕ್ ಮಾಡಿ
4) ನಿಮಗೆ ಮೊದಲ ಆಯ್ಕೆಯಲ್ಲಿ ವಿವರಗಳನ್ನು ನಮೂದಿಸಿ ಸ್ಲಿಪ್ ಹುಡುಕಲು ಅವಕಾಶ ಸಿಗುತ್ತದೆ. ನೀವು ನಿಮ್ಮ ಹೆಸರು, ನಿಮ್ಮ ತಂದೆ / ಗಂಡನ ಹೆಸರು, ವಯಸ್ಸು, ಜನ್ಮದಿನಾಂಕ ಮತ್ತು ಲಿಂಗದ ಆಧಾರದ ಮೇಲೆ ಹುಡುಕಬಹುದು.
5) ಮತ್ತೊಂದು ಆಯ್ಕೆಯಲ್ಲಿ ಎಪಿಕ್ ನಂಬರ್ ಅಂದರೆ ಚುನಾವಣಾ ಗುರುತಿನ ಚೀಟಿ ಸಂಖ್ಯೆಯ ಆಧಾರದ ಮೇಲೆ ನೀವು ವೋಟರ್ ಸ್ಲಿಪ್ ಹುಡುಕಬಹುದು.
6) ವೋಟರ್ ಐಡಿ ನಂಬರ್ (ಎಪಿಕ್ ನಂಬರ್) ಎಲ್ಲಿದೆ ಅಂತ ಗೊಂದಲಕ್ಕೆ ಒಳಗಾಗಬೇಡಿ. ಅದು ನಿಮ್ಮ ಚುನಾವಣಾ ಮತದಾರರ ಗುರುತಿನ ಚೀಟಿಯಲ್ಲಿ ಮೇಲೆಯೇ ಇರುತ್ತದೆ.
7) ಚುನಾವಣಾ ಗುರುತಿನ ಚೀಟಿಯ ವಿವರ ನೀಡಿದ ಮೇಲೆ ವೆಬ್​ಸೈಟ್​ನಲ್ಲಿ ಮತದಾರರ ಮಾಹಿತಿ ಪರದೆಯ ಮೇಲೆ ಬರುತ್ತದೆ
8) ಒಂದು ವೇಳೆ ನಿಮ್ಮ ಹೆಸರು ಚುನಾವಣಾ ಆಯೋಗದ ವಿರದಲ್ಲಿ ಇಲ್ಲದಿದ್ದರೆ ನೋ ರೆಕಾರ್ಡ್ಸ್​ ಫೌಂಡ್ ಎಂಬ ಮಾಹಿತಿ ಪರದೆಯ ಮೇಲೆ ಮೂಡಿ ಬರುತ್ತದೆ

ನೀವು ಎಸ್​ಎಂಎಸ್ ಮೂಲಕವೂ ವೋಟರ್ ಲಿಸ್ಟ್ ಮಾಹಿತಿ ಪಡೆಯಬಹುದು
1) ನಿಮ್ಮ ಮೊಬೈಲ್​ನಲ್ಲಿ EPIC ಎಂದು ಟೈಪ್ ಮಾಡಿ
2) ನಿಮ್ಮ ವೋಟರ್ ಐಡಿ ನಮೂದಿಸಿ
3) ಈ ಮೆಸೇಜ್ ಅನ್ನು 9211728082 ಅಥವಾ 1950 ಸಂಖ್ಯೆಗೆ ಎಸ್​ಎಂಎಸ್ ಮಾಡಿ
4) ನಿಮ್ಮ ಮತಗಟ್ಟೆ ಸಂಖ್ಯೆ ಮತ್ತು ಹೆಸರು ನಿಮ್ಮ ಫೋನ್ ಸ್ಕ್ರೀನ್ ಮೇಲೆ ಮೂಡಿಬರಲಿದೆ
5) ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ನೊ ರೆಕಾರ್ಡ್ಸ್​ ಫೌಂಡ್ ಎಂಬ ಸಂದೇಶ ಬರುತ್ತದೆ.

ಇದನ್ನೂ ಓದಿ: UP Election Voting 2022 Live Streaming ಮೊದಲ ಹಂತದ ಚುನಾವಣೆ ನಾಳೆ, ಮತದಾನಕ್ಕೆ ಸಜ್ಜಾದ ಉತ್ತರ ಪ್ರದೇಶ

ಇದನ್ನೂ ಓದಿ: PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ