ಟಿಎಮ್​ಸಿ ಧುರೀಣನ ಮನೆಯಲ್ಲಿ ಇವಿಎಮ್; ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆಗ್ರಹಿಸಿದ ಬಿಜೆಪಿ

ಮಂಗಳವಾರದಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ ಅವರು, ಚುನಾವಣೆಗೆ ಕೇವಲ ಒಂದು ದಿನ ಮೊದಲು ಇವಿಎಮ್ ಮತ್ತು ವಿವಿಪ್ಯಾಟ್​ಗಳು ಒಬ್ಬ ಟಿಎಮ್​ಸಿ ನಾಯಕನ ಮನೆಯಿಂದ ವಶಪಡಿಸಿಕೊಂಡಿರುವುದು ಗಂಭೀರ ವಿಷಯವಾಗಿದೆ ಎಂದು ಹೇಳಿದರು.

ಟಿಎಮ್​ಸಿ ಧುರೀಣನ ಮನೆಯಲ್ಲಿ ಇವಿಎಮ್; ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆಗ್ರಹಿಸಿದ ಬಿಜೆಪಿ
ಟಿಎಮ್​ಸಿ ಧುರೀಣನ ಮನೆಯಲ್ಲಿ ದೊರೆತ ಈವಿಎಮ್​ಗಳು​
Edited By:

Updated on: Apr 07, 2021 | 2:59 PM

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ವಿಧಾನಸಭಾ ಮತಕ್ಷೇತ್ರವೊಂದರಲ್ಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಧುರೀಣನ ಮನೆಯಲ್ಲಿ ವಿದ್ಯುನ್ಮಾನ ಯಂತ್ರ (ಇವಿಎಮ್) ಮತ್ತು ವಿವಿಪ್ಯಾಟ್ ಮಶೀನುಗಳು ದೊರೆತಿರುವ ಪ್ರಕರಣವನ್ನು ಒಂದು ಸ್ವತಂತ್ರ ಸಂಸ್ಥೆಯ ಮೂಲಕ ನಡೆಸಬೇಕೆಂದು ಬಾರತೀಯ ಜನತಾ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಉಲುಬೀರಿಯ ಮತಕ್ಷೇತ್ರದಲ್ಲಿರುವ ಟಿಎಮ್​ಸಿ ನಾಯಕರ ಮನೆಯಲ್ಲಿ ನಾಲ್ಕು ಈವಿಎಮ್, ಅಷ್ಟೇ ಸಂಖ್ಯೆಯ ವಿವಿಪ್ಯಾಟ್​ಗಳು ದೊರೆತ ನಂತರ ಆಯೋಗವು ಸಂಬಂಧಪಟ್ಟ ಒಬ್ಬ ಚುನಾವಣಾ ಆಧಿಕಾರಿಯನ್ನು ಸಸ್ಪೆಂಡ್ ಮಾಡಿತ್ತು.

ಮಂಗಳವಾರದಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ ಅವರು, ಚುನಾವಣೆಗೆ ಕೇವಲ ಒಂದು ದಿನ ಮೊದಲು ಇವಿಎಮ್ ಮತ್ತು ವಿವಿಪ್ಯಾಟ್​ಗಳು ಒಬ್ಬ ಟಿಎಮ್​ಸಿ ನಾಯಕನ ಮನೆಯಿಂದ ವಶಪಡಿಸಿಕೊಂಡಿರುವುದು ಗಂಭೀರ ವಿಷಯವಾಗಿದೆ ಎಂದು ಹೇಳಿದರು.

‘ಚುನಾವಣಾ ಕರ್ತವ್ಯಕ್ಕೆ ನಿಗದಿಯಾಗಿದ್ದ ಕಾರೊಂದರಲ್ಲಿ ಮಶೀನುಗಳನ್ನು ತೆಗೆದುಕೊಂಡು ಹೋಗಿದ್ದು ಮತ್ತೂ ಗಂಭೀರವಾದ ವಿಷಯವಾಗಿದೆ. ಈ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ಚುನಾವಣಾ ಆಯೋಗವು ಒಂದು ಪ್ರತ್ಯೇಕ ಮತ್ತ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸುವ ಬಗ್ಗೆ ನಮಗೆ ನಂಬಿಕೆಯಿದೆ,’ ಎಂದು ಹೇಳಿದರು.

ಆಯೋಗವು ವಶಪಡಿಸಿಕೊಂಡ ಇವಿಎಮ್​ ಮತ್ತು ವಿವಿಪ್ಯಾಟ್​ಗಳನ್ನು ಮಂಗಳವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಮೂರನೇ ಹಂತದ ಮತದಾನದಲ್ಲಿ ಬಳಸಲಿಲ್ಲ.

ಏತನ್ಮಧ್ಯೆ, ಇಂದು ಮತದಾನ ನಡೆದ ಡೈಮಂಡ್ ಹಾರ್ಬರ್ ಮತಕ್ಷೇತ್ರದಲ್ಲಿ, ಟಿಎಮ್​ಸಿ ಕಾರ್ಯಕರ್ತರು ತಮಗೆ ವೋಟು ಚಲಾಯಿಸಲು ಅವಕಾಶ ನೀಡಲಿಲ್ಲವೆಂದು ಕೆಲ ಮತದಾರರು ದೂರಿದ ಬಗ್ಗೆ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾವು ದೂರು ಸಲ್ಲಿಸಿದ ನಂತರ ಕೆಲವ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಿದರಾದರೂ ಮತ ಚಲಾಯಿಸಲು ನಮಗೆ ನೆರವಾಗಲಿಲ್ಲ ಅಂತ ಒಬ್ಬ ಮಹಿಳೆ ಹೇಳಿದರೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು

ಇದನ್ನೂ ಓದಿ: West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

Published On - 11:36 pm, Tue, 6 April 21

Follow Us