AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಮತಾ, ಬಿಜೆಪಿ ನಾಯಕನಿಗೆ ಫೋನಾಯಿಸಿ ಸಹಾಯ ಯಾಚಿಸದರೆನ್ನಲಾದ ಆಡಿಯೋ ಬಂಗಾಳದಲ್ಲಿ ವಿವಾದ ಸೃಷ್ಟಿಸಿದೆ!

ಕೊಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ನಾಯಕರೊಬ್ಬರಿಗೆ ಟಿಎಮ್​ಸಿ ಪಕ್ಷಕ್ಕೆ ವಾಪಸ್ಸು ಬಂದು ತಮ್ಮ ಗೆಲುವಿಗೆ ಸಹಕರಿಸಬೇಕೆಂದು ಮನವೊಲಿಸುವ ಪ್ರಯತ್ನ ಮಾಡಿರುವುದನ್ನು ಹೇಳುವ ಆಡಿಯೊ ಕ್ಲಿಪ್ಪಿಂಗ್ ಒಂದನ್ನು ಬಿಜೆಪಿ ಶನಿವಾರದಂದು ಬಿಡುಗಡೆ ಮಾಡಿದ ನಂತರ ರಾಜ್ಯದಲ್ಲಿ ಭಾರಿ ಪ್ರಮಾಣದ ವಿವಾದ ಹುಟ್ಟಿಕೊಂಡಿದೆ. 2011 ರಲ್ಲಿ ತಮ್ಮನ್ನು ಆಧಿಕಾರದ ಗದ್ದುಗೆಗೆ ಏರಿಸಿದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಮಮತಾ ಅವರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಅವರ ಎದುರಾಳಿ ಹಿಂದೊಮ್ಮೆ ಅವರ ಆಪ್ತವಲಯದಲ್ಲೇ ಪ್ರಮುಖರೆನಿಸಿದ್ದ […]

ಮಮತಾ, ಬಿಜೆಪಿ ನಾಯಕನಿಗೆ ಫೋನಾಯಿಸಿ ಸಹಾಯ ಯಾಚಿಸದರೆನ್ನಲಾದ ಆಡಿಯೋ ಬಂಗಾಳದಲ್ಲಿ ವಿವಾದ ಸೃಷ್ಟಿಸಿದೆ!
ಮಮತಾ ಬ್ಯಾನರ್ಜಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 27, 2021 | 10:10 PM

Share

ಕೊಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ನಾಯಕರೊಬ್ಬರಿಗೆ ಟಿಎಮ್​ಸಿ ಪಕ್ಷಕ್ಕೆ ವಾಪಸ್ಸು ಬಂದು ತಮ್ಮ ಗೆಲುವಿಗೆ ಸಹಕರಿಸಬೇಕೆಂದು ಮನವೊಲಿಸುವ ಪ್ರಯತ್ನ ಮಾಡಿರುವುದನ್ನು ಹೇಳುವ ಆಡಿಯೊ ಕ್ಲಿಪ್ಪಿಂಗ್ ಒಂದನ್ನು ಬಿಜೆಪಿ ಶನಿವಾರದಂದು ಬಿಡುಗಡೆ ಮಾಡಿದ ನಂತರ ರಾಜ್ಯದಲ್ಲಿ ಭಾರಿ ಪ್ರಮಾಣದ ವಿವಾದ ಹುಟ್ಟಿಕೊಂಡಿದೆ. 2011 ರಲ್ಲಿ ತಮ್ಮನ್ನು ಆಧಿಕಾರದ ಗದ್ದುಗೆಗೆ ಏರಿಸಿದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಮಮತಾ ಅವರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಅವರ ಎದುರಾಳಿ ಹಿಂದೊಮ್ಮೆ ಅವರ ಆಪ್ತವಲಯದಲ್ಲೇ ಪ್ರಮುಖರೆನಿಸಿದ್ದ ಮತ್ತು ಇತ್ತೀಚೆಗೆ ಬಿಜೆಪಿ ಸೇರಿದ ಸುವೇಂದು ಅಧಿಕಾರಿಯಾಗಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ನೇತೃತ್ವದ ಪಕ್ಷದ ನಿಯೋಗವೊಂದು ಇಂದು ಬಂಗಾಳದ ಮುಖ್ಯ ಚುನಾವಾಣಾಧಿಕಾರಿಯನ್ನು ಭೇಟಿ ಮಾಡಿ ಅವರಿಗೆ ಟೇಪನ್ನು ಹಸ್ತಾಂತರಿಸಿ, ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಫಲಿತಾಂಶದ ಮೇಲೆ ಪ್ರಬಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತು.

ಅತ್ತ ಟಿಎಮ್​ಸಿ ಪಕ್ಷವು, ಆಡಿಯೋ ಟೇಪಿನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದೆ. ಅದರೆ, ಪ್ರಳಯ್ ರಾಜ್ ಹಿಂದೆ ಟಿಎಮ್​ಸಿ ನಾಯನಾಗಿರುವುದರರಿಂದ ಅವರನ್ನು ಮನವೊಲಿಸುವ ಪ್ರಯತ್ನ ಮಮತಾ ಮಾಡಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ ಎಂಧು ಹೇಳಿದೆ

Kailash Vijayvargiya

ಕೈಲಾಶ್ ವಿಜಯವರ್ಗೀಯ

ಅಧಿಕಾರಿ ಕುಟುಂಬದ ಇಬ್ಬರು ಸದಸ್ಯರು ಟಿಎಮ್​ಸಿ ಪಕ್ಷದಿಂದಲೇ ಲೋಕಭೆಗೆ ಆಯ್ಕೆಯಾಗಿದ್ದರೂ ಈ ಕುಟುಂಬಕ್ಕೆ ಪಾಲ್ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ. ಪಾಲ್ ಇಂದು ಹೇಳಿಕೆಯೊದನ್ನು ನೀಡಿ, ಮಮತಾ ಅವರು ತಮಗೆ ವೈಯಕ್ತಿಕವಾಗಿ ಕರೆ ಮಾಡಿ ನಂದಿಗ್ರಾಮ ಕ್ಷೇತ್ರದಿಂದ ಗೆಲ್ಲಲು ಸಹಕರಿಸುವಂತೆ ಯಾಚಿಸಿದರು ಎಂದಿದ್ದಾರೆ.

‘ನಾನು ನಂದಿಗ್ರಾಮದಲ್ಲಿ ಗೆಲ್ಲಲು ನೀವು ಸಹಾಯ ಮಾಡಬೇಕು. ನಾನು ಹೇಳೋದನ್ನು ಸ್ವಲ್ಪ ಕೇಳಿ, ನಿಮಗೆ ಕೆಲವು ಆಸಮಾಧಾನಗಳಿವೆ ಆಂತ ನಂಗೆ ಗೊತ್ತಿದೆ. ಆದರೆ, ಅದೆಲ್ಲ ಆಧಿಕಾರಿ ಕುಟುಂಬದಿಂದ ಆಗಿದ್ದು. ನಾನು ನಂದಿಗ್ರಾಮ ಮತ್ತು ಪೂರ್ವ ಮಿದ್ನಾಪುರ ಯಾವತ್ತೂ ಪ್ರವೇಶಿಸದಂತೆ ಅವರು ತಡೆದರು. ಆದರೆ ಇನ್ನು ಮುಂದೆ ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ,’ ಅಂತ ಮಮತಾ ತನಗೆ ಹೇಳಿದರೆಂದು ಪಾಲ್ ಆರೋಪಿಸಿದ್ದಾರೆ.

ಆದರೆ, ಆಡಿಯೋ ಕ್ಲಿಪ್​ನಲ್ಲಿ ದಾಖಲಾಗಿರುವ ಸಂಭಾಷಣೆಯ ಪ್ರಕಾರ ಪಾಲ್, ಮಮತಾರ ಅನುನಯಿಸುವಿಕೆಗೆ ಒಳಗಾಗಿಲ್ಲ. ‘ದೀದಿ, ನೀವು ನನಗೆ ಕರೆ ಮಾಡಿ ಗೌರವಿಸಿದ್ದೀರಿ. ಆದರೆ ನಾನು ಅಧಿಕಾರಿ ಕುಟುಂಬವನ್ನು ವಂಚಿಸಲಾರೆ, ಸಂಕಟದ ಸಮಯದಲ್ಲಿ ಅವರೇ ನನ್ನ ಕೈಹಿಡಿದಿದ್ದಾರೆ,’ ಎಂದು ಪಾಲ್ ಹೇಳಿರುವುದು ಧ್ವನಿಮುದ್ರಿತವಾಗಿದೆ.

ನಂತರ ನ್ಯೂಸ್​ ಚ್ಯಾನೆಲ್​ಗಳೊಂದಿಗೆ ಮಾತಾಡಿರುವ ಪಾಲ್, ಮಮತಾ ತನಗೆ ಕರೆ ಮಾಡಿ ಟಿಎಮ್​ಸಿ ಪಕ್ಷಕ್ಕೆ ವಾಪಸ್ಸಾಗುವಂತೆ ಹೇಳಿದರು ಎಂದಿದ್ದಾರೆ.

‘ನಾನೀಗ ಬಿಜೆಪಿ ಪಕ್ಷಕ್ಕೆ ಕೆಲಸ ಮಾಡುತ್ತಿರುವುದರಿಂದ ಅದಕ್ಕೆ ದ್ರೋಹ ಬಗೆಯಲಾರೆ.’ ಎಂದು ಅವರು ಹೇಳಿದರು. ಸುದ್ದಿಸಂಸ್ಥೆಗಳಿಗೆ ಆಡಿಯೋ ಕ್ಲಿಪ್ ಸತ್ಯಾಸತ್ಯತೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಬಿಜೆಪಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯ ಟ್ವೀಟೊಂದನ್ನು ಮಾಡಿ, ‘ಭಾರಿ ಸುದ್ದಿ! ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಜಿಲ್ಲಾ ಅಧ್ಯಕ್ಷ ಪ್ರಳಯ್ ಪಾಲ್ ಅವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ನಿಮಗೆ ಟಿಎಮ್​ಸಿಯಲ್ಲಿ ಹೀಯಾಳಿಸಲಾಗಿದೆ ಅಂತ ಪಾಲ್​ಗೆ ಅವರಿಗೆ ಹೇಳಿದ್ದಾರೆ. ಆದರೆ ಅವರು ಮತ್ತವರ ಕುಟುಂಬ ಯಾವತ್ತೂ ಬಿಜೆಪಿಗೆ ದ್ರೋಹ ಬಗೆಯುವುದಿಲ್ಲ. ದೀದಿ ಅವರು ನಂದಿಗ್ರಾಮದಲ್ಲಿ ಸೋಲುತ್ತಿದ್ದಾರೆ ಮತ್ತು ಟಿಎಮ್​ಸಿ ಬಂಗಾಳವನ್ನು ಕಳೆದುಕೊಳ್ಳುತ್ತಿದೆ,’ ಎಂದಿದ್ದಾರೆ.

‘ಕೇವಲ ಸೋಲುವುದು ಖಚಿತವಾಗಿರುವ ಮತ್ತು ಹತಾಷ ವ್ಯಕ್ತಿ ಮಾತ್ರ ಮಮತಾ ರೀತಿ ಮಾತಾಡುತ್ತಾನೆ,’ ಎಂದು ಸುದ್ದಿಗಾರರೊಂದಿಗೆ ಮಾತಾಡಿದ ವಿಜಯವರ್ಗೀಯ ಹೇಳಿದರು.

ಟೇಪ್ ನೈಜ್ಯವಾದುದ್ದೇ ಎಂದು ಕೇಳಿದ ಪ್ರಶ್ನೆಗೆ ಅವರು, ‘ಹೌದು, ಸಂಫೂರ್ಣವಾದ ಹೊಣೆಗಾರಿಕೆಯಿಂದ ನಾನು ಇದನ್ನು ಹೇಳುತ್ತಿದ್ದೇನೆ,’ ಎಂದರು

‘ಆಕೆ ಯಾಚನೆಯ ಧ್ವನಿಯಲ್ಲಿ ಮಾತಾಡಿದ್ದಾರೆ, ಅದರರ್ಥ ಅಕೆ ಸೋಲನ್ನು ಅಂಗೀಕರಿಸಿದ್ದಾರೆ,’ ಎಂದು ವಿಜಯವರ್ಗೀಯ ಹೇಳಿದ್ದಾರೆ.

ಇದನ್ನೂ ಓದಿ: West Bengal Election 2021: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿಯೇ ಭುಗಿಲೆದ್ದ ಹಿಂಸೆ; ವರದಿಗೆ ತೆರಳಿದ್ದ ಟಿವಿ 9 ಬಾಂಗ್ಲಾ ಸಿಬ್ಬಂದಿ ಮೇಲೆಯೂ ಹಲ್ಲೆ

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್