BARC Recruitment: ಪರಮಾಣು ಸಂಶೋಧನಾ ಕೇಂದ್ರದ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: Jul 04, 2022 | 3:17 PM

BARC Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BARC ನ ಅಧಿಕೃತ ವೆಬ್‌ಸೈಟ್‌ಗೆ barc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

BARC Recruitment: ಪರಮಾಣು ಸಂಶೋಧನಾ ಕೇಂದ್ರದ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
BARC Recruitment 2022
Follow us on

BARC Recruitment 2022: ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ಸ್ಟೆನೋಗ್ರಾಫರ್, ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BARC ನ ಅಧಿಕೃತ ವೆಬ್‌ಸೈಟ್‌ಗೆ barc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

ಒಟ್ಟು – 89 ಹುದ್ದೆಗಳು

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಸಹಾಯಕ-ಎ ಹುದ್ದೆಗಳು – 72

  • UR-20 ಹುದ್ದೆಗಳು
  • SC-15 ಹುದ್ದೆಗಳು
  • ST-12 ಹುದ್ದೆಗಳು
  • OBC-15 ಹುದ್ದೆಗಳು
  • EWS-3 ಹುದ್ದೆಗಳು

ಚಾಲಕ – 11 ಹುದ್ದೆಗಳು

  • UR-4 ಹುದ್ದೆಗಳು
  • SC-2 ಹುದ್ದೆಗಳು
  • ST-2 ಹುದ್ದೆಗಳು
  • OBC-2 ಹುದ್ದೆಗಳು
  • EWS-1 ಹುದ್ದೆ

ಸ್ಟೆನೋಗ್ರಾಫರ್ ಗ್ರೇಡ್-III – 6 ಹುದ್ದೆಗಳು

  • UR-3 ಹುದ್ದೆಗಳು
  • SC-1 ಹುದ್ದೆ
  • OBC-1 ಹುದ್ದೆ
  • St-1 ಹುದ್ದೆ

ಅರ್ಹತಾ ಮಾನದಂಡಗಳು:

ಸಹಾಯಕ ಹುದ್ದೆ – ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಸ್ಟೆನೋಗ್ರಾಫರ್ – ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಇಂಗ್ಲಿಷ್ ಸ್ಟೆನೋಗ್ರಾಫ್‌ನಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗ ಹೊಂದಿರಬೇಕು.
ಚಾಲಕ – 10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರಬೇಕು.

ವಯೋಮಿತಿ:

  • ಸಹಾಯಕ ಹುದ್ದೆ – 18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಸ್ಟೆನೋಗ್ರಾಫರ್-18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಚಾಲಕ – 18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 100/- ಪಾವತಿಸಬೇಕಾಗುತ್ತದೆ.

ತಿಂಗಳ ವೇತನ:

  • ಸ್ಟೆನೋಗ್ರಾಫರ್ – ರೂ. 25,500/-
  • ಚಾಲಕ – ರೂ. 19,000/-
  • ಸಹಾಯಕ ಹುದ್ದೆ – ರೂ. 18,000/-

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್​ನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

 

 

Published On - 3:15 pm, Mon, 4 July 22