BEL Recruitment 2022: ಬಿಇಎಲ್ನ 360 ಹುದ್ದೆಗಳಿಗೆ ಅರ್ಜಿ ಆಹ್ವಾನ
BEL Apprentice Recruitment 2022: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಪದವೀಧರರಾಗಿರಬೇಕು.
BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಗ್ರಾಜುಯೇಟ್ ಅಪ್ರೆಂಟಿಸ್ ಮತ್ತು ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BEL ನ ಅಧಿಕೃತ ವೆಬ್‌ಸೈಟ್ bel-india.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.
BEL Recruitment 2022 ಹುದ್ದೆಗಳ ವಿವರಗಳು: ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ – 100 ಹುದ್ದೆಗಳು ಗ್ರಾಜುಯೇಟ್ (ಬಿ.ಇ./ಬಿ.ಟೆಕ್.) ಅಪ್ರೆಂಟಿಸ್ – 260 ಹುದ್ದೆಗಳು
BEL Recruitment 2022 ಗಾಗಿ ಅರ್ಹತಾ ಮಾನದಂಡಗಳು: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಪದವೀಧರರಾಗಿರಬೇಕು.
BEL Recruitment 2022 ಗಾಗಿ ಸ್ಟೈಫಂಡ್: ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ – ರೂ. 10, 400/-ರೂ ಗ್ರಾಜುಯೇಟ್ ಅಪ್ರೆಂಟಿಸ್ – ರೂ. 11, 110/-ರೂ.
BEL Recruitment 2022 ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
BEL Recruitment 2022 ಗಾಗಿ ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭ: 23 ಫೆಬ್ರವರಿ 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2022
BEL Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(BEL Apprentice Recruitment 2022: Apply online for 360 vacancies)
Published On - 7:39 pm, Wed, 23 February 22