KPSC Recruitment 2022: ತಿಂಗಳಿಗೆ 63 ಸಾವಿರ ರೂ. ವೇತನ: ಕೆಪಿಎಸ್ಸಿಯಲ್ಲಿದೆ ಉದ್ಯೋಗಾವಕಾಶ
KPSC AE Recruitment 2022: ಅಭ್ಯರ್ಥಿಗಳ ಆಯ್ಕೆಯನ್ನು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ, ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.
KPSC AE Recruitment 2022: ಕರ್ನಾಟಕ ಲೋಕಸೇವಾ ಆಯೋಗ (KPSC) ಗ್ರೇಡ್-1 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಅಗತ್ಯವಿರುವ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿ ಈ ಕೆಳಗಿನಂತಿವೆ.
KPSC AE Recruitment 2022: ಒಟ್ಟು ಹುದ್ದೆಗಳ ಸಂಖ್ಯೆ; ಸಹಾಯಕ ಇಂಜಿನಿಯರ್ – 188 ಹುದ್ದೆಗಳು
KPSC AE Recruitment 2022: ಅರ್ಹತಾ ಮಾನದಂಡ: ಶೈಕ್ಷಣಿಕ ಅರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ / ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಪದವಿ ಹೊಂದಿರುವ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
KPSC AE Recruitment 2022: ವಯೋಮಿತಿ: 18 ರಿಂದ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ/2ಬಿ/3ಎ &3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
KPSC AE Recruitment 2022: ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯನ್ನು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ, ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.
KPSC AE Recruitment 2022: ವೇತನ: ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 43,100 ರಿಂದ 83,900 ಸಾವಿರದವರೆಗೆ ವೇತನ ನಿಗದಿ ಮಾಡಲಾಗುತ್ತದೆ.
KPSC AE Recruitment 2022 ಗೆ ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು KPSCಯ ಅಧಿಕೃತ ವೆಬ್ಸೈಟ್ kpsc.kar.nic.in ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು.
KPSC AE Recruitment 2022 ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿಯ ಸಲ್ಲಿಕೆ ಪ್ರಾರಂಭ: 28 ಫೆಬ್ರವರಿ 2022 ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 30 ಮಾರ್ಚ್ 2022
ಈ ಹುದ್ದೆಗಳ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
(KPSC AE Recruitment 2022: Apply Online for 188 Vacancies)