BEL Recruitment 2023: ಬಿಇಎಲ್ನ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 20 ಸಾವಿರ ರೂ.
BEL Recruitment 2023: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ 25 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
BEL Recruitment 2023: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ ಟ್ರೈನೀಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ವಿವಿಧ ವಿಭಾಗಳಲ್ಲಿನ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗಬೇಕೆಂದು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ನೇಮಕಾತಿಯ ಸಂದರ್ಶನವು ಮಾರ್ಚ್ 20 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ರಿಸ್ಯೂಮ್ ಮತ್ತು ದಾಖಲಾತಿಗಳೊಂದಿಗೆ ಹಾಜರಾಗಬೇಕಾಗುತ್ತದೆ. ಈ ನೇಮಕಾತಿಗೆ ಬೇಕಾದ ಅರ್ಹತೆಗಳೇನು, ಮಾಸಿಕ ವೇತನ ವೇತನ ಎಷ್ಟು, ವಯೋಮಿತಿಯೇನು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL ) ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ
ಶೈಕ್ಷಣಿಕ ಅರ್ಹತೆ:
BELನ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ CA, ICWA ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ 25 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 3 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. SC, ST ಅಭ್ಯರ್ಥಿಗಳಿಗೆ: 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. PWD ಅಭ್ಯರ್ಥಿಗಳಿಗೆ: 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಾಸಿಕ ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ ರೂ. 18,000 ರಿಂದ 20,000/- ರೂ. ನೀಡಲಾಗುತ್ತದೆ.
ಪ್ರಮುಖ ದಿನಾಂಕ:
ಈ ನೇಮಕಾತಿಗಾಗಿ ನೇರ ಸಂದರ್ಶನ ನಡೆಯುವ ದಿನಾಂಕ- ಮಾರ್ಚ್ 20, 2023
ಸಂದರ್ಶನ ನಡೆಯುವ ವಿಳಾಸ:
Center For Learning And Development, Bharat Electronics Limited, Jalahalli, Bengaluru-560013.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.