BEL Recruitment: ಬಿಇಎಲ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು 2 ದಿನಗಳು ಮಾತ್ರ ಬಾಕಿ
BEL Recruitment 2021: ಟ್ರೈನಿ ಇಂಜಿನಿಯರ್ - ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಆ ಬಳಿಕ ಅಗತ್ಯತೆ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ ಮೂರು ವರ್ಷಗಳವರೆಗೆ ಒಪ್ಪಂದವನ್ನು ವಿಸ್ತರಿಸಬಹುದು.
BEL recruitment: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ 84 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬಿಇಎಲ್ನ ಹೈದರಾಬಾದ್ ಘಟಕಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು, ‘ಟ್ರೇನಿ’ ಮತ್ತು ‘ಪ್ರಾಜೆಕ್ಟ್’ ಇಂಜಿನಿಯರ್‌ಗಳನ್ನು ಗುತ್ತಿಗೆ ಆಧಾರ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಈ ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಸಂಖ್ಯೆ ಮತ್ತು ವಿವರಗಳು:
ಟ್ರೈನಿ ಇಂಜಿನಿಯರ್ – I (ಎಲೆಕ್ಟ್ರಾನಿಕ್ಸ್) — 19 ಹುದ್ದೆಗಳು
ಟ್ರೈನಿ ಇಂಜಿನಿಯರ್ – I (ಮೆಕ್ಯಾನಿಕಲ್) — 11 ಹುದ್ದೆಗಳು
ಟ್ರೈನಿ ಇಂಜಿನಿಯರ್ – I (ಕಂಪ್ಯೂಟರ್ ಸೈನ್ಸ್) — 03 ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್ – I (ಎಲೆಕ್ಟ್ರಾನಿಕ್ಸ್) — 36 ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್ – I (ಮೆಕ್ಯಾನಿಕಲ್) — 08 ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್ – I (ಕಂಪ್ಯೂಟರ್ ಸೈನ್ಸ್) — 06 ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್ – I (ಎಲೆಕ್ಟ್ರಿಕಲ್) — 01 ಹುದ್ದೆ
ವಯೋಮಿತಿ: ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 25 ವರ್ಷಗಳು. ಹಾಗೆಯೇ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿದಾರರ ಗರಿಷ್ಠ ವಯಸ್ಸು 28 ವರ್ಷ ದಾಟಿರಬಾರದರು ಎಂದು ತಿಳಿಸಲಾಗಿದೆ.
ವಿದ್ಯಾರ್ಹತೆ: ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್): ಅಭ್ಯರ್ಥಿಯು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ BE/B.Tech/B.Sc Engg ಪದವಿ ಪಡೆದಿರಬೇಕು. ಜೊತೆಗೆ 1-ವರ್ಷದ ಅನುಭವವನ್ನು ಹೊಂದಿರಬೇಕು.
ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್): ಅಭ್ಯರ್ಥಿಯು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ BE/B.Tech/B.Sc Engg ಪದವಿ ಪಡೆದಿರಬೇಕು. ಜೊತೆಗೆ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
ವೇತನ: ಟ್ರೈನಿ ಇಂಜಿನಿಯರ್ – ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಆ ಬಳಿಕ ಅಗತ್ಯತೆ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ ಮೂರು ವರ್ಷಗಳವರೆಗೆ ಒಪ್ಪಂದವನ್ನು ವಿಸ್ತರಿಸಬಹುದು. ಅದರಂತೆ ಅಭ್ಯರ್ಥಿಗಳಿಗೆ ಮೊದಲ ವರ್ಷ ತಿಂಗಳಿಗೆ ರೂ.25,000, 2ನೇ ವರ್ಷ ರೂ.28,000 ಮತ್ತು ಹಾಗೂ ಮೂರನೇ ವರ್ಷ 31,000 ರೂ. ವೇತನ ನೀಡಲಾಗುತ್ತದೆ.
ಪ್ರಾಜೆಕ್ಟ್ ಇಂಜಿನಿಯರ್ – ಈ ಹುದ್ದೆಗಳಿಗೆ 2 ವರ್ಷಗಳ ಒಪ್ಪಂದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಗರಿಷ್ಠ ನಾಲ್ಕು ವರ್ಷಗಳವರೆಗೆ ವಿಸ್ತರಿಸಬಹುದು. ಅದರಂತೆ ಮೊದಲ ವರ್ಷ ತಿಂಗಳಿಗೆ, 35,000 ರೂ, 2ನೇ ವರ್ಷ 40,000 ರೂ, ಮೂರನೇ ವರ್ಷ 45,000 ರೂ ಮತ್ತು ನಾಲ್ಕನೇ ವರ್ಷ 50,000 ರೂ. ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಟ್ರೈನಿ ಇಂಜಿನಿಯರ್-I ಅಭ್ಯರ್ಥಿಗಳಿಗೆ: 200 ರೂ.
ಪ್ರಾಜೆಕ್ಟ್ ಇಂಜಿನಿಯರ್-I ಅಭ್ಯರ್ಥಿಗಳಿಗೆ: 500 ರೂ.
PWD/SC/ST ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31, 2021 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಜನರಲ್ ಮ್ಯಾನೇಜರ್ (HR), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಐ.ಇ ನಚರಂ. ಹೈದರಾಬಾದ್- 500076 ತೆಲಂಗಾಣ.
ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ