BIS Recruitment 2022: ಬಿಐಎಸ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jul 02, 2022 | 7:18 PM

BIS Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BIS ನ ಅಧಿಕೃತ ವೆಬ್‌ಸೈಟ್‌ bis.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

BIS Recruitment 2022: ಬಿಐಎಸ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
BIS Recruitment 2022
Follow us on

BIS Recruitment 2022: ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BIS ನ ಅಧಿಕೃತ ವೆಬ್‌ಸೈಟ್‌ bis.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15 ಆಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಪ್ರಮಾಣೀಕರಣ ವಿಭಾಗ (Standardization Department) – 4 ಹುದ್ದೆಗಳು
  • ಸಂಶೋಧನಾ ವಿಶ್ಲೇಷಣೆ – 20 ಹುದ್ದೆಗಳು
  • ನಿರ್ವಹಣಾ ವ್ಯವಸ್ಥೆ ಪ್ರಮಾಣೀಕರಣ ವಿಭಾಗ (MSCD) – 22 ಹುದ್ದೆಗಳು

ಅರ್ಹತಾ ಮಾನದಂಡಗಳು:

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
  • ಪ್ರಮಾಣೀಕರಣ ವಿಭಾಗ- ಬಿ.ಟೆಕ್ ಅಥವಾ ಬಿ.ಇ. ಮಾಡಿರಬೇಕು. ಅಥವಾ ಕನಿಷ್ಠ 2 ವರ್ಷಗಳ ಕೆಲಸದ ಅನುಭವದೊಂದಿಗೆ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
  • ಸಂಶೋಧನಾ ವಿಶ್ಲೇಷಣೆ- ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.
  • ನಿರ್ವಹಣಾ ವ್ಯವಸ್ಥೆ ಪ್ರಮಾಣೀಕರಣ ವಿಭಾಗ (MSCD)- ಯಾವುದೇ ವಿಭಾಗದಲ್ಲಿ ಎಂಎಸ್‌ಸಿಡಿ ಪದವಿ ಅಥವಾ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. ಜೊತೆಗೆ ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ:
35 ವರ್ಷದವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 70 ಸಾವಿರ ರೂ. ವೇತನ ಸಿಗಲಿದೆ.

ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 15, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.