BRO Recruitment 2024 : ಗಡಿ ರಸ್ತೆಗಳ ಇಲಾಖೆಯಲ್ಲಿ ಖಾಲಿಯಿರುವ 466 ಚಾಲಕ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಗಡಿ ರಸ್ತೆಗಳ ಸಂಸ್ಥೆ 466 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಇರುವ ಹುದ್ದೆಗಳಲ್ಲಿ ಡ್ರೈವರ್, ಡ್ರಾಟ್ಸ್‌ಮನ್, ಸೂಪರ್‌ವೈಸರ್, ಆಪರೇಟರ್, ಟರ್ನರ್, ಮೆಷಿನಿಸ್ಟ್ ಹುದ್ದೆಗಳು ಸೇರಿವೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನಶ್ರೇಣಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಬಹುದು.

BRO Recruitment 2024 : ಗಡಿ ರಸ್ತೆಗಳ ಇಲಾಖೆಯಲ್ಲಿ ಖಾಲಿಯಿರುವ 466 ಚಾಲಕ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 22, 2024 | 6:10 PM

ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ ಹಾಗೂ ಡಿಪ್ಲೊಮೊ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣವಕಾಶವಿದೆ. ಗಡಿ ರಸ್ತೆಗಳ ಸಂಸ್ಥೆ ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿದ್ದು, 466 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡ್ರೈವರ್, ಡ್ರಾಟ್ಸ್‌ಮನ್, ಸೂಪರ್‌ವೈಸರ್, ಆಪರೇಟರ್, ಟರ್ನರ್, ಮೆಷಿನಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗ ವಿವರಗಳು

* ಇಲಾಖೆ ಹೆಸರು : ಗಡಿ ರಸ್ತೆಗಳ ಸಂಸ್ಥೆ

* ಹುದ್ದೆಗಳ ಹೆಸರು : ಕರಡುಗಾರ – 16, ಮೇಲ್ವಿಚಾರಕ -2, ಟರ್ನರ್ – 10, ಯಂತ್ರಶಾಸ್ತ್ರಜ್ಞ -1, ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ -417, ಡ್ರೈವರ್ ರೋಡ್ ರೋಲರ್ -2, ಹಾಗೂ ನಿರ್ವಾಹಕರು ಅಗೆಯುವ ಯಂತ್ರೋಪಕರಣಗಳು -18.

* ಒಟ್ಟು ಹುದ್ದೆಗಳು : 466

* ಉದ್ಯೋಗ ಸ್ಥಳ – ಭಾರತಾದ್ಯಂತ

ವಿದ್ಯಾರ್ಹತೆ ಹಾಗೂ ವಯೋಮಿತಿ

* ಈ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ, ಐಟಿಐ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಗರಿಷ್ಠ 27 ವರ್ಷಗಳು ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಶಾರೀರಿಕ ದಕ್ಷತೆಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

* ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 50 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆದರೆ ಎಸ್ ಸಿ, ಎಸ್ ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಪ್ರಮುಖ ದಿನಾಂಕಗಳು

*ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16- 11-2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30- 12 -2024

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ