DC Office Raichur Recruitment 2023: ರಾಯಚೂರು ಡಿಸಿ ಕಚೇರಿಯಲ್ಲಿದೆ ಉದ್ಯೋಗಾವಕಾಶ
DC Office Raichur Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆ, ಅನುಭವ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
DC Office Raichur Recruitment 2023: ರಾಯಚೂರು ಜಿಲ್ಲಾ ಉಪ ಆಯುಕ್ತರ ಕಚೇರಿಯ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ತಾಂತ್ರಿಕ ಸಹಾಯಕ ಮತ್ತು ಜಿಲ್ಲಾ ಖಾತೆ ವ್ಯವಸ್ಥಾಪಕರ ಹುದ್ದೆಗಳನ್ನು ಗುತ್ತಿಗೆಯ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 23 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ಮಾಹಿತಿ:
- ಸಂಸ್ಥೆಯ ಹೆಸರು : ಡೆಪ್ಯೂಟಿ ಕಮಿಷನರ್ಸ್ ಆಫೀಸ್ ರಾಯಚೂರು (DC ಆಫೀಸ್ ರಾಯಚೂರು)
- ಹುದ್ದೆಗಳ ಸಂಖ್ಯೆ: 3
- ಉದ್ಯೋಗ ಸ್ಥಳ: ರಾಯಚೂರು – ಕರ್ನಾಟಕ
- ಹುದ್ದೆಯ ಹೆಸರು: ಟೆಕ್ನಿಕಲ್ ಅಸಿಸ್ಟೆಂಟ್, ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್
ಹುದ್ದೆಗಳ ವಿವರಗಳು:
- ತಾಂತ್ರಿಕ ಅಧಿಕಾರಿ – 1 ಹುದ್ದೆ
- ತಾಂತ್ರಿಕ ಸಹಾಯಕ – 1 ಹುದ್ದೆ
- ಜಿಲ್ಲಾ ಅಕೌಂಟ್ಸ್ ಮ್ಯಾನೇಜರ್ – 1 ಹುದ್ದೆ
ಅರ್ಹತಾ ಮಾನದಂಡಗಳು:
ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ , ಬಿಇ ಅಥವಾ ಬಿಟೆಕ್, ಎಂಟೆಕ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಜಿಲ್ಲಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗಳಿಗೆ ಬಿ.ಕಾಂ ಮತ್ತು ಎಂ.ಕಾಂ ಮಾಡಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಈ ಕುರಿತಾದ ಮತ್ತಷ್ಟು ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ:
- ತಾಂತ್ರಿಕ ಅಧಿಕಾರಿ- 65 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ತಾಂತ್ರಿಕ ಸಹಾಯಕ- 23 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಜಿಲ್ಲಾ ಅಕೌಂಟ್ಸ್ ಮ್ಯಾನೇಜರ್- 25 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆ, ಅನುಭವ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
- ತಾಂತ್ರಿಕ ಅಧಿಕಾರಿ- ರೂ.30000/-
- ತಾಂತ್ರಿಕ ಸಹಾಯಕ- ರೂ.25000/-
- ಜಿಲ್ಲಾ ಅಕೌಂಟ್ಸ್ ಮ್ಯಾನೇಜರ್- ರೂ.23000/-
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 23, 2023.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.