IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನಿವೀರ್ವಾಯುಗೆ ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

ಅಭ್ಯರ್ಥಿಗಳು 7 ನವೆಂಬರ್ 2022 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ 23 ನವೆಂಬರ್ 2022

IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನಿವೀರ್ವಾಯುಗೆ ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ
ಸಾಂದರ್ಣಭಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Nov 05, 2022 | 7:00 AM

IAF ಅಗ್ನಿವೀರ್ವಾಯು ನೇಮಕಾತಿ 2023: ಭಾರತೀಯ ವಾಯುಪಡೆಯು (IAF) ಅಗ್ನಿವೀರ್ವಾಯುಗೆ IAF ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಭ್ಯರ್ಥಿಗಳು 7 ನವೆಂಬರ್ 2022 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ 23 ನವೆಂಬರ್ 2022 ಇದೆ. ಅಭ್ಯರ್ಥಿಗಳು agnipathvayu.cdac.in ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ: ಅಗ್ನಿವೀರ್ವಾಯು

ಅರ್ಜಿ ಸಲ್ಲಿಸಲು ದಿನಾಂಕ

ಪ್ರಾರಂಭ: 7 ನವೆಂಬರ್ 2022

ಮುಕ್ತಾಯ: 23 ನವೆಂಬರ್ 2022

ಅರ್ಹತೆ: COBSE ಪಟ್ಟಿ ಮಾಡಲಾದ ಶಿಕ್ಷಣ ಮಂಡಳಿಯಿಂದ 12 ನೇ ತರಗತಿಯಲ್ಲಿ ಶೇ 50 ಅಂಕಗಳೊಂದಿಗೆ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಶೇ 50 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಕೋರ್ಸ್ ಮಾಡಿರಬೇಕು.

ಪರೀಕ್ಷೆ ವಿಧಾನ: ಆರ್ಮಿ ಸರ್ವಿಸ್ ಕಾರ್ಪ್ಸ್ (ASC) ಸೆಂಟರ್​ಗಳಲ್ಲಿ ಹಂತ 1 ಮತ್ತು ಹಂತ 2 ಎಂದು ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹಂತ – 1 ರ ತಾತ್ಕಾಲಿಕ ಪ್ರವೇಶ ಕಾರ್ಡ್​​ನ್ನು ಅರ್ಜಿಯಲ್ಲಿ ನೋಂದಾಯಿಸಿದ ಇ-ಮೇಲ್ ಅಭ್ಯರ್ಥಿಗಳಿಗೆ ಬರುತ್ತದೆ.

ಆಯ್ಕೆ ಪರೀಕ್ಷೆ ಮುಗಿದ ನಂತರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ಎಲ್ಲಾ ASC ಗಳಲ್ಲಿ ಮತ್ತು ವೆಬ್ ಪೋರ್ಟಲ್ https://agnipathvayu.cdac.in ನಲ್ಲಿ 31 ಮೇ 2023 ರಂದು ಬಿತ್ತರಿಸಲಾಗುತ್ತದೆ. ವೇತನ: ಅಗ್ನಿವೀರ್ವಾಯು ಮಾಸಿಕ 30,000/- ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು https://agnipathvayu.cdac.in ಗೆ ಲಾಗ್ ಇನ್ ಆಗಬೇಕು. ಅಲ್ಲಿ ಅರ್ಜಿ ಸಲ್ಲಿಸಬಹುದು. ಪರೀಕ್ಷಾ ಶುಲ್ಕ ರೂ.250/- ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ IAF ಅಗ್ನಿವೀರ್ವಾಯು ನೋಟಿಫಿಕೇಶನ್​ ಡೌನ್​ಲೋಡ್​ ಮಾಡಿ ಹೆಚ್ಚಿನ ಮಾಹಿತಿಗಾಗಿ IAF ವೆಬ್​ಸೈಟ್​​ಗೆ ಭೇಟಿ ನೀಡಿ

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ