AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICAI CA Exam 2026: CA ಪರೀಕ್ಷಾ ವೇಳಾಪಟ್ಟಿ ಬಿಡುಗಡೆ; ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಅಂತಿಮ ಪರೀಕ್ಷೆಗಳ ವಿವರ ಇಲ್ಲಿದೆ

ICAI ಮೇ ತಿಂಗಳಲ್ಲಿ ನಡೆಯಲಿರುವ CA ಫೌಂಡೇಶನ್, ಇಂಟರ್ಮೀಡಿಯೇಟ್, ಫೈನಲ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನೋಂದಣಿ ಮಾರ್ಚ್ 3 ರಿಂದ 16 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು eservices.icai.org ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ 20 ರಿಂದ 22 ರವರೆಗೆ ತಿದ್ದುಪಡಿಗಳಿಗೆ ಅವಕಾಶವಿದೆ. ಪರೀಕ್ಷೆಗಳ ವಿವರವಾದ ದಿನಾಂಕಗಳು ಮತ್ತು ಸಮಯಗಳನ್ನು ಪ್ರಕಟಿಸಲಾಗಿದೆ.

ICAI CA Exam 2026: CA ಪರೀಕ್ಷಾ ವೇಳಾಪಟ್ಟಿ ಬಿಡುಗಡೆ; ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಅಂತಿಮ ಪರೀಕ್ಷೆಗಳ ವಿವರ ಇಲ್ಲಿದೆ
Icai Ca Exam 2026
ಅಕ್ಷತಾ ವರ್ಕಾಡಿ
|

Updated on: Dec 14, 2025 | 5:02 PM

Share

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2026 ರ ಮೇ ತಿಂಗಳಲ್ಲಿ ನಡೆಯಲಿರುವ CA ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. CA ಪರೀಕ್ಷೆಗೆ ನೋಂದಣಿ ಮಾರ್ಚ್ 3 ರಂದು ಪ್ರಾರಂಭವಾಗಿ ಮಾರ್ಚ್ 16 ರವರೆಗೆ ಇರಲಿದೆ. ಅಭ್ಯರ್ಥಿಗಳು ICAI ಸ್ವಯಂ ಸೇವಾ ಪೋರ್ಟಲ್, eservices.icai.org ಗೆ ಭೇಟಿ ನೀಡುವ ಮೂಲಕ ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಬಹುದು. CA ಪರೀಕ್ಷೆಗೆ ಅರ್ಜಿ ಸಲ್ಲಿಸುವ ನೋಂದಾಯಿತ ಅಭ್ಯರ್ಥಿಗಳು ಮಾರ್ಚ್ 20 ರಿಂದ ಮಾರ್ಚ್ 22 ರವರೆಗೆ ತಮ್ಮ ನೋಂದಣಿ ನಮೂನೆಗಳಲ್ಲಿ ತಿದ್ದುಪಡಿಗಳನ್ನು ಮಾಡಬಹುದು.

2026ರ CA ಪರೀಕ್ಷೆ ವೇಳಾಪಟ್ಟಿ:

ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ವೇಳಾಪಟ್ಟಿಯ ಪ್ರಕಾರ, CA ಫೈನಲ್ ಗ್ರೂಪ್ 1 ಪರೀಕ್ಷೆಯು ಮೇ 2, 4 ಮತ್ತು 6 ರಂದು ಮತ್ತು ಗ್ರೂಪ್ 2 ಪರೀಕ್ಷೆಯು ಮೇ 8, 10 ಮತ್ತು 12 ರಂದು ನಡೆಯಲಿದೆ. CA ಇಂಟರ್ಮೀಡಿಯೇಟ್ ಗ್ರೂಪ್ 1 ಪರೀಕ್ಷೆಯು ಮೇ 3, 5 ಮತ್ತು 7 ರಂದು ಮತ್ತು ಗ್ರೂಪ್ 2 ಪರೀಕ್ಷೆಯು ಮೇ 9, 11 ಮತ್ತು 13 ರಂದು ನಡೆಯಲಿದೆ. CA ಫೌಂಡೇಶನ್ ಪರೀಕ್ಷೆಯು ಮೇ 14, 16, 18 ಮತ್ತು 20 ರಂದು ನಡೆಯಲಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಯಾಗಲು 15 ಸರ್ಕಾರಿ ಉದ್ಯೋಗ ತೊರೆದ ತೃಪ್ತಿ ಭಟ್; ಯಶಸ್ಸಿನ ಕಥೆ ಇಲ್ಲಿದೆ

ಪರೀಕ್ಷೆಯ ಸಮಯ ಎಷ್ಟು?

ಫೌಂಡೇಶನ್ ಪತ್ರಿಕೆಗಳು 1 ಮತ್ತು 2 ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ, 3 ಮತ್ತು 4 ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ, ಇಂಟರ್ಮೀಡಿಯೇಟ್ ಮತ್ತು ಅಂತಿಮ ಪತ್ರಿಕೆಗಳು 1 ರಿಂದ 5 ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ಮತ್ತು ಅಂತಿಮ ಪತ್ರಿಕೆ 6 ಮಧ್ಯಾಹ್ನ 2:00 ರಿಂದ ಸಂಜೆ 6:00 ರವರೆಗೆ ನಡೆಯಲಿದೆ. ಫೌಂಡೇಶನ್ ಪತ್ರಿಕೆಗಳು 3 ಮತ್ತು 4 ಅನ್ನು ತೆಗೆದುಕೊಳ್ಳುವವರನ್ನು ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳು ಮಧ್ಯಾಹ್ನ 1:45 ರಿಂದ 2:00 ರವರೆಗೆ ಪತ್ರಿಕೆಯನ್ನು ಓದಲು 15 ನಿಮಿಷಗಳ ಕಾಲಾವಕಾಶವಿರುತ್ತದೆ.

ಅರ್ಜಿ ಶುಲ್ಕ ಎಷ್ಟು?

ಭಾರತೀಯ ಕೇಂದ್ರಗಳಲ್ಲಿ CA ಇಂಟರ್ಮೀಡಿಯೇಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದೇ ಗುಂಪು/ಘಟಕಕ್ಕೆ (ಯುನಿಟ್ 2 ಹೊರತುಪಡಿಸಿ ಉಳಿದೆಲ್ಲವೂ) 1,500ರೂ. ಮತ್ತು ಎರಡೂ ಗುಂಪುಗಳಿಗೆ 2,700 ರೂ. ಪಾವತಿಸಬೇಕಾಗುತ್ತದೆ. ವಿದೇಶಿ ಕೇಂದ್ರಗಳಿಗೆ ಅರ್ಜಿ ಶುಲ್ಕಕ್ಕಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ