Indian Coast Guard Recruitment 2023: ಕರಾವಳಿ ಭದ್ರತಾ ಪಡೆ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ
Indian Coast Guard Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಕೋಸ್ಟ್ ಗಾರ್ಡ್ (Indian Coast Guard)ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
Indian Coast Guard Recruitment 2023: ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿರುವ ಖಾಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 71 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಕೋಸ್ಟ್ ಗಾರ್ಡ್ (Indian Coast Guard)ನ ಅಧಿಕೃತ ವೆಬ್ಸೈಟ್ joinindiancoastguard.cdac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಜನರಲ್ ಡ್ಯೂಟಿ (GD)- 40 ಹುದ್ದೆಗಳು
- ಕಮರ್ಷಿಯಲ್ ಪೈಲಟ್ ಲೈಸೆನ್ಸ್ (SSA)- 10 ಹುದ್ದೆಗಳು
- ಟೆಕ್ನಿಕಲ್ (ಮೆಕ್ಯಾನಿಕಲ್)- 6 ಹುದ್ದೆಗಳು
- ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್)- 4 ಹುದ್ದೆಗಳು
- ಲಾ ಎಂಟ್ರಿ- 1 ಹುದ್ದೆ
ಅರ್ಹತಾ ಮಾನದಂಡಗಳು:
- ಜನರಲ್ ಡ್ಯೂಟಿ (GD): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ಪೂರ್ಣಗೊಳಿಸಿರಬೇಕು.
- ಕಮರ್ಷಿಯಲ್ ಪೈಲಟ್ ಲೈಸೆನ್ಸ್ (SSA): ಈ ಹುದ್ದೆಗಳಿಗೆ ಪಿಯುಸಿ, ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಟೆಕ್ನಿಕಲ್ (ಮೆಕ್ಯಾನಿಕಲ್): ನೇವಲ್ ಆರ್ಕಿಟೆಕ್ಚರ್/ಮೆಕ್ಯಾನಿಕಲ್/ಮೆರೈನ್/ಆಟೋಮೋಟಿವ್ ಮೆಕಾಟ್ರಾನಿಕ್ಸ್/
- ಏರೋನಾಟಿಕಲ್/ಏರೋಸ್ಪೇಸ್ ಈ ವಿಭಾಗಗಳಲ್ಲಿ ಇಂಜಿನಿಯರಿಂಗ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್): ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್ ಅ್ಯಂಡ್ ಕಂಟ್ರೋಲ್/ಎಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಶನ್/ಪವರ್ ಇಂಜಿನಿಯರಿಂಗ್/ಪವರ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಪದವಿ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು.
- ಲಾ ಎಂಟ್ರಿ: ಎಲ್ಎಲ್ಬಿ ಹಾಗೂ ಕಾನೂನು ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ:
- ಜನರಲ್ ಡ್ಯೂಟಿ (GD)- ಜುಲೈ 1, 1998 ರಿಂದ ಜೂನ್ 30, 2002ರೊಳಗೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಕಮರ್ಷಿಯಲ್ ಪೈಲಟ್ ಲೈಸೆನ್ಸ್ (SSA)- ಜುಲೈ 1, 1998 ರಿಂದ ಜೂನ್ 30, 2004 ರೊಳಗೆ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಟೆಕ್ನಿಕಲ್ (ಮೆಕ್ಯಾನಿಕಲ್)- ಜುಲೈ 1, 1998 ರಿಂದ ಜೂನ್ 30, 2002 ರೊಳಗೆ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್)- ಜುಲೈ 1, 1998 ರಿಂದ ಜೂನ್ 30, 2002 ರೊಳಗೆ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಲಾ ಎಂಟ್ರಿ- ಜುಲೈ 1, 1994 ರಿಂದ ಜೂನ್ 30, 2002 ರೊಳಗೆ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಇನ್ನು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
ಜನರಲ್ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ.
Also Read: LIC Recruitment 2023: ಎಲ್ಐಸಿ ಉದ್ಯೋಗಾವಕಾಶ: ಪದವೀಧರರು ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 9, 2023
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.