Indian Navy Recruitment 2022: ಭಾರತೀಯ ನೌಕಾಪಡೆಯಲ್ಲಿನ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Navy Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Indian Navy Recruitment 2022: ಭಾರತೀಯ ನೌಕಾಪಡೆಯಲ್ಲಿನ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Navy Recruitment 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 24, 2022 | 7:20 PM

Indian Navy Recruitment 2022: ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಭಾರತೀಯ ನೌಕಾಪಡೆಯು ಸಾಮಾನ್ಯ ಸೇವೆ, ನೌಕಾ ಇನ್ಸ್ಪೆಕ್ಟರೇಟ್ ಕೇಡರ್, ಏರ್ ಟ್ರಾಫಿಕ್ ಕಂಟ್ರೋಲರ್, ವೀಕ್ಷಕ, ಪೈಲಟ್, ಲಾಜಿಸ್ಟಿಕ್ಸ್, ಶಿಕ್ಷಣ ಮತ್ತು ಇಂಜಿನಿಯರಿಂಗ್ ಶಾಖೆಗಳ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Indian Navy Recruitment 2022: ಹುದ್ದೆಗಳ ವಿವರಗಳು: ಸಾಮಾನ್ಯ ಸೇವೆಗಳು [GS(X)] ಹೈಡ್ರೋ ಕೇಡರ್ – 40 ಹುದ್ದೆಗಳು ನೇವಲ್ ಇನ್ಸ್‌ಪೆಕ್ಟರೇಟ್ ಕೇಡರ್ (NAIC) – 6 ಹುದ್ದೆಗಳು ಏರ್ ಟ್ರಾಫಿಕ್ ಕಂಟ್ರೋಲರ್ (ATC) – 6 ಹುದ್ದೆಗಳು ವೀಕ್ಷಕ – 8 ಹುದ್ದೆಗಳು ಪೈಲಟ್ – 15 ಹುದ್ದೆಗಳು ಲಾಜಿಸ್ಟಿಕ್ಸ್ – 18 ಹುದ್ದೆಗಳು ಶಿಕ್ಷಣ – 17 ಹುದ್ದೆಗಳು ಎಂಜಿನಿಯರಿಂಗ್ ಶಾಖೆ (GS) – 45 ಹುದ್ದೆಗಳು ಒಟ್ಟು ಹುದ್ದೆಗಳು – 155

Indian Navy Recruitment 2022ರ ಅರ್ಹತಾ ಮಾನದಂಡಗಳು: ಸಾಮಾನ್ಯ ಸೇವೆಗಳು [GS(X)] ಹೈಡ್ರೋ ಕೇಡರ್- 60% ಅಂಕಗಳೊಂದಿಗೆ B.Tech ಪದವಿ ಹೊಂದಿರಬೇಕು. ನೇವಲ್ ಇನ್‌ಸ್ಪೆಕ್ಟರೇಟ್ ಕೇಡರ್ (NAIC) – ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ 60% ಅಂಕಗಳೊಂದಿಗೆ 10 ನೇ ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಆಟೋಮೇಷನ್ / ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ / ಮೈಕ್ರೋ ಎಲೆಕ್ಟ್ರಾನಿಕ್ಸ್ / ಇನ್‌ಸ್ಟ್ರುಮೆಂಟೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ / ಇನ್‌ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ / ಕಂಟ್ರೋಲ್ ಇಂಜಿನಿಯರಿಂಗ್ / ಪ್ರೊಡಕ್ಷನ್ / ಇಂಡಸ್ಟ್ರಿಯಲ್ ಪ್ರೊಡಕ್ಷನ್ / ಟೆಕ್ನಾಲಜಿ ಜೊತೆಗೆ ಮೆಕ್ಯಾನಿಕಲ್ / ಮೆಕ್ಯಾನಿಕಲ್‌ನಲ್ಲಿ ಬಿಇ ಪದವಿ ಪಡೆದಿರಬೇಕು. ಏರ್ ಟ್ರಾಫಿಕ್ ಕಂಟ್ರೋಲರ್ (ATC) – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ BE/B.Tech ಪದವಿ ಹೊಂದಿರಬೇಕು.. ಅಲ್ಲದೆ, ನೀವು 10 ಮತ್ತು 12 ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವೀಕ್ಷಕ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ BE/B.Tech ಪದವಿ ಹೊಂದಿರಬೇಕು. ಅಲ್ಲದೆ 10 ಮತ್ತು 12 ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪೈಲಟ್- ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ BE/B.Tech ಪಡೆದಿರಬೇಕು. ಅಲ್ಲದೆ 10 ಮತ್ತು 12 ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಲಾಜಿಸ್ಟಿಕ್ಸ್- ಅಭ್ಯರ್ಥಿಗಳು B.Tech, MBA ಮತ್ತು B.Sc/B.Com/B.Sc IT ಪದವಿಯನ್ನು ಹೊಂದಿರಬೇಕು. ಶಿಕ್ಷಣ- ಶೇ.60 ಅಂಕಗಳೊಂದಿಗೆ ಎಂ.ಟೆಕ್ ಪದವಿ ಹೊಂದಿರಬೇಕು.. ಎಂಜಿನಿಯರಿಂಗ್ ಶಾಖೆ (GS) – ಮೆಕ್ಯಾನಿಕಲ್/ಮೆಕ್ಯಾನಿಕಲ್ BE / B.Tech ಪದವಿ ಹೊಂದಿರಬೇಕು.

Indian Navy Recruitment 2022 ರ ಆಯ್ಕೆ ಪ್ರಕ್ರಿಯೆ: ಅರ್ಜಿಗಳ ಪರಿಶೀಲನೆ SSB ಸಂದರ್ಶನ ವೈದ್ಯಕೀಯ ಪರೀಕ್ಷೆ ಅಂತಿಮ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Indian Navy Recruitment 2022 ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಮಾರ್ಚ್ 2022

Indian Navy Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ

ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

(Indian Navy Recruitment 2022 For Officers Post)