Male Nurse recruitment: ಪುರುಷ ನರ್ಸ್‌ಗಳಿಗೆ ಲಕ್ಷಾಂತರ ರೂಪಾಯಿ ಸಂಬಳ – ಎಲ್ಲಿ, ಅರ್ಜಿ ಹಾಕೋದು ಹೇಗೆ?
Male Nurse in UAE apply online: ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದ್ದು, ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ (ಕೆಎಸ್‌ಡಿಸಿ) ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕೆಎಸ್‌ಡಿಸಿ ವೆಲ್ಸ್ಟ್ http://imck.kaushalkar.com ಭೇಟಿ ನೀಡಬಹುದು.
ಬೆಂಗಳೂರು: ರಾಜ್ಯದ ಪುರುಷ ಶುಶ್ರೂಷಕ/ನರ್ಸ್‌ಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಈ) ಉದ್ಯೋಗಾವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳು ‘ಇಂಟರ್‌ನ್ಯಾಷನಲ್ ಮೈಗ್ರೇಷನ್ ಸೆಂಟರ್ ಕರ್ನಾಟಕ’ (ಐಎಂಸಿಕೆ- International Migration Center Karnataka-IMCK) ವೆಬ್‌ಸೈಟ್ ಮೂಲಕ ನೋಂದಣಿಗೆ ಅವಕಾಶ ನೀಡಿದೆ. ಆಯ್ಕೆಯಾದವರಿಗೆ ಮಾಸಿಕ 1.11 ಲಕ್ಷ ರೂಪಾಯಿ ವೇತನ ದೊರೆಯಲಿದೆ ಎಂದು ತಿಳಿಸಿದೆ.
ಅರ್ಜಿ ಸಲ್ಲಿಸಲು ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರಬೇಕು. ಐಸಿಯು, ಎಮರ್ಜೆನ್ಸಿ, ಅರ್ಜೆಂಟ್ ಕೇರ್, ಕ್ರಿಟಿಕಲ್ ಕೇರ್, ಆಯಿಲ್ ಮತ್ತು ಗ್ಯಾಸ್ ನರ್ಸಿಂಗ್ ವಿಭಾಗದಲ್ಲಿ ಕನಿಷ್ಠ 2 ವರ್ಷ ಸೇವೆಯ ಅನುಭವ ಹೊಂದಿದ್ದು, 40 ವರ್ಷ ಮೀರಿರಬಾರದು.
ಡಿಒಎಚ್ ಪಾಸ್ ಅಥವಾ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತರು ಐಎ ಎಂಸಿಕೆ ವೆಬ್‌ಸೈಟ್ http://imck.kaushalkar.com ಮೂಲಕ ನೋಂದಾಯಿಸಬಹುದು. ಅಥವಾ hr.imck@ gmail.com ಈ ಮೇಲ್ಗೆ ಸ್ವವಿವರಗಳನ್ನು ಕಳುಹಿಸಬಹುದು.
ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದ್ದು, ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ (ಕೆಎಸ್‌ಡಿಸಿ) ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕೆಎಸ್‌ಡಿಸಿ ವೆಲ್ಸ್ಟ್ http://imck.kaushalkar.com ಭೇಟಿ ನೀಡಬಹುದು. ಅಥವಾ ವಾಟ್ಸ್ ಅಪ್ 9606492213/ 9606492214 ಮೂಲಕ ವಿವರಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.
Published On - 5:35 pm, Sat, 3 August 24